ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಬಸವಲಿಂಗ ಅವಧೂತ ಆಶ್ರಮದಲ್ಲಿ ಏ.೨ ಮತ್ತು ೩ರಂದು ಡಾ. ಬಸವಲಿಂಗ ಅವಧೂತರ ೧೨ನೇ ಜಾತ್ರಾ ಮಹೋತ್ಸವ ಮತ್ತು ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲ ಸಮಾರಂಭ ನಡೆಯಲಿದೆ.
ಚಿಂಚೋಳಿ: ತಾಲೂಕಿನ ದೇಗಲಮಡಿ ಗ್ರಾಮದಲ್ಲಿ ಬಸವಲಿಂಗ ಅವಧೂತ ಆಶ್ರಮದಲ್ಲಿ ಏ.೨ ಮತ್ತು ೩ರಂದು ಡಾ. ಬಸವಲಿಂಗ ಅವಧೂತರ ೧೨ನೇ ಜಾತ್ರಾ ಮಹೋತ್ಸವ ಮತ್ತು ಜಗನ್ಮಾತೆ ಅಕ್ಕಮಹಾದೇವಿ ತೊಟ್ಟಿಲ ಸಮಾರಂಭ ನಡೆಯಲಿದೆ.
ದೇಗಲಮಡಿ ಆಶ್ರಮದಲ್ಲಿ ಏ.೨ರಂದು ಸಂಜೆ ೫.೩೦ಕ್ಕೆ ತೊಟ್ಟಿಲ ಸಮಾರಂಭಕ್ಕೆ ಹಾರಕೂಡ ಮಠದ ಪೀಠಾಧಿಪತಿ ಡಾ. ಚೆನ್ನವೀರ ಶಿವಾಚಾರ್ಯರು ಉದ್ಘಾಟಿಸಲಿದ್ದಾರೆ. ಮಲ್ಲಯ್ಯಗಿರಿ ಆಶ್ರಮದ ಡಾ. ಬಸವಲಿಂಗ ಅವಧೂತರು ಸಾನ್ನಿಧ್ಯ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಶಾಸಕ ಡಾ. ಅವಿನಾಶ ಜಾಧವ್, ಬೀದರ್ ಕಸಾಪ ಅಧ್ಯಕ್ಷ ಸುರೇಶ ಚೆನ್ನಶೆಟ್ಟಿ, ನ್ಯಾಯವಾದಿಗಳಾದ ಶ್ರೀಮಂತ ಕಟ್ಟಿಮನಿ, ಲಕ್ಷ್ಮಣ ಆವಂಟಿ ಆಗಮಿಸಲಿದ್ದಾರೆ.
ಏ.೩ರಂದು ಡಾ. ಬಸವಲಿಂಗ ಅವದೂತರ ೧೨ನೇ ಜಾತ್ರಾ ಮಹೋತ್ಸವ ನಡೆಯಲಿದ್ದು, ಬೆ.೮.೩೦ಕ್ಕೆ ನಡೆಯುವ ಕುಂಭಕಳಸದೊಂದಿಗೆ ಶ್ರೀಶೈಲ ಮಲ್ಲಿಕಾರ್ಜುನ ಸ್ವಾಮಿಯ ಪಲ್ಲಕ್ಕಿಯ ಭವ್ಯ ಮೆರವಣಿಗೆ, ಸಂಜೆ ೪.೩೦ಕ್ಕೆ ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ಅದ್ಧೂರಿಯಾಗಿ ನಡೆಲಿದೆ ಎಂದು ಮಠದ ಭಕ್ತ ಅವಿನಾಶ ಗೋಸುಲ ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ನಡೆಯಲಿರುವುದರಿಂದ ತೆಲಂಗಾಣ, ಆಂಧ್ರ ಮಹಾರಾಷ್ಟ್ರ ನಗರ ಪ್ರದೇಶಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಲಿದ್ದಾರೆ.ಜಾತ್ರೆಗೆ ಬರುವ ಎಲ್ಲ ಭಕ್ತರಿಗೆ ದಾಸೋಹ ವ್ಯವಸ್ಥೆ ಮಾಡಲಾಗಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.