ಜನಗಣತಿ ಸಮೀಕ್ಷೆಯಲ್ಲಿ ನಯನಜ ಕ್ಷತ್ರಿಯ ಜಾತಿ ಎಂದು ದಾಖಲಿಸುವಂತೆ ಶಿವಪ್ಪ ಮನವಿ

KannadaprabhaNewsNetwork |  
Published : Aug 26, 2025, 01:03 AM IST
25ಕೆಎಂಎನ್ ಡಿ25 | Kannada Prabha

ಸಾರಾಂಶ

ರಾಜ್ಯದಲ್ಲಿ ವಾಸಿಸುತ್ತಿರುವ ನಯನಜ ಕ್ಷತ್ರಿಯ ಸಮಾಜದ ಜನ ಅಪ್ಪಟ್ಟ ಕನ್ನಡಿಗರು. ಕ್ಷೌರಿಕ ವೃತ್ತಿಯನ್ನು ಕುಲಕಸುಬನ್ನಾಗಿಸಿಕೊಂಡಿದ್ದು, ಸಮುದಾಯವನ್ನು ಭಜಂತ್ರಿ, ಹಡಪದ, ಹಜಾಮ ಮತ್ತಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸರ್ಕಾರ ಆರಂಭಿಸಿರುವ ಜಾತಿ ಸಮೀಕ್ಷೆಯಲ್ಲಿ ಸಮಾಜದ ಬಂಧುಗಳು ನಯನಜ ಕ್ಷತ್ರಿಯ ಜಾತಿ ಎಂದೇ ದಾಖಲಿಸುವಂತೆ ತಾಲೂಕು ಅಧ್ಯಕ್ಷ ಕೆ.ಎಂ.ಶಿವಪ್ಪ ಮನವಿ ಮಾಡಿದ್ದಾರೆ.

ಈ ಕುರಿತು ಲಿಖಿತ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ವಾಸಿಸುತ್ತಿರುವ ನಯನಜ ಕ್ಷತ್ರಿಯ ಸಮಾಜದ ಜನ ಅಪ್ಪಟ್ಟ ಕನ್ನಡಿಗರು. ಕ್ಷೌರಿಕ ವೃತ್ತಿಯನ್ನು ಕುಲಕಸುಬನ್ನಾಗಿಸಿಕೊಂಡಿದ್ದು, ಸಮುದಾಯವನ್ನು ಭಜಂತ್ರಿ, ಹಡಪದ, ಹಜಾಮ ಮತ್ತಿತರ ಹೆಸರುಗಳಿಂದ ಗುರುತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಹಜಾಮ ಎನ್ನುವುದು ಕೀಳು ಮತ್ತು ಅವಹೇಳನಕಾರಿ ಪದವೆಂದು ಹೇಳಿ ಕೆಲವರು ಕನ್ನಡಿಗರಾದ ನಯನಜ ಕ್ಷೌರಿಕ ಕುಲದವರನ್ನು ಸವಿತಾ ಸಮಾಜ ಜಾತಿಯಾಗಿ ಪರಿವರ್ತನೆ ಮಾಡಿದ್ದಾರೆ. ಆದರೆ, ಸವಿತಾ ಸಮಾಜ ತೆಲುಗು ಮೂಲ. ಕನ್ನಡಿಗರಾದ ನಯನಜ ಕ್ಷತ್ರೀಯ ಕುಲಕ್ಕೂ ಸವಿತಾ ಸಮಾಜಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಸಂವಿಧಾನಿಕವಾಗಿ ಸವಿತಾ ಸಮಾಜ ಜಾತಿ ಯಾವುದೇ ದಾಖಲೆಗಳಲ್ಲಿ ಇಲ್ಲ. ಆದರೂ ಸಂವಿಧಾನದ ಕಾನೂನು ನಿಯಮಾಳಿಗಳ ಅರಿವಿಲ್ಲದ ಕೆಲವರು ತಮ್ಮ ಜಾತಿ ಬಾಹುಳ್ಯವನ್ನು ಹೆಚ್ಚಿಸಿಕೊಳ್ಳಲು ಜಾತಿ ಸಮೀಕ್ಷೆ ವೇಳೆ ನಯನಜ ಕ್ಷತ್ರಿಯ ಕುಲದವರನ್ನು ಸವಿತಾ ಸಮಾಜ ಎಂದು ದಾಖಲಿಸಿಕೊಳ್ಳುವಂತೆ ಪ್ರೇರೇಪಣೆ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

ಮತ್ತೊಂದು ಜಾತಿ ಹೆಸರನ್ನು ಸಮೀಕ್ಷೆಯಲ್ಲಿ ಬರೆಸಲು ಉತ್ತೇಜಿಸುತ್ತಿದ್ದು, ಸಮುದಾಯದ ಜನರು ಕೆಲವರ ಮಾತಿಗೆ ಮಣಿಯದೇ ಜಾತಿ ಸಮೀಕ್ಷೆ ವೇಳೆ ನಯನಜ ಕ್ಷತ್ರೀಯ ಎಂದೆ ದಾಖಲಿಸಬೇಕು. ಜಾತಿ ಬದಲಾವಣೆ ಗೊತ್ತಾದಾಗ ಕೆಲವರು ನಿಮ್ಮ ವಿರುದ್ಧ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ ಎಂದು ಆರೋಪಿಸಿ ಕೇಸು ದಾಖಲಿಸಿ ಸರ್ಕಾರದ ಉದ್ಯೋಗ ಹಾಗೂ ಪಡೆಯುತ್ತಿರುವ ಸವಲತ್ತುಗಳನ್ನು ಕಳೆದುಕೊಳ್ಳುವ ಸಂಭವವಿದೆ ಎಂದು ಎಚ್ಚರಿಸಿದ್ದಾರೆ.

ಪತ್ರಕರ್ತ ನಾಗೇಗೌಡರಿಗೆ ಸಮಾಜ ಸೇವಾ ಪ್ರಶಸ್ತಿ

ಮಂಡ್ಯ:

ನಗರದ ಕೆಎಚ್‌ಬಿ ಕಾಲೋನಿ ಕೃಷಿಕ್ ನವೋದಯ ಫೌಂಡೇಷನ್ ಸಭಾಂಗಣದಲ್ಲಿ ನಡೆದ ಮಂಡ್ಯ ಜಿಲ್ಲೆಯ ಮಹಾನುಭಾವರು ಕೃತಿ ಬಿಡುಗಡೆ ಸಮಾರಂಭದಲ್ಲಿ ಪತ್ರಕರ್ತ ಕೆ.ಎನ್.ನಾಗೇಗೌಡರಿಗೆ ಮಂಗಲ ಟಿ.ತಿಮ್ಮೇಗೌಡ ಪ್ರತಿಷ್ಟಾನ ಮತ್ತು ಕನ್ನಿಕ ಶಿಲ್ಪ ನವೋದಯ ಟ್ರಸ್ಟ್ ಸಮಾಜ ಸೇವಾ ಪ್ರಶಸ್ತಿ ನೀಡಿ ಅಭಿನಂದಿಸಿತು.

ನಾಗೇಗೌಡರು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ಹೆಣ್ಣು ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪಾಂಡವಪುರದ ಮನೆಯೊಂದರಲ್ಲಿ ಗೌಪ್ಯವಾಗಿ ನಡೆಯುತ್ತಿದ್ದ ಈ ದಂಧೆ ಬಗ್ಗೆ ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದರು.

ಈ ಹಿಂದೆ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಡಿಎಚ್‌ಒ ಡಾ.ಮೋಹನ್ ನೇತೃತ್ವದಲ್ಲಿ ಹಾಗೂ ಮಿಮ್ಸ್ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸನ್ಮಾನಿಸಿ ನಗದು ಪುರಸ್ಕಾರ ನೀಡಿದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ