ಕನ್ನಡಪ್ರಭ ವಾರ್ತೆ ಮುಧೋಳ
ಈ ಕುರಿತು ಕನ್ನಡಪ್ರಭ ಪತ್ರಿಕೆಯೊಂದಿಗೆ ಮಾತನಾಡಿ, ಶಾಮನೂರು ಶಿವಶಂಕರಪ್ಪನವರ ನಿಧನ ನನಗೆ ಅತೀವ ದುಃಖ ತಂದಿದೆ. ಇತ್ತೀಚೆಗೆ ನಾನು ಆಸ್ಪತ್ರೆಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೆ. ನನ್ನೊಂದಿಗೆ ಬಹಳ ಆತ್ಮೀಯರಾಗಿದ್ದ ಶಿವಶಂಕರಪ್ಪರವರು ಪ್ರತಿಯೊಂದು ವಿಚಾರದಲ್ಲೂ ತಂದೆಯಂತೆ ಮಾರ್ಗದರ್ಶನ ನೀಡುತ್ತಿದ್ದರು. ಇಳಿಯ ವಯಸ್ಸಿನಲ್ಲೂ ಅವರ ಜೀವನೋತ್ಸವ ಎಲ್ಲರಿಗೂ ಮಾದರಿಯಾಗಿತ್ತು, ಅವರ ಸಾರ್ಥಕ ಬದುಕು ಎಲ್ಲರಿಗೂ ಪ್ರೇರಣೆ ಮತ್ತು ಅನುಕರಣೀಯವಾಗಿದೆ ಎಂದು ಹೇಳಿದ್ದಾರೆ.
ನಾಡು ಕಂಡ ಅತ್ಯಂತ ಮುತ್ಸದ್ಧಿರಾಜಕಾರಿಣಿ, ಕಲಿತದ್ದು ಕೇವಲ ಹತ್ತನೇ ತರಗತಿಯಾದರೂ ಹೊತ್ತದ್ದು ರಾಜ್ಯಭಾರ. ಅನೇಕ ಉದ್ಯಮಗಳ ಸೃಷ್ಟಿ ಮಾಡುವ ಮೂಲಕ ರಾಜ್ಯದ ಕಲಿತ ಯುವಕರಿಗೆ ಉದ್ಯೋಗ ನೀಡಿ ಬಾಳಿಗೆ ದಾರಿದೀಪವಾಗಿದ್ದರು. ಕಾಂಗ್ರೆಸ್ ಪಕ್ಷ ಪಕ್ಷ ಬಿರುಕು ಬಿಡದ ನಿಟ್ಟಿನಲ್ಲಿ ಸಲಹೆ ಸೂಚನೆಗಳನ್ನ ನೀಡುತ್ತ, ತಾವೂ ಪಕ್ಷಾಂತರ ಮಾಡದೇ ಎಲ್ಲ ಪಕ್ಷದವರ ಜೊತೆಯಲ್ಲಿಯೂ ಪ್ರೀತಿ ವಾತ್ಸಲ್ಯದಿಂದ ಇದ್ದು ಅಜಾತಶತ್ರು ಎನಿಸಿಕೊಂಡಿದ್ದರು. ರಾಜ್ಯಕಂಡ ಪ್ರೇಮಮಯಿ ನಂದಾದೀಪ ನಂದಿಹೋದದ್ದು ಎಲ್ಲರಿಗೂ ದುಃಖವನ್ನ ತಂದಿದೆ. ರಾಜ್ಯದ ಪಕ್ಷಾತೀತ ಹಾಗೂ ಜಾತ್ಯಾತೀತವಾಗಿ ಎಲ್ಲ ಅಭಿಮಾನಿ ಬಳಗಕ್ಕೂ ಅವರ ಕುಟುಂಬಕ್ಕೂ ದು:ಖ ಸಹಿಸುವ ಶಕ್ತಿಯನ್ನ ಕರುಣಿಸಲೆಂದು ಪ್ರಾರ್ಥಿಸುವೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.