ಕೃಷಿ ಇಲಾಖೆಯಿಂದ ಅಂಗಡಿ ಲೈಸೆನ್ಸ್ ರದ್ದು

KannadaprabhaNewsNetwork |  
Published : Sep 14, 2025, 01:04 AM IST
ಅಕ್ರಮ ಯೂರಿಯಾ ಮಾರಾಟ : ಕೃಷಿ ಇಲಾಖೆಯಿಂದ ಅಂಗಡಿ ಲೈಸೆನ್ಸ್ ರದ್ದು  | Kannada Prabha

ಸಾರಾಂಶ

ತಿಪಟೂರು: ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ಯೂರಿಯಾ ತುಂಬಿದ ಲಾರಿಯೊಂದು ಸರ್ಕಾರ ನಿಗದಿಗೊಳಿಸಿದ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಅಂಗಡಿಯ ಪರವಾನಿಗೆಯನ್ನು ರದ್ದುಗೊಳಿಸಿರುವ ಘಟನೆ ನಡೆದಿದೆ.

ತಿಪಟೂರು: ನಗರದ ಶ್ರೀ ಕಲ್ಲೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ಶುಕ್ರವಾರ ರಾತ್ರಿ ಯೂರಿಯಾ ತುಂಬಿದ ಲಾರಿಯೊಂದು ಸರ್ಕಾರ ನಿಗದಿಗೊಳಿಸಿದ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿದ ಹಿನ್ನಲೆಯಲ್ಲಿ ಕೃಷಿ ಇಲಾಖೆ ಅಂಗಡಿಯ ಪರವಾನಿಗೆಯನ್ನು ರದ್ದುಗೊಳಿಸಿರುವ ಘಟನೆ ನಡೆದಿದೆ.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್ ನೇತೃತ್ವದ ಕೃಷಿ ಇಲಾಖೆ ಅಧಿಕಾರಿಗಳ ತಂಡ ನಗರದ ಕೋಡಿ ಸರ್ಕಲ್‌ನಲ್ಲಿರುವ ಶ್ರೀ ಲಕ್ಷ್ಮೀವೆಂಕಟೇಶ್ವರ ಫರ್ಟಿಲೈಸರ್ಸ್‌ ರಸ ಗೊಬ್ಬರ ಮಾರಾಟ ಅಂಗಡಿಯಲ್ಲಿ ಮೇಲೆ ದಾಳಿ ಮಾಡಿ ಅಂಗಡಿಯಲ್ಲಿ ಸರ್ಕಾರದಿಂದ ನಿಗದಿಪಡಿಸಿರುವ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಅಲ್ಲದೆ ಅಂಗಡಿಯ ಫಲಕದಲ್ಲಿ ಗೊಬ್ಬರದ ಬೆಲೆ ಹಾಗೂ ದಾಸ್ತಾನು ಹಾಕಿರುವುದಿಲ್ಲ. ಸರ್ಕಾರ ನಿಗದಿ ಪಡಿಸಿದ ಸ್ಥಳ ಹೊರತು ಪಡಿಸಿ ಬೇರೆ ಸ್ಥಳದಲ್ಲಿ ವ್ಯಾಪಾರ ಮಾಡಿರುತ್ತಾರೆ. ಕೃಷಿ ಇಲಾಖೆಯ ಅಧಿಕಾರಿಗಳು ಅಂಗಡಿ ಪರಿಶೀಲನೆ ವೇಳೆ ಅಧಿಕಾರಿಗಳಿಗೆ ದಾಖಲೆ ಪತ್ರಗಳನ್ನ ತೋರಿಸದೆ ನಿರ್ಲಕ್ಷ್ಯ ವಹಿಸಿದ್ದು ಗೊಬ್ಬರ ಮಾರಾಟಕ್ಕೆ ಸೂಕ್ತ ರಸೀದಿ ಕೊಟ್ಟಿರುವುದಿಲ್ಲ. ಆದರಿಂದ ಶ್ರೀಲಕ್ಷ್ಮಿವೆಂಕಟೇಶ್ವರ ಫರ್ಟಿಲೈಸರ್ಸ್ ಲೈಸನ್ಸ್ ಅಮಾನತ್ತು ಮಾಡಿದ್ದಾರೆ. ಈ ವೇಳೆ ಮಾಧ್ಯಮದೊಂದಿಗೆ ಮಾಹಿತಿ ನೀಡಿದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪವನ್ ಕುಮಾರ್, ತಾಲೂಕಿನಲ್ಲಿ ರಸಗೊಬ್ಬರದ ಕೊರತೆ ಇಲ್ಲ. ಈಗಾಗಲೇ ಸಹಕಾರ ಸಂಘಗಳು ಹಾಗೂ ಲೈಸೆನ್ಸ್ ಹೊಂದಿರುವ ಗೊಬ್ಬರ ಮಾರಾಟಗಾರರಿಂದ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಪ್ರತಿ ಎಕರೆ ರಾಗಿ ಬೆಳೆಗೆ 22ಕೆ.ಜಿ ಯೂರಿಯಾ ಹಾಕಿದರೆ ಸಾಕು. ಆದರೆ ರೈತರು ವಿಪರೀತ ಗೊಬ್ಬರ ಹಾಕುತ್ತಿರುವುದರಿಂದ ಯಾವುದೇ ಪ್ರಯೋಜನವಿಲ್ಲ. ಬಿತ್ತನೆ ಪ್ರದೇಶಕ್ಕೆ ಅನುಗುಣವಾಗಿ ಗೊಬ್ಬರ ದೊರೆಯುವಂತೆ ಕ್ರಮವಹಿಸಲಾಗುವುದು. ತಾಲೂಕಿನಲ್ಲಿ ನಿಯಮ ಬಾಹಿರವಾಗಿ ಗೊಬ್ಬರ ಮಾರಾಟ ಪ್ರಕರಣಗಳು ಕಂಡುಬಂದರೆ ತಕ್ಷಣ ಕೃಷಿ ಇಲಾಖೆಗೆ ಮಾಹಿತಿ ನೀಡಬೇಕೆಂದು ತಿಳಿಸಿದರು.

PREV

Recommended Stories

ವಿವಿಧ ಬೇಡಿಕೆ ಈಡೇರಿಕೆಗೆ ಪಿಯು ಶಿಕ್ಷಕರ ಆಗ್ರಹ
ಬೆಂಗ್ಳೂರಲ್ಲಿ ಬೀದಿ ನಾಯಿ ಮೇಲೆ ಸಾಮೂಹಿಕ ರೇಪ್‌ ಆರೋಪ!