ಪ್ರಾಥಮಿಕ, ಪ್ರೌಢ ಶಾಲೆಯಲ್ಲಿ ಶಿಕ್ಷಕರ ಕೊರತೆ

KannadaprabhaNewsNetwork |  
Published : Jun 03, 2026, 02:15 AM IST
ಸಸಸ | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ 102 ಏಕೋಧ್ಯಾಯ ಶಾಲೆಗಳು ಇದ್ದು, ಈ ವರ್ಷ ಈ ಶಾಲೆಗಳ ಸಂಖ್ಯೆ ಇನ್ನು ಹೆಚ್ಚಳವಾಗಬಹುದು ಎನ್ನಲಾಗಿದೆ.

ಸೋಮರಡ್ಡಿ ಅಳವಂಡಿ ಕೊಪ್ಪಳ

ಜಿಲ್ಲಾದ್ಯಂತ ಶಾಲೆಗಳು ಪ್ರಾರಂಭವಾಗಿರುವುದರಿಂದ ವಿದ್ಯಾರ್ಥಿಗಳು ಸಂಭ್ರಮದಿಂದಲೇ ಸರ್ಕಾರಿ ಶಾಲೆಗೆ ಹಾಜರಾಗಿದ್ದಾರೆ. ಆದರೆ, ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಶಿಕ್ಷಕರ ಕೊರತೆಯೇ ಅರ್ಧದಷ್ಟು ಇರುವುದು ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಾಥಮಿಕ ಶಾಲೆಯಲ್ಲಿ 6243 ಶಿಕ್ಷಕರ ಮಂಜೂರಾತಿ ಹುದ್ದೆ ಇದ್ದರೂ ಶಾಲೆಯಲ್ಲಿರುವ ಶಿಕ್ಷಕರ ಸಂಖ್ಯೆ ಕೇವಲ 3697 ಮಾತ್ರ. ಬರೋಬ್ಬರಿ 2546 ಶಿಕ್ಷಕರು ಕೊರತೆ ಇದೆ. ಹೀಗಾಗಿ, ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಬೀರುತ್ತದೆ. ಇನ್ನು ಪ್ರೌಢ ಶಾಲೆಯಲ್ಲಿಯೂ ಬರೋಬ್ಬರಿ 1090 ಶಿಕ್ಷಕರು ಇದ್ದರು. 646 ಶಿಕ್ಷಕರ ಕೊರತೆ ಇದೆ.

ಹೀಗೆ ಶಾಲೆಯಲ್ಲಿ ಶಿಕ್ಷಕರ ಕೊರತೆಯಿಂದ ಸಮಸ್ಯೆಯಾಗುತ್ತಿದ್ದು, ಕೂಡಲೇ ಅತಿಥಿ ಶಿಕ್ಷಕರನ್ನಾದರೂ ನೇಮಕ ಮಾಡಿಕೊಳ್ಳುವಂತೆ ಪಾಲಕರು ಆಗ್ರಹಿಸಿದ್ದಾರೆ.

ಸರ್ಕಾರ ಜೂ.1 ರಿಂದಲೇ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವಂತೆ ಹೇಳುತ್ತಿದೆಯಾದರೂ ಅದು ಕಾರ್ಯಗತವಾಗುವುದೇ ಇಲ್ಲ. ಇದರಿಂದ ಸರ್ಕಾರಿ ಶಾಲೆಯಲ್ಲಿ ಸಮಸ್ಯೆಯಾಗುತ್ತಿದೆ.

ಏಕೋಪಾಧ್ಯಾಯ ಶಾಲೆ: ಕೊಪ್ಪಳ ಜಿಲ್ಲೆಯಲ್ಲಿ ಕಳೆದ ವರ್ಷ 102 ಏಕೋಧ್ಯಾಯ ಶಾಲೆಗಳು ಇದ್ದು, ಈ ವರ್ಷ ಈ ಶಾಲೆಗಳ ಸಂಖ್ಯೆ ಇನ್ನು ಹೆಚ್ಚಳವಾಗಬಹುದು ಎನ್ನಲಾಗಿದೆ. ವರ್ಗಾವಣೆ ಪ್ರಕ್ರಿಯೆ ನಡೆದಿರುವುದರಿಂದ ಮತ್ತು ವಿದ್ಯಾರ್ಥಿಗಳ ದಾಖಲಾತಿ ನಡೆದಿರುವುದರಿಂದ ಇದರ ಆಧಾರದಲ್ಲಿ ಜೂನ್ ಅಂತ್ಯಕ್ಕೆ ಏಕೋಪಾಧ್ಯಾಯ ಶಾಲೆಗಳ ಸಂಖ್ಯೆ ನಿಗದಿಯಾಗುತ್ತದೆ.

ನಾಲ್ಕು ತರಗತಿಗಳು ಇರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳೇ ಏಕೋಪಾಧ್ಯಾಯ ಶಾಲೆಗಳಾಗಿರುತ್ತವೆ. ಇಲ್ಲಿ, ನಾಲ್ಕು ತರಗತಿ ಮಕ್ಕಳನ್ನು ಒಂದೇ ಕೊಠಡಿಯಲ್ಲಿ ಕೂಡ್ರಿಸಿ ಪಾಠ ಮಾಡಲಾಗುತ್ತದೆ. ಪ್ರತಿ ತರಗತಿಗೂ ನಾಲ್ಕಾರು ಶಿಕ್ಷಕರು ಇರುವ ಕಾಲದಲ್ಲಿ ಏಕೋಪಾಧ್ಯಾಯ ಶಾಲೆಗಳು ಇರುವುದು ಎಷ್ಟು ಸರಿ ಎನ್ನುವುದು ಮಾತ್ರ ಪ್ರಶ್ನಾರ್ಥಕ.

ಅಜಗಜಾಂತರ: ಮಕ್ಕಳ ಸಂಖ್ಯೆಯನ್ನಾಧರಿಸಿ ಶಾಲೆಗೆ ಶಿಕ್ಷಕರನ್ನು ನೀಡುವುದರಿಂದ ಪಾಠ ಮಾಡಲು ಶಿಕ್ಷಕರಿಗೆ ಅಜಗಜಾಂತರ ವ್ಯತ್ಯಾಸವಾಗುತ್ತದೆ. ಕೇವಲ ಮಕ್ಕಳ ಸಂಖ್ಯೆಯನ್ನೇ ಪ್ರಧಾನವಾಗಿ ಪರಿಗಣಿಸಿ ಶಿಕ್ಷಕರನ್ನು ಹಂಚಿಕೆ ಮಾಡಲಾಗುತ್ತದೆ. ಹೀಗಾಗಿ ಏಳು ತರಗತಿಗಳು ಇರುವ ಶಾಲೆಯಲ್ಲಿ ನೂರೈವತ್ತು ಮಕ್ಕಳು ಇದ್ದರೇ ನಾಲ್ಕು ಅಥವಾ ಐದು ಶಿಕ್ಷಕರನ್ನು ಮಾತ್ರ ನೀಡಲಾಗುತ್ತದೆ. ಆಗ, ಕ್ಲಾಸಿಗೆ ಒಬ್ಬ ಶಿಕ್ಷಕರೂ ಇಲ್ಲದಂತಾಗುತ್ತದೆ. ಆಗ ಒಂದರಿಂದ ಮೂರನೇ ತರಗತಿ ಒಟ್ಟಿಗೆ ಕೂಡಿಸಿ ಪಾಠ ಮಾಡಲಾಗುತ್ತದೆ. ಹೀಗಾಗಿಯೇ ಪಾಲಕರು ಎಷ್ಟೇ ಕಷ್ಟವಾದರೂ ಖಾಸಗಿ ಶಾಲೆಗೆ ಮಕ್ಕಳನ್ನು ಕಳುಹಿಸುತ್ತಾರೆ. ಇದರಿಂದ ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ.

ಶಿಕ್ಷಕರ ಕೊರತೆ ಇದ್ದರೂ ಅತಿಥಿ ಶಿಕ್ಷಕರನ್ನು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ. ತರಬೇತಿ ಹೊಂದಿದವರನ್ನೇ ಅತಿಥಿ ಶಿಕ್ಷಕರನ್ನಾಗಿ ನೇಮಕ ಮಾಡಿಕೊಳ್ಳಲಾಗುತ್ತದೆ ಎಂದು ಕೊಪ್ಪಳ ಡಿಡಿಪಿಐ ಸೋಮಶೇಖರಗೌಡ ಪಾಟೀಲ್ ತಿಳಿಸಿದ್ದಾರೆ. ಪ್ರಾಥಮಿಕ ಶಾಲೆ ಮಂಜೂರಾದ ಹುದ್ದೆಗಳು 6243ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು 3697ಖಾಲಿ ಇರುವ ಹುದ್ದೆಗಳು 2546ಪ್ರೌಢ ಶಾಲೆ ಮಂಜೂರಾದ ಹುದ್ದೆಗಳು 1736ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು 1090ಖಾಲಿ ಇರುವ ಹುದ್ದೆಗಳು 646

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹೆದ್ದಾರಿ ಮಧ್ಯದಲ್ಲೇ ಮುರಿನಕಟ್ಟೆ ಶೀಘ್ರ ನಿರ್ಮಾಣ: ಕಾಗೇರಿ
14 ಕ್ವಿಂಟಲ್ ಪಡಿತರ ಅಕ್ಕಿ ಜಪ್ತಿ