ಮದ್ದೂರು:
ನಿಕಟಪೂರ್ವ ಅಧ್ಯಕ್ಷ ಕೆ.ಎಸ್.ದೇವರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ಹೊರತಾಗಿ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೆ.ನಾಗೇಶ್, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜೆ.ವೈ.ಮಂಜುನಾಥ್ ಹಾಗೂ ಕಾರ್ಯದರ್ಶಿ ಚಿಕ್ಕೇಗೌಡ ಸಮ್ಮುಖದಲ್ಲಿ ಬಿ.ಆರ್.ಸಿ ಕೇಂದ್ರದಲ್ಲಿ ಮಾತುಕತೆ ನಡೆಸಿದ ಸಂಘದ ಪದಾಧಿಕಾರಿಗಳು ಮುಂದಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಚುನಾವಣೆವರೆಗೆ ಶಿವಣ್ಣ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲು ತೀರ್ಮಾನಿಸಿದರು.
ಸಂಘದ ನಿರ್ದೇಶಕರಾಗಿ ಕಿರಣ, ಪುಷ್ಪಾ, ಸವಿತಾ, ಜೋಗಿಗೌಡ, ವೈ.ಸಿ.ಪ್ರಸನ್ನ, ಪ್ರಕಾಶ್, ತಿಮ್ಮೆಶ್, ದೇವರಾಜು, ರವಿಚಂದ್ರ, ಪ್ರಸಿಲ್ಲಾ ಜ್ಞಾನಕುಮಾರಿ, ಪ್ರೇಮ ಅವರನ್ನು ಮುಂದುವರಿಸಲು ನಿರ್ಧರಿಸಲಾಯಿತು.ನೂತನ ಅಧ್ಯಕ್ಷ ಶಿವಣ್ಣ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ, ಸಂಘದ ಮಾಜಿ ಅಧ್ಯಕ್ಷ ನಿಂಗರಾಜು, ಮುಖಂಡರಾದ ಜಿ.ಸಿ.ರಮೇಶ್, ಆದಿಯಪ್ಪ, ಹೇಮಾವತಿ, ಜವರಯ್ಯ, ಬಿ.ಎಸ್.ಶ್ರೀನಿವಾಸ್, ರಾಜ್ಯ ಪರಿಷತ್ ಸದಸ್ಯ ಮಂಜು, ನಿರ್ದೇಶಕರಾದ ಮರಿಗೌಡ ಹಾಗೂ ಎನ್.ಜಿ.ಒ.ರವೀಶ್ ಮತ್ತಿತರರು ಅಭಿನಂದಿಸಿದರು.ಇಂದು ಬೇವುಕೊಪ್ಪಲು ಗ್ರಾಮಕ್ಕೆ ಸಿಎಂ ಭೇಟಿ