ದಾಖಲೆ ದರಕ್ಕೆ ತಾಪಂ ಅಂಗಡಿ ಮಳಿಗೆ ಹರಾಜು

KannadaprabhaNewsNetwork |  
Published : Jun 20, 2025, 12:34 AM IST
೧೯ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾಗಿರುವ ಎನ್.ಆರ್.ಪುರ ತಾಪಂನ ಅಂಗಡಿ ಮಳಿಗೆ | Kannada Prabha

ಸಾರಾಂಶ

ಬಾಳೆಹೊನ್ನೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ಎನ್.ಆರ್.ಪುರ ತಾಲೂಕು ಪಂಚಾಯಿತಿಯ ಅಂಗಡಿ ಮಳಿಗೆ ಮಾಸಿಕ 55 ಸಾವಿರ ಬಾಡಿಗೆಗೆ ಹರಾಜಾಗಿ ದಾಖಲೆ ಬರೆದಿದೆ.

ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಪಟ್ಟಣದ ಬಸ್ ನಿಲ್ದಾಣದಲ್ಲಿ ಎನ್.ಆರ್.ಪುರ ತಾಲೂಕು ಪಂಚಾಯಿತಿಯ ಅಂಗಡಿ ಮಳಿಗೆ ಮಾಸಿಕ ₹55 ಸಾವಿರ ಬಾಡಿಗೆಗೆ ಹರಾಜಾಗಿ ದಾಖಲೆ ಬರೆದಿದೆ.ಪಟ್ಟಣದ ಬಿ.ಕಣಬೂರು ಗ್ರಾಪಂ ಸಭಾಂಗಣದಲ್ಲಿ ಬುಧವಾರ ತಾಪಂ ಇಒ ನವೀನ್‌ಕುಮಾರ್ ನೇತೃತ್ವದಲ್ಲಿ ನಡೆದ ಹರಾಜಿನಲ್ಲಿ 59 ಜನ ಮಳಿಗೆ ಹರಾಜಿನ ಹಕ್ಕಿಗೆ ಬಿಡ್ ಹಣ ಪಾವತಿಸಿದ್ದರು. ಈ ಪೈಕಿ ಪಟ್ಟಣದ ಹೂವಿನ ವ್ಯಾಪಾರಿ ರಾಜೇಶ್ ಅತೀ ಹೆಚ್ಚು ದರಅಂದರೆ ಮಾಸಿಕ ₹55 ಸಾವಿರಕ್ಕೆ ಹರಾಜು ಕೂಗಿ ಮಳಿಗೆ ಪಡೆದುಕೊಂಡಿದ್ದಾರೆ.

ಮಳಿಗೆ 21*15 ಅಳತೆ ಹೊಂದಿದ್ದು, ತಾಪಂನಿಂದ ₹5-6 ಲಕ್ಷ ವೆಚ್ಚದಲ್ಲಿ ನಿರ್ಮಾಣಮಾಡಲಾಗಿದೆ. ಗ್ರಾಪಂ ವ್ಯಾಪ್ತಿಯಲ್ಲೇ ಈ ಅಳತೆ ಅಂಗಡಿ ಮಳಿಗೆಗೆ ಅತೀ ಹೆಚ್ಚು ಬಾಡಿಗೆ ಇದಾಗಿದ್ದು, ಮಳಿಗೆಗೆ ₹55 ಸಾವಿರ ಬಾಡಿಗೆಯೊಂದಿಗೆ 18% ಜಿಎಸ್‌ಟಿ ವಿಧಿಸಲಿದ್ದು, ಜಿಎಸ್‌ಟಿ ಮೊತ್ತ ₹9900 ಆಗಲಿದೆ. ಮಳಿಗೆ ಒಟ್ಟು ಬಾಡಿಗೆ ಮಾಸಿಕ ₹64900 ರು. ಆಗಲಿದೆ.

ತಾಪಂ ಮಳಿಗೆ ಈ ಮೊತ್ತಕ್ಕೆ ಹರಾಜಾಗುತ್ತಿದ್ದಂತೆ ಪಟ್ಟಣದಲ್ಲಿ ಬಿ.ಕಣಬೂರು ಗ್ರಾಪಂಗೆ ಒಳಪಡುವ ಅಂಗಡಿ ಮುಂಗಟ್ಟುಗಳ ಬಾಡಿಗೆದಾರರು ಹಾಗೂ ಇತರೆ ಖಾಸಗಿ ಬಾಡಿಗೆದಾರರನ್ನು ಆತಂಕಕ್ಕೀಡು ಮಾಡಿದ್ದು, ತಾಪಂ ಮಳಿಗೆ ಹೆಚ್ಚು ದರಕ್ಕೆ ಹರಾಜಾ ಗಿರುವ ಹಿನ್ನೆಲೆಯಲ್ಲಿ ಗ್ರಾಪಂ ಹಾಗೂ ಖಾಸಗಿ ಕಟ್ಟಡಗಳ ಮಾಲೀಕರು ಹ ಇನ್ನು ಮುಂದೆ ಹೆಚ್ಚು ಬಾಡಿಗೆ ವಿಧಿಸಲಿ ದ್ದಾರೆಯೇ ಎಂಬ ಚಿಂತೆಗೆ ಒಳಗಾಗಿದ್ದಾರೆ. ಒಟ್ಟಾರೆ ದಾಖಲೆ ಮೊತ್ತಕ್ಕೆ ತಾಪಂ ಮಳಿಗೆ ಹರಾಜಾಗಿರುವ ವಿಚಾರ ಬಾಳೆಹೊನ್ನೂರು ವ್ಯಾಪ್ತಿಯ ಸಾರ್ವಜನಿಕರ ಬಾಯಲ್ಲಿ ಚರ್ಚೆ ವಿಷಯವಾಗಿದೆ.

೧೯ಬಿಹೆಚ್‌ಆರ್ ೧:

ಬಾಳೆಹೊನ್ನೂರಿನ ಬಸ್ ನಿಲ್ದಾಣದಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಹರಾಜಾಗಿರುವ ಎನ್.ಆರ್.ಪುರ ತಾಪಂನ ಅಂಗಡಿ ಮಳಿಗೆ

PREV

Recommended Stories

ಆಶಾ ಕಾರ್ಯರ್ತೆಯರಿಗೆ ವೇತನ ಹೆಚ್ಚಳ
ಆಟೋ ಚಾಲಕ, ಮಂಗಳಮುಖಿಯ ನಿಸ್ವಾರ್ಥ ಸೇವೆ : ಮುರಿದು ನೇತಾಡುತ್ತಿದ್ದ ಮರದ ಕೊಂಬೆ ತೆರವು