ಸಿ.ಹರೀಶ್(ಉಪಾಧ್ಯಕ್ಷ), ಎಂ.ಆರ್.ಚಕ್ರಪಾಣಿ(ಪ್ರಧಾನ ಕಾರ್ಯದರ್ಶಿ), ಪಿ.ನಂದೀಶ್ (ಖಜಾಂಚಿ) ಹಾಗೂ ಎಂ.ಪಿ.ವೆಂಕಟೇಶ್(ಕಾರ್ಯದರ್ಶಿ) ಯಾಗಿ ಅವಿರೋಧವಾಗಿ ಆಯ್ಕೆಯಾದರು.
ಮದ್ದೂರು: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಶಿವನಂಜಯ್ಯ ಆಯ್ಕೆಯಾಗಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮೂರು ವರ್ಷಗಳ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಮತ್ತು ನೂತನ ಪದಾಧಿಕಾರಿಗಳ ಆಯ್ಕೆ ಸಂಬಂಧ ನಡೆದ ಚುನಾವಣೆ ವೇಳೆ ಅಧ್ಯಕ್ಷ ಸ್ಥಾನಕ್ಕೆ ಶಿವನಂಜಯ್ಯ ರವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಚಿನಕುರುಳಿ ಲೋಕೇಶ್ ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು.
ಸಿ.ಹರೀಶ್(ಉಪಾಧ್ಯಕ್ಷ), ಎಂ.ಆರ್.ಚಕ್ರಪಾಣಿ(ಪ್ರಧಾನ ಕಾರ್ಯದರ್ಶಿ), ಪಿ.ನಂದೀಶ್ (ಖಜಾಂಚಿ) ಹಾಗೂ ಎಂ.ಪಿ.ವೆಂಕಟೇಶ್(ಕಾರ್ಯದರ್ಶಿ) ಯಾಗಿ ಅವಿರೋಧವಾಗಿ ಆಯ್ಕೆಯಾದರು.
ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಮತ್ತಿಕೆರೆ ಜಯರಾಂ ಮಾತನಾಡಿ, ತಾಲೂಕು ಸಂಘವು ಮಾದರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಮುಂದಿನ ದಿನಗಳಲ್ಲಿ ಸಂಘದ ನಿವೇಶನ, ಕಟ್ಟಡ ನಿರ್ಮಾಣ ಇನ್ನಿತರ ಸೌಲಭ್ಯಗಳನ್ನು ಕಲ್ಪಿಸಲು ಪ್ರಯತ್ನ ನಡೆಸಲೆಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಘವೇಂದ್ರ ಮಾತನಾಡಿ, ಮುಂದಿನ ದಿನಗಳಲ್ಲಿ ವಿಶಾಲವಾದ ಕಟ್ಟಡ ನಿರ್ಮಿಸಿ ಸಭೆ ಮತ್ತು ಇನ್ನಿತರ ಕಾರ್ಯ ಚಟುವಟಿಕೆಗಳು ಸ್ವಂತ ಕಟ್ಟಡದಲ್ಲಿ ನಡೆಯಲು ಯೋಜನೆ ರೂಪಿಸುವಂತೆ ಹೇಳಿದರು.
ಈ ವೇಳೆ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ರಾಜ್ಯ ಸಮಿತಿ ಕಾರ್ಯದರ್ಶಿ ಕೆರಗೋಡು ಸೋಮಶೇಖರ್, ಜಿಲ್ಲಾ ಉಪಾಧ್ಯಕ್ಷರಾದ ಕೆ.ಸಿ.ಮಂಜುನಾಥ್, ರವಿಸಾವಂದಿಪುರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಶಿಧರ್, ಜಿಲ್ಲಾ ಕಾರ್ಯದರ್ಶಿಯಾದ ಎಚ್.ಶಿವರಾಜು, ನಾಗೇಶ್, ಜಿಲ್ಲಾ ನಿರ್ದೇಶಕರಾದ ನಾಗೇಗೌಡ, ಆನಂದ್, ಎಸ್.ಪುಟ್ಟಸ್ವಾಮಿ, ಮಾಜಿ ಅಧ್ಯಕ್ಷ ಅಣ್ಣೂರು ಸತೀಶ್, ಪದಾಧಿಕಾರಿಗಳಾದ ಕೆ.ಶ್ರೀನಿವಾಸ್, ಬಿ.ಟಿ.ಮೋಹನ್‌ಕುಮಾರ್, ತಾಲೂಕು ಸಂಘಟನೆಯ ಪದಾಧಿಕಾರಿಗಳಾದ ವಿ.ಎಸ್.ಪ್ರಭು, ನಾಗಮ್ಮ, ಆನಂದ, ನಾಗರಾಜು, ಅಶೋಕ್‌ಕುಮಾರ್, ಎಸ್.ಕೆ.ಸುಂದರ್‌ರಾಜು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.