ಕುಷ್ಟಗಿ: ಸಾಹಿತ್ಯ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕುಷ್ಟಗಿ ತಾಲೂಕು ಇದೀಗ ಚುಟುಕು ಸಾಹಿತ್ಯಕ್ಕೂ ಹೊಸ ಮುನ್ನುಡಿ ಬರೆಯಲು ಸಜ್ಜಾಗಿದೆ.
ಚುಟುಕು ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಚಂದಪ್ಪ ಹಕ್ಕಿ ಅವರನ್ನು ಸನ್ಮಾನಿಸಿ ಸಮ್ಮೇಳನದ ಸಿದ್ಧತೆ ಹಾಗೂ ಕಾರ್ಯಕ್ರಮದ ರೂಪುರೇಷೆಗಳ ಕುರಿತು ಚರ್ಚಿಸಿದರು.
ಹಿರಿಯ ಸಾಹಿತಿ ಹನುಮೇಶ ಗುಮಗೇರಿ ಮಾತನಾಡಿ, ಚುಟುಕು ಸಾಹಿತ್ಯ ತನ್ನದೇ ಆದ ವೈಶಿಷ್ಟ್ಯ ಹೊಂದಿದ್ದು, ಕಡಿಮೆ ಪದಗಳಲ್ಲಿ ಗಂಭೀರ ವಿಚಾರ ಆರ್ಥಿಕ ಕಟ್ಟಿಕೊಡುವ ಶಕ್ತಿ ಹೊಂದಿದೆ. ಚುಟುಕು ಸಾಹಿತ್ಯದತ್ತ ಯುವ ಬರಹಗಾರರು ಹೆಚ್ಚಿನ ಆಸಕ್ತಿ ತೋರಬೇಕು. ತಾಲೂಕಿನ ಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನ ಎಲ್ಲರ ಸಹಕಾರದೊಂದಿಗೆ ಮಾದರಿಯಾಗಿ ನಡೆಸಬೇಕು. ಸಮ್ಮೇಳನವು ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ತಾಲೂಕಿನ ಸಾಹಿತ್ಯ ಚಟುವಟಿಕೆಗಳಿಗೆ ಹೊಸ ಚೈತನ್ಯ ನೀಡಬೇಕಾಗಿದೆ.ಹಿರಿಯ ಪತ್ರಕರ್ತ ರವೀಂದ್ರ ಬಾಕಳೆ ಮಾತನಾಡಿ, ಚಂದಪ್ಪ ಹಕ್ಕಿ ಕಸಾಪ ತಾಲೂಕು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಮೂರು ಸಾಹಿತ್ಯ ಸಮ್ಮೇಳನ ನಡೆಸಿದರು ನಡೆಸಿದ ಅನುಭವ. ಎರಡು ಚುಟುಕು ಸಂಕಲನಗಳನ್ನು ರಚಿಸಿರುವ ಅವರು ಚುಟುಕು ಸಾಹಿತ್ಯ ಕ್ಷೇತ್ರದಲ್ಲೂ ಗಮನಾರ್ಹ ಕೆಲಸ ಮಾಡಿದ್ದಾರೆ. ಇಂತಹ ಅನುಭವ ಹೊಂದಿರುವ ಸೂಕ್ತ ವ್ಯಕ್ತಿ ಸರ್ವಾಧ್ಯಕ್ಷ ಆಯ್ಕೆ ಮಾಡಿರುವುದು ಉತ್ತಮ ಬೆಳವಣಿಗೆ. ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಲೆಂಕಪ್ಪ ವಾಲಿಕಾರ ಮಾತನಾಡಿ, ತಾಲೂಕಿನ ಸಾಹಿತ್ಯ ಕ್ಷೇತ್ರದಲ್ಲಿ ವಿವಿಧ ರೀತಿಯ ಸಮ್ಮೇಳನಗಳು ಹಾಗೂ ಡಾ ಕಾರ್ಯಕ್ರಮಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ. ಚುಟುಕು ಸಾಹಿತ್ಯ ಸಮ್ಮೇಳನವು ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವುದರ ಜತೆಗೆ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸುವ ವೇದಿಕೆಯಾಗಬೇಕು. ಸಮ್ಮೇಳನ ಯಶಸ್ವಿಗೆ ಅಗತ್ಯ ಸಹಕಾರ ನೀಡಲಾಯಿತು.
ಕುಷ್ಟಗಿ ತಾಲೂಕಿನ ಪ್ರಪ್ರಥಮ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸುವ ಚುಟುಕು ಸಾಹಿತ್ಯ ಪರಿಷತ್ತು ತಾಲೂಕು ಘಟಕ ಪದಾಧಿಕಾರಿಗಳಿಗೆ ಕೃತಜ್ಞತೆ. ನೀಡಿರುವ ಜವಾಬ್ದಾರಿ ಪ್ರಾಮಾಣಿಕವಾಗಿ ನಿರ್ವಹಿಸಿ ಸಮ್ಮೇಳನ ಅರ್ಥಪೂರ್ಣವಾಗಿ ನಡೆಸಲು ಎಲ್ಲರೊಂದಿಗೆ ಕೈಜೋಡಿಸಲಾಗುವುದು. ಈ ಚುಟುಕು ಸಾಹಿತ್ಯದ ಬೆಳವಣಿಗೆಗೆ ಸಮ್ಮೇಳನ ಹೊಸ ವೇದಿಕೆಯಾಗಲಿದೆ ಎಂದು ಸಮ್ಮೇಳನದ ಸರ್ವಾಧ್ಯಕ್ಷ ಚಂದಪ್ಪ ಹಕ್ಕಿ ತಿಳಿಸಿದ್ದಾರೆ.