ಶಾಸಕರ ಜನಪ್ರಿಯತೆಯನ್ನು ಶಿವರಾಂ ಸಹಿಸುತ್ತಿಲ್ಲ

KannadaprabhaNewsNetwork |  
Published : Sep 05, 2026, 01:45 AM IST
4ಎಚ್ಎಸ್ಎನ್4 : ಬೇಲೂರು ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ  ಬಿಜೆಪಿ ತಾಲೂಕು ಅಧ್ಯಕ್ಷ ಕೌರಿ ಸಂಜಯ್  ಮಾತನಾಡಿದರು. | Kannada Prabha

ಸಾರಾಂಶ

ಚನ್ನಕೇಶವಸ್ವಾಮಿ ದೇಗುಲದ ಬಲಿಕಂಭದ ಮುಂದೆ ಶಾಸಕರು ಮಾಡಿದ ಪ್ರಮಾಣವಮ್ನೆ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಬಳಸುವುದು ಸರಿಯಲ್ಲ. ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನ ಹಾಗೂ ಧಾರ್ಮಿಕ ವಿಚಾರಗಳನ್ನು ಸರಿಯಾಗಿ ಪರಾಮರ್ಶೆ ಮಾಡದೇ ಇನ್ನೊನ್ಬತ ತೇಜೋವಧೆಗೆ ಮುಂದಾಗಿದ್ದು, ಇಂತಹ ಸೂಕ್ಷ್ಮ ಧಾರ್ಮಿಕ ವಿಚಾರಗಳನ್ನು ವೈಯುಕ್ತಿಕ ಟೀಕೆಗೆ ಬಳಸಿಕೊಂಡು ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಮಾಜಿ ಸಚಿವ ಶಿವರಾಂ ಮಾಡುತ್ತಿದ್ದಾರೆ ಎಂದರು. ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಸಚಿವ ಬಿ. ಶಿವರಾಂ ಅವರು ಕ್ಷುಲ್ಲಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಧ್ಯಕ್ಷ ಕೌರಿ ಸಂಜಯ್ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬೇಲೂರುಶಾಸಕ ಎಚ್. ಕೆ. ಸುರೇಶ್ ಅವರ ಜನಪ್ರಿಯತೆಯನ್ನು ಸಹಿಸಲಾಗದೇ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮಾಜಿ ಸಚಿವ ಬಿ. ಶಿವರಾಂ ಅವರು ಕ್ಷುಲ್ಲಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಧ್ಯಕ್ಷ ಕೌರಿ ಸಂಜಯ್ ಆಕ್ರೋಶ ವ್ಯಕ್ತಪಡಿಸಿದರು.ಪತ್ರಕರ್ತರ ಸಂಘದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಮಾಜಿ ಸಚಿವ ಬಿ. ಶಿವರಾಂ ಅವರು ಶಾಸಕರ ವಿರುದ್ಧ ನಿರಂತರವಾಗಿ ಟೀಕೆ ಹಾಗೂ ಆರೋಪಗಳನ್ನು ಮಾಡುತ್ತಿದ್ದಾರೆ. ಎತ್ತಿನಹೊಳೆ ಯೋಜನೆ ಸೇರಿದಂತೆ ಕ್ಷೇತ್ರದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ಶ್ರೇಯಸ್ಸನ್ನು ತಮ್ಮದಾಗಿಸಿಕೊಳ್ಳುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಅವರು ಏನೇ ಪ್ರಯತ್ಮ ಪಟ್ಟರೂ ಶಾಸಕರ ಬಗ್ಗೆ ಕ್ಷೇತ್ರದ ಜನರಿಗೆ ವಾಸ್ತವಾಂಶ ತಿಳಿದಿದೆ. ಅಭಿವೃದ್ಧಿ ಕಾರ್ಯಗಳ ಕುರಿತು ಸರ್ಕಾರದ ದಾಖಲೆಗಳೊಂದಿಗೆ ಉತ್ತರಿಸಲು ಶಾಸಕರು ಸಿದ್ಧರಿದ್ದಾರೆ ಎಂದರು.ಚನ್ನಕೇಶವಸ್ವಾಮಿ ದೇಗುಲದ ಬಲಿಕಂಭದ ಮುಂದೆ ಶಾಸಕರು ಮಾಡಿದ ಪ್ರಮಾಣವಮ್ನೆ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳುವುದು ಬಳಸುವುದು ಸರಿಯಲ್ಲ. ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಸ್ಥಾನ ಹಾಗೂ ಧಾರ್ಮಿಕ ವಿಚಾರಗಳನ್ನು ಸರಿಯಾಗಿ ಪರಾಮರ್ಶೆ ಮಾಡದೇ ಇನ್ನೊನ್ಬತ ತೇಜೋವಧೆಗೆ ಮುಂದಾಗಿದ್ದು, ಇಂತಹ ಸೂಕ್ಷ್ಮ ಧಾರ್ಮಿಕ ವಿಚಾರಗಳನ್ನು ವೈಯುಕ್ತಿಕ ಟೀಕೆಗೆ ಬಳಸಿಕೊಂಡು ಜನರ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನವನ್ನು ಮಾಜಿ ಸಚಿವ ಶಿವರಾಂ ಮಾಡುತ್ತಿದ್ದಾರೆ ಎಂದರು. ಜಿಪಂ ಮಾಜಿ ಸದಸ್ಯ ಸಿ.ಎಸ್. ಪ್ರಕಾಶ್ ಮಾತನಾಡಿ, ಮಾಜಿ ಸಚಿವ ಬಿ. ಶಿವರಾಂ ಅವರು ಯಾವುದೇ ಕೆಲಸ ಮಾಡಿದರೂ ಅದು ಜನರ ಅಭಿವೃದ್ಧಿ ಹಾಗೂ ಕ್ಷೇತ್ರದ ಹಿತದೃಷ್ಟಿಯಿಂದ ಆಗಬೇಕೇ ಹೊರತು, ನಾನೇ ಗೆಲ್ಲಬೇಕು, ನಾನೇ ನಾಯಕನಾಗಬೇಕು ಎಂಬ ವೈಯಕ್ತಿಕ ಉದ್ದೇಶದಿಂದ ಆಗಬಾರದು ಎಂದು ಕಿವಿಮಾತು ಹೇಳಿದರು. ಹಳೇಬೀಡು-ಬೇಲೂರು ಯೋಜನಾ ಪ್ರಾಧಿಕಾರದ ಮಾಜಿ ಸದಸ್ಯ ಕೋಟೆ ಶ್ರೀನಿವಾಸ್ ಮಾತನಾಡಿ, ಬೇಲೂರು ಪುರಸಭೆಯಲ್ಲಿ ಕಾಂಗ್ರೆಸ್‌ನ 17 ಸದಸ್ಯರು ಗೆಲುವು ಸಾಧಿಸಿದ್ದರೂ ಅವರನ್ನು ಒಗ್ಗಟ್ಟಾಗಿ ನಿಭಾಯಿಸಲು ಸಾಧ್ಯವಾಗದವರು ಇಡೀ ಕ್ಷೇತ್ರದ ಅಭಿವೃದ್ಧಿಯನ್ನು ಹೇಗೆ ನಿಭಾಯಿಸುತ್ತಾರೆ. ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಾಜಿ ಅಧ್ಯಕ್ಷ ಅಶೋಕ್ ಕೆಳಗಿಳಿಸಿದ ಮೇಲೆ ಎರಡು ವರ್ಷಗಳಿಂದ ಸಾರ್ವಜನಿಕರ ಯಾವುದೇ ಕೆಲಸಗಳು ಪುರಸಭೆ ಯಲ್ಲಿ ಆಗುತ್ತಿಲ್ಲ. 17 ಕಾಂಗ್ರೆಸ್ ಸದಸ್ಯರನ್ನು ಬೇರೆ ಮಾಡಿ ಒಡೆದು ಆಳುವ ನೀತಿ ಮಾಡಿ ಹಳ್ಳಹಿಡಿಸಿದ್ದಾರೆ. ಕಾಂಗ್ರೆಸ್‌ನೊಳಗಿನವರನ್ನೇ ಪರಸ್ಪರ ಜಗಳವಾಡಿಸುವುದು, ನಂತರ ಇತರ ಪಕ್ಷಗಳ ಬಗ್ಗೆ ಟೀಕೆ ಮಾಡುವುದು ಬಿಟ್ಟರೆ ಕ್ಷೇತ್ರದ ಅಭಿವೃದ್ಧಿಗೆ ಇವರ ಕೊಡುಗೆ ಏನು ಎಂಬುದನ್ನು ಜನರು ಪ್ರಶ್ನಿಸಬೇಕಾಗಿದೆ. ಮೊದಲು ತಮ್ಮ ಪಕ್ಷ ಹಾಗೂ ಸ್ಥಳೀಯ ಆಡಳಿತವನ್ನು ಸರಿಯಾಗಿ ನಿಭಾಯಿಸಲಿ ಎಂದು ಟೀಕಿಸಿದರು.ಬಿಜೆಪಿ ಮುಖಂಡರಾದ ಪುಟ್ಟಣ್ಣ, ಶ್ವೇತಾ ನಾಯಕ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪಿಒಪಿ ರಾಸಾಯನಿಕ ಮಿಶ್ರಿತ ಬಣ್ಣದ ಗಣಪತಿ ಮಾರಾಟ ನಿಷೇಧ
ಬಿಸಲವಾಡಿ ಗ್ರಾಮದಲ್ಲಿ ನೂತನ ಶ್ರೀರಾಮ ಮಂದಿರ ಉದ್ಘಾಟನೆ