ರಾಮನಗರ: ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲೀಕನಿಗೆ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರುಪಾಯಿ ಲೂಟಿ ಮಾಡಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸೇವೆಯಿಂದ ಅಮಾನತು ಮಾಡಿದ್ದಾರೆ.
ರಾಮನಗರ: ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲೀಕನಿಗೆ ಸುಳ್ಳು ಕೇಸ್ ದಾಖಲಿಸುವುದಾಗಿ ಬೆದರಿಸಿ ಲಕ್ಷಾಂತರ ರುಪಾಯಿ ಲೂಟಿ ಮಾಡಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸಗೌಡ ಸೇವೆಯಿಂದ ಅಮಾನತು ಮಾಡಿದ್ದಾರೆ.
ಕನಕಪುರದ ಜ್ಯೂಸ್ ಹಾಗೂ ಜೆರಾಕ್ಸ್ ಅಂಗಡಿ ಮಾಲೀಕನಿಂದ ಪಿಎಸ್‌ಐ ಹರೀಶ್ 1.60 ಲಕ್ಷ ರುಪಾಯಿ ವಸೂಲಿ ಮಾಡಿದ್ದಾರೆ ಎನ್ನಲಾಗಿದ್ದು, ಕಳೆದ ಅಕ್ಟೋಬರ್ 29ರಂದು ಅಂದಿನ ಚನ್ನಪಟ್ಟಣ ಟೌನ್ ಪಿಎಸ್‌ಐ ಆಗಿದ್ದ ಹರೀಶ್, ರಾಜೇಶ್ ಅವರ ಅಂಗಡಿ ಬಳಿ ಹೋಗಿ ನೀವು ನಕಲಿ ಆಧಾರ್ ಕಾರ್ಡ್ ಮಾಡುತ್ತೀದ್ದೀರಿ ಎಂದು ಕನಕಪುರದಿಂದ ಚನ್ನಪಟ್ಟಣ ಠಾಣೆಗೆ ಕರೆದುಕೊಂಡು ಬಂದು, ಬೆದರಿಕೆ ಹಾಕಿದ್ದರು. ಯಾವುದೇ ಪ್ರಕರಣ ದಾಖಲಿಸಿಕೊಳ್ಳದೇ, ಪೆಟ್ರೋಲ್ ಬಂಕ್ನಲ್ಲಿ 60 ಸಾವಿರ ಸ್ಕ್ಯಾನ್ ಮಾಡಿಸಿಕೊಂಡಿದ್ದರು ಎಂದು ಅಂಗಡಿ ಮಾಲೀಕ ರಾಜೇಶ್ ಆರೋಪಿಸಿದ್ದಾರೆ.
ಜೊತೆಗೆ ಒಂದು ಲಕ್ಷ ನಗದು ಕೂಡ ರಾಜೇಶ್ ಅವರಿಂದ ಕಸಿದುಕೊಂಡಿದ್ದರು. ಹೀಗಾಗಿ ವಾರದ ಹಿಂದೆ ರಾಜೇಶ್ ಕೇಂದ್ರ ವಲಯ ಐಜಿಪಿ ಅವರಿಗೆ ದೂರು ನೀಡಿದ್ದರು.
ಈ ಬಗ್ಗೆ ಪ್ರಕ್ರಿಯಿಸಿದ ಐಜಿಪಿ ಕಚೇರಿ, ಪ್ರಕರಣದ ತನಿಖೆಯನ್ನು ಸೆನ್ ಠಾಣೆಯ ಡಿವೈಎಸ್ಪಿ ಕೆಂಚೇಗೌಡ ಅವರಿಗೆ ವಹಿಸಿದ್ದು, ಡಿವೈಎಸ್ಪಿ ಕೆಂಚೇಗೌಡ ತನಿಖೆ ಮಾಡಿ ಕೇಂದ್ರವಲಯ ಐಜಿಪಿ ಕಚೇರಿಗೆ ವರದಿ ನೀಡಿದ್ದಾರೆ. ತನಿಖೆಯಲ್ಲಿ ಆರೋಪ ಮೇಲ್ನೋಟಕ್ಕೆ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಎಸ್ಪಿ ಶ್ರೀನಿವಾಸಗೌಡರು ಕಗ್ಗಲಿಪುರ ಠಾಣೆಯಲ್ಲಿ ಪಿಎಸ್‌ಐ ಆಗಿ ಕೆಲಸ ಮಾಡುತ್ತಿದ್ದ ಹರೀಶ್ ಅವರನ್ನು ಅಮಾನತು ಮಾಡಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.