ಮಲೇಬೆನ್ನೂರು: ಇಲ್ಲಿಗೆ ಸಮೀಪದ ಕುಂಬಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ತರಗತಿಗೆ ವಿದ್ಯಾರ್ಥಿಗಳ ದಾಖಲಾತಿ ಮಾಡಲು ಉಪನ್ಯಾಸಕರು ಮತ್ತು ಕಾಲೇಜು ಅಭಿವೃದ್ಧಿ ಸಮಿತಿ (ಸಿಬಿಸಿ) ಸದಸ್ಯರು ಮನೆಗಳಿಗೆ ತೆರಳಿದ ಘಟನೆ ನಡೆದಿದೆ.
ಎಸ್ಸೆಸ್ಸೆಲ್ಸಿ ಫಲಿತಾಂಶ ಕಡಿಮೆಯಾದ ಹಿನ್ನೆಲೆ ಈ ಬಾರಿ ಪ್ರಥಮ ಪಿಯು ತರಗತಿಗೆ ದಾಖಲಾತಿ ಕೊರತೆಯಾಗಿದೆ. ಎಸ್‌ಎಸ್‌ಎಲ್‌ಸಿ ಫಲಿತಾಂಶ-೨ ಪ್ರಕಟವಾಗಿದೆ. ಈ ಹಿನ್ನೆಲೆಯಲ್ಲಿ ಜಿಗಳಿ, ಗುಡ್ಡದ ಬೇವಿನಹಳ್ಳಿ, ಜಿಗಳಿ, ನಿಟ್ಟೂರು ಮತ್ತು ಕುಂಬಳೂರು ಗ್ರಾಮಗಳ ಯೋಗೀಶ್, ವಜ್ರ, ಮಾರುತಿ, ಶರತ್, ಭಾಗ್ಯ, ನಯನ, ಗಂಗಾ ಎಂಬ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಈ ಹಿನ್ನೆಲೆ ಈ ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ, ಕಾಲೇಜಿನಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ, ಪ್ರವೇಶ ಪಡೆಯುವಂತೆ ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.ಪ್ರಭಾರ ಪ್ರಾಂಶುಪಾಲ ಹನುಮಂತಯ್ಯ, ಉಪನ್ಯಾಸಕರಾದ ಮರುಳಸಿದ್ದಪ್ಪ, ಲತಾ, ಸಿಬಿಸಿ ಸದಸ್ಯರಾದ ಎನ್.ಕಲ್ಲೇಶ್ ಬಾಬು, ಬೆನ್ನೂರು ರಮೇಶ್, ಎಚ್.ಎಂ. ಸದಾನಂದ, ವೈ.ಶ್ರೀನಿವಾಸಮೂರ್ತಿ ಮತ್ತಿತರರು 3 ಗಂಟೆಗಳ ಕಾಲ ಪೋಷಕರು, ವಿದ್ಯಾರ್ಥಿಗಳ ಮನೆಗಳಿಗೆ ತೆರಳಿ ವಾಪಸ್ ಕಾಲೇಜಿಗೆ ಆಗಮಿಸಿದ್ದಾರೆ. ೨೦೧೮ರಲ್ಲಿಯೂ ಪ್ರಥಮ ಪಿಯುಸಿಗೆ ವಿದ್ಯಾರ್ಥಿಗಳ ಪ್ರವೇಶಾತಿ ಕಡಿಮೆಯಾಗಿತ್ತು. ಆಗಲೂ ಇದೇ ತಂಡ ಮನೆ ಮನೆಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಮಾಡಿಕೊಂಡಿದ್ದು ಸ್ಮರಿಸಬಹುದು.
- - - (** ಈ ಫೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು) -೧೫-ಎಂಬಿಆರ್೧:ಮಲೇಬೆನ್ನೂರು ಸಮೀಪದ ಕುಂಬಳೂರಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ತರಗತಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದ್ದು, ಸಿಬಿಸಿ ಮತ್ತು ಉಪನ್ಯಾಸಕರ ತಂಡ ಎಸ್ಸೆಸ್ಸೆಲ್ಸಿ ಪಾಸಾದ ವಿದ್ಯಾರ್ಥಿಗಳ ಮನೆಗಳಿಗೆ ಭೇಟಿ ನೀಡಿ, ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದರು.