ಕನ್ನಡಪ್ರಭ ವಾರ್ತೆ ಮೂಡುಬಿದಿರೆ ಸುಮಾರು 800 ವರ್ಷಗಳ ಇತಿಹಾಸವನ್ನು ಹೊಂದಿರುವ ತಾಲೂಕಿನ ವಿಶೇಷವಾದ ಕ್ಷೇತ್ರ ಶ್ರೀ ಕ್ಷೇತ್ರ ಬನ್ನಡ್ಕದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಮತ್ತು ವರ್ಷಾವಧಿ ನೇಮೋತ್ಸವವು ಸಂಭ್ರಮದಿಂದ ನಡೆಯಲಿದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಯಸ್.ಹೆಗ್ಡೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಮಂಗಳವಾರ ಸಂಜೆ ವಾಸ್ತುಪೂಜೆ, ಗಣಹೋಮ, ಮಾರ್ನಾಡು ಬೀಡಿನಲ್ಲಿ ರಾತ್ರಿ ನವಕ ಪ್ರಧಾನ ಹೋಮ ನಡೆಯಿತು. 3ರಂದು ಬೆಳಗ್ಗೆ ಮಾರ್ನಾಡು ಬೀಡಿನಿಂದ ಶ್ರೀ ಕ್ಷೇತ್ರ ಬನ್ನಡ್ಕಕ್ಕೆ ಬನ್ನಡ್ಕತಾಯಿ ಭಂಡಾರ ತರುವುದು, ಸಾಯಂಕಾಲ ಧ್ವಜಸ್ತಂಭ, ಆದಿವಾಸ ದೈವಗಳ ಬಿಂಬಾದಿವಾಸ-ಮಂಡಲ ರಚನೆ ಕಲಶ ಪೂಜೆ ನಡೆಯಲಿದೆ. ಏಪ್ರಿಲ್ 4ರಂದು ರಾತ್ರಿ ವರ್ಷಾವಧಿ ನೇಮೋತ್ಸವ ಎಂದು ತಿಳಿಸಿದರು.ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನ ಮಠದ ಡಾ. ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಆರ್. ಬಲ್ಲಾಳ್ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ಉಮಾನಾಥ ಕೋಟ್ಯಾನ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಪಡುಮಾರ್ನಾಡು ಗ್ರಾ.ಪಂ. ಅಧ್ಯಕ್ಷ ವಾಸುದೇವ ಭಟ್ ಭಾಗವಹಿಸಲಿದ್ದಾರೆ.
ಸನ್ಮಾನ : ಎಸ್‍ಕೆಎಫ್‍ನ ಆಡಳಿತ ನಿರ್ದೇಶಕ ಡಾ. ರಾಮಕೃಷ್ಣ ಆಚಾರ್, ರಾಜೇಂದ್ರ ಬಲ್ಲಾಳ್ ಕಾರ್ಕಳ, ಅಮರನಾಥ ಶೆಟ್ಟಿ ಹಂಡಿಂಜೆಗುತ್ತು, ದಿನೇಶ್ ಮಾರ್ನಾಡು, ಹರೀಶ್ ಹೆಗ್ಡೆ ಪಡುಮಾರ್ನಡು, ಎಸ್‍ಕೆಡಿಆರ್‍ಡಿಪಿ ಯೋಜನಾಧಿಕಾರಿ ಸುನೀತ ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಅರುಣ್ ಪ್ರಕಾಶ್ ಶೆಟ್ಟಿ, ಅನುವಂಶಿಕ ಆಡಳಿತ ಮೊಕ್ತೇಸರ ಸುಕುಮಾರ್ ಬಲ್ಲಾಳ್ ಪ್ರಧಾನ ಕಾರ್ಯದರ್ಶಿ ಜಗತ್ಪಾಲ್ ಎಸ್. ಹೆಗ್ಡೆ ಮತ್ತು ಕಾರ್ಯದರ್ಶಿ ಹರೀಶ್ ಹೆಗ್ಡೆ ಹಾಜರಿದ್ದರು.