ದೇಶದ ಉಳಿವಿಗಾಗಿ ಮೋದಿ ಬೆಂಬಲಿಸಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

KannadaprabhaNewsNetwork |  
Published : Jan 19, 2024, 01:51 AM IST
ಚಿತ್ರ ೩ (ಬಿ.ಎಲ್.ಆತ್.ಪಿ)ಬೇಲೂರಿನಲ್ಲಿ ‌ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು‌ ಮಾಜಿ‌ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ವೇದಿಕೆಯಲ್ಲಿನ ಗಣ್ಯರು ಉದ್ಘಾಟನೆ ನಡೆಸಿದರು. | Kannada Prabha

ಸಾರಾಂಶ

ದೇಶದ ೧೪೦ ಕೋಟಿ ಜನರ‌ ಆಶೋತ್ತರಗಳಿಗೆ ಸ್ಪಂದಿಸಿ ದೇಶ ಉಳಿಸುವ ನಾಯಕತ್ವ ವಹಿಸಿದ ನರೇಂದ್ರ ‌ಮೋದಿಯವರಿಗೆ ಇದೆಯೇ ಹೊರತು ಮಮತಾ ಬ್ಯಾನರ್ಜಿ ಅಥವಾ ಕಾಂಗ್ರೆಸ್ ‌ನಾಯಕರಿಗೆ ಈ ಸಾಮರ್ಥ್ಯ ಇದೇಯೇ ಎಂದು ಪ್ರಶ್ನೆ ಮೂಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು. ಬೇಲೂರು ಜೆಡಿಎಸ್‌ ಸಭೆಯಲ್ಲಿ ಗುರುವಾರ ಮಾತನಾಡಿದರು.

ಜೆಡಿಎಸ್ ಕಾರ್ಯಕರ್ತರ ಸಭೆ । ಕಾಂಗ್ರೆಸ್‌ ಉಳಿವಿಗೆ ಜೀವ ತೇಯ್ದಿದ್ದೇನೆ । ರೈತರಿಗಾಗಿ ನಿರಂತರ ಹೋರಾಟಕನ್ನಡಪ್ರಭ ವಾರ್ತೆ ಬೇಲೂರು

ದೇಶದ ೧೪೦ ಕೋಟಿ ಜನರ‌ ಆಶೋತ್ತರಗಳಿಗೆ ಸ್ಪಂದಿಸಿ ದೇಶ ಉಳಿಸುವ ನಾಯಕತ್ವ ವಹಿಸಿದ ನರೇಂದ್ರ ‌ಮೋದಿಯವರಿಗೆ ಇದೆಯೇ ಹೊರತು ಮಮತ ಬ್ಯಾನರ್ಜಿ ಅಥವಾ ಕಾಂಗ್ರೆಸ್ ‌ನಾಯಕರಿಗೆ ಈ ಸಾಮರ್ಥ್ಯ ಇದೇಯೇ ಎಂದು ಪ್ರಶ್ನೆ ಮೂಡಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದರು.

ಪಟ್ಟಣದ ಚನ್ನಕೇಶವ ದೇಗುಲದ ಬಯಲು ರಂಗಮಂದಿರದಲ್ಲಿ‌ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಕಾಂಗ್ರೆಸ್ ಪಕ್ಷದ ಬಗ್ಗೆ ನಾನು ಸಾಕಷ್ಟು ಮಾತನಾಡ ಬಲ್ಲೆ. ಕಾಂಗ್ರೆಸ್ ಪಕ್ಷದ ಉಳಿವಿಗೆ ನಾನು ಜೀವ ತೆತ್ತಿದ್ದೇನೆ. ನಾನು ಕಳೆದ ಬಾರಿ ಲೋಕಸಭೆಗೆ ನಾನು ಸ್ಪರ್ಧಿಸದೆ ಪ್ರಜ್ವಲ್‌ಗೆ ಅವಕಾಶ ನೀಡಿದೆ. ನಾನು ಯಾರಿಗೂ ಅನ್ಯಾಯ ಮಾಡಿಲ್ಲ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಮ್ಮವರೆ ಲಿಂಗೇಶ್ ಸೋಲಿಗೆ ಕಾರಣವಾಗಿದ್ದಾರೆ. ನಾವು ರೈತರ ಮಕ್ಕಳು, ರೈತರಿಗಾಗಿ ನಿರಂತರ ಹೋರಾಟ ನಡೆಸುವೆ. ಮುಸ್ಲಿಮರಿಗೆ ನಾನು ಮೀಸಲಾತಿ ನೀಡಿರುವೆ’ ಎಂದು ಹೇಳಿದರು.

‘ಖರ್ಗೆ ಅವರಿಗೆ ಒಂದು ಬಾರಿ ಬಡ್ತಿ ನೀಡಲು ಪ್ರಯತ್ನ ಮಾಡಿದೆ. ಅದರೆ ಕಾಂಗ್ರೆಸ್ ಬಡ್ತಿ‌ ನೀಡಲು ಹಿಂದೇಟು ಹಾಕಿದೆ. ನಾನು ತಾಲೂಕು, ಹೋಬಳಿ ವ್ಯಾಪ್ತಿಯಲ್ಲಿ ಸಭೆ ನಡೆಸುವೆ. ಚುನಾವಣೆ ಸಂದರ್ಭದಲ್ಲಿ ರೇವಣ್ಣನ ಮೇಲೆ ಆರೋಪ ಮಾಡುತ್ತಿದ್ದಾರೆ. ಹೋರಾಟದ ಬದುಕು ನನ್ನದು, ಎಲ್ಲಾ ಸಮುದಾಯದ ಕಷ್ಟಗಳಿಗೆ ಸ್ಪಂದಿಸಿದ ಸಮರ್ಥ ನಾಯಕ ಮತ್ತು ದೇಶದ ಉಳಿವಿಗಾಗಿ ಮೋದಿ ಬೆಂಬಲಿಸಿ’ ಎಂದರು.

ಮಾಜಿ ಸಚಿವ ಎಚ್.ಡಿ.ರೇವಣ್ಣ ಮಾತನಾಡಿ, ‘ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಕೈ ನಾಯಕರು ಹುನ್ನಾರ ನಡೆಸುತ್ತಿದ್ದಾರೆ. ದೇವೇಗೌಡರಿಗೆ ಮೋದಿ ಎಂತಹ ಗೌರವ ನೀಡುತ್ತಾರೆ. ಕಾಂಗ್ರೆಸ್ ನಾಯಕರಿಗೆ ನಾಚಿಕೆಯಾಗಬೇಕಿದೆ. ನಮಗೆ ಎಷ್ಟು ಸ್ಥಾನಕ್ಕಿಂತ ಮೋದಿ ದೇಶದ ಪ್ರಧಾನಿಯಾಗಬೇಕು ಎಂಬ ಕಾರಣದಿಂದಲೇ ತಾವು ಪೂರ್ಣ ಬೆಂಬಲವನ್ನು ‌ನೀಡಬೇಕಿದೆ. ನಾವು ಕಾಂಗ್ರೆಸ್ ಜೊತೆಗೆ ಸರ್ಕಾರ ನಡೆಸುವ ಬದಲು ಬಿಜೆಪಿಯೊಂದಿಗೆ ಸರ್ಕಾರ ರಚಿಸಿದ್ದರೆ ಖಂಡಿತ ಹಾಸನ ಜಿಲ್ಲೆ ಇನ್ನು ಅಭಿವೃದ್ಧಿಯಾಗುತಿತ್ತು. ಕಾಂಗ್ರೆಸ್ ಒಂದು ಕೃತ್ಯಜ್ಞತೆ ಇಲ್ಲದ ಪಕ್ಷವಾಗಿದೆ. ಕೈ ನಾಯಕರು ತಮ್ಮ ಸ್ವಾರ್ಥ ರಾಜಕೀಯದಿಂದ ದೇಶದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿದೆ. ಈ ಬಾರಿ ಮೋದಿ ದೇಶದಲ್ಲಿ ಮೂರನೇ ಪ್ರಧಾನಿಯಾಗುವ ಮೂಲಕ ಕಾಂಗ್ರೆಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ನಾವು ಬಿಜೆಪಿ ಬೆಂಬಲ ‌ನೀಡಿದ ಮಾತ್ರಕ್ಕೆ ಯಾವ ಕಾರಣಕ್ಕೂ ಅಲ್ಪಸಂಖ್ಯಾತರು, ಹಿಂದುಳಿದ ಮತ್ತು ಪರಿಶಿಷ್ಟರಿಗೆ ಅನ್ಯಾಯ ಮಾಡುವುದಿಲ್ಲ, ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಲೋಕಸಭಾ ಚುನಾವಣೆ ಬಳಿಕ ಸ್ಥಗಿತಗೊಳ್ಳಲಿದೆ’ ಎಂದು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಹಾಸನ ಲೋಕಸಭಾ ಸದಸ್ಯ‌ ಪ್ರಜ್ವಲ್ ರೇವಣ್ಣ ಮಾತನಾಡಿ, ‘ಬೇಲೂರಿನಲ್ಲಿ ನಾವು ಸೋತ್ತಿದ್ದೇವೆಯೇ ಹೊರತು ಸತ್ತಿಲ್ಲ, ನಾನು ೪.೫ ವರ್ಷ ನಡೆಸಿದ ಕೆಲಸದ ಬಗ್ಗೆ ಕಾಂಗ್ರೆಸ್ ಪ್ರಶ್ನೆ ಮಾಡಿದೆ. ವಿವಿಧ ಕೆಲಸಗಳಿಗೆ ೧೦ ಸಾವಿರ ಕೋಟಿ ರು. ಅನುದಾನ ಬಂದಿದೆ. ಅದು ದೇವೇಗೌಡರ ಆರ್ಶಿವಾದದಿಂದ ಮಾತ್ರ ಎಂಬ ವಿಪಕ್ಷಗಳು ತಿಳಿಯಬೇಕಿದೆ. ಮೋದಿ ನಾಯಕತ್ವಕ್ಕೆ ನಾವು ಸಂಪೂರ್ಣ ಬೆಂಬಲ ನೀಡಬೇಕಿದೆ’ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಸಭೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಮಾಜಿ ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ, ಬಿ.ಡಿ.ಚಂದ್ರೇಗೌಡ, ಎಂ.ಎ.ನಾಗರಾಜ್, ರಾಂಪುರ ರಾಜಶೇಖರ, ಸತೀಶ್, ಜಿ.ಟಿ.ಇಂದಿರಾ, ಅಬ್ದುಲ್ ಸುಭಾನ್, ಅದ್ದೂರಿ ಚೇತನ್, ಸಿ.ಎಚ್‌. ಮಹೇಶ್, ಬಿ.ಎಂ.ದೊಡ್ಡವಿರೇಗೌಡ, ಖಾದರ್, ಎಂಕೆಆರ್ ನಾಗೇಶ್, ಕಾಂತರಾಜು, ಮರಿಯಪ್ಪ , ತಜಮಲ್ ಪಾಷ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!