ಹಾರಕೂಡ ಜಾತ್ರೆ: ಕುಸ್ತಿಯಲ್ಲಿ ₹1.51 ಲಕ್ಷ ಗೆದ್ದ ಪುಣೆಯ ಶಿವರಾಜ ರಾಕ್ಷೆ

KannadaprabhaNewsNetwork |  
Published : Jan 19, 2024, 01:51 AM IST
ಚಿತ್ರ 18ಬಿಡಿಆರ್53 | Kannada Prabha

ಸಾರಾಂಶ

ಬಸವಕಲ್ಯಾಣ ತಾಲೂಕಿನ ಸುಕ್ಷೇತ್ರ ಹಾರಕೂಡದ ಸದ್ಗುರು ಚನ್ನಬಸವ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಕುಸ್ತಿ ಪಂದ್ಯಾವಳಿಯಲ್ಲಿ ವಿಜೇತರಾದವರಿಗೆ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರು ಪ್ರಶಸ್ತಿ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ತಾಲೂಕಿನ ಸುಕ್ಷೇತ್ರ ಹಾರಕೂಡದ ಸದ್ಗುರು ಚನ್ನಬಸವ ಶಿವಯೋಗಿಗಳ 72ನೇ ಜಾತ್ರಾ ಮಹೋತ್ಸವ ಅಂಗವಾಗಿ ಪೀಠಾಧಿಪತಿಗಳಾದ ಡಾ. ಚನ್ನವೀರ ಶಿವಾಚಾರ್ಯರ ನೇತೃತ್ವದಲ್ಲಿ ಜಂಗಿ ಕುಸ್ತಿ ಸಮಾರಂಭ ಜರಗಿತು.

ಕುಸ್ತಿಯಲ್ಲಿ ಕೊನೆಯ ಕುಸ್ತಿ ವಿಜೇತರಾಗಿ ಕಾಕಾ ಪವರ್ ತಾಲಿಮ್ ಡಬಲ್ ಮಹಾರಾಷ್ಟ್ರ ಕೇಸರಿ ಪುಣೆಯ ಶಿವರಾಜ ರಾಕ್ಷೆಯವರು ಸುಮಾರು 1 ಲಕ್ಷ 51 ಸಾವಿರ ರು. ನಗದು ಬಹುಮಾನ ಗೆದ್ದರು.

ಹರಿಯಾಣಾದ ರವೀಂದ್ರ ಕುಮಾರ ಹರಿಯಾಣ ತಾಲಿಮ್ ಭಾರತ ಕೇಸರಿ ಹರಿಯಾಣ ಇವರು ಕೊನೆಯ ಕುಸ್ತಿಯಲ್ಲಿ ಪರಾಜಿತರಾದರು.

ವಿಜೇತರಿಗೆ ಹಾರಕೂಡದ ಶ್ರೀಗಳು 1.51 ಲಕ್ಷ ರು. ನೀಡಿ ಸತ್ಕರಿಸಿ ಗೌರವಿಸಿದರು. ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ನವದೆಹಲಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಾವಿರಕ್ಕೂ ಅಧಿಕ ಪೈಲ್ವಾನರು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು. ಹಿರೇನಾಗಾಂವ ಜಯಶಾಂತಲಿಂಗ ಸ್ವಾಮಿ, ಅಭಿನವ ಗುರುಲಿಂಗೇಶ್ವರ ಸ್ವಾಮಿ, ಚೆನ್ನಮಲ್ಲ ಸ್ವಾಮಿ ಗಳು ಸಮ್ಮುಖ ವಹಿಸಿದ್ದರು.

ಶಾಸಕ ಶರಣು ಸಲಗರ, ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಅಧ್ಯಕ್ಷರಾದ ಬಸವರಾಜ ಕೋರಕೆ, ಜಗನ್ನಾಥ ಪಾಟೀಲ ಮಂಠಾಳ, ಸಿದ್ರಾಮಪ್ಪ ಗುದಗೆ, ಬಾಬು ಹೊನ್ನಾ ನಾಯಕ, ಗುರುಲಿಂಗಪ್ಪ ಸೈದಾಪುರೆ, ಮೇಘರಾಜ ನಾಗರಾಳೆ, ರಾಜಕುಮಾರ ಸುಗರೆ, ಸದಾನಂದ ಪಾಟೀಲ ಮುಡಬಿ ಮಲ್ಲಿನಾಥ ಹಿರೇಮಠ ಹಾರಕೂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವಿಠ್ಠಲ ಹೂಗಾರ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ ಪೃಥ್ವಿರಾಜ ದೇಗಾಂವ, ಪ್ರಕಾಶ ಬೆಳಮಗೆ, ಸಿದ್ಧಾರೂಡ ಪಾಟಿಲ ಗಿಲಕಿ, ಹುಸೇನ್ ಪಟೇಲ, ಪಂಡಿತರಾವ ಡಾವರೆ, ವಿಜಯಕುಮಾರ ಸಂಗೋಳಗೆ, ಆನಂದರಾವ ಝಳಕೆ, ಖಾಜೆಸಾಬ್ ಮುಲ್ಲಾ, ಸುಭಾಷ ದೇಗಾಂವ, ಪಂಡಿತರಾವ ದೇಗಾಂವ, ರವಿ ರಾಯಜಿ, ಮಹಾಂತಪ್ಪ ಸಿರಗಾಪೂರ, ನಾಗಣ್ಣ ಪಾಟೀಲ, ಗುರು ದೇಗಾಂವ ಗದಲೇಗಾಂವ, ಸಿದ್ರಾಮ ಹೆಗಡೆ, ಶಾಸ್ತ್ರಿ ಝಾಪೂರವಾಡಿ ಮುಂತಾದವರು ಉಪಸ್ಥಿತರಿದ್ದರು.

ಚಿತ್ರ 18ಬಿಡಿಆರ್53

PREV

Recommended Stories

ರೈತರ ಅನುಕೂಲಕ್ಕೆ ಶ್ರಮಿಸಿದ್ದ ದಿ.ಸಿದ್ದು ನ್ಯಾಮಗೌಡ
ಮುಧೋಳದಲ್ಲಿ ಮುಷ್ಕರಕ್ಕೆ ನೋ ರಿಸ್ಪಾನ್ಸ್‌