ಮದ್ದೂರು:
ಅಂಕುರಾರ್ಪಣೆ, ಸ್ವಸ್ತಿವಾಚನ, ಧ್ವಜಾರೋಹಣ ಮತ್ತು ರಾತ್ರಿ 8 ಗಂಟೆಗೆ ಶುದ್ಧ ಪುಣ್ಯಾಹ, ಮಹಾಗಣಪತಿ ಪೂಜೆ, ಉಮಾಮಹೇಶ್ವರ, ವರುಣ, ಕಮಲವಾಸ್ತು ಮೃತ್ಯುಂಜಯ ಪೂಜೆ, ಅಷ್ಟ ದಿಕ್ಪಾಲಕ ಪೂಜೆ, ನವಗ್ರಹ ಪೂಜೆ , ಯಜ್ಞ ನಡೆದು, ಗುರುವಾರ ಗಂಗಾಪೂಜೆಗೆ ಮುಂಜಾನೆ 5.30 ರಿಂದ 6-30ರ ಸಮಯದಲ್ಲಿ ಆಲಯ ಪ್ರವೇಶ, ವಿಗ್ರಹ ಶುದ್ಧಿ, ಬೆಳಗ್ಗೆ 8.16 ರಿಂದ 9.30ಕ್ಕೆ ಶ್ರೀ ಮಂಚಮ್ಮದೇವಿಯ ನೂತನ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ, ಗೋಪುರ ಕಳಶ ಸ್ಥಾಪನೆ, ಶ್ರೀಗಣಪತಿ ವಿಗ್ರಹ, ಶ್ರೀಮಾಸ್ತಮ್ಮಹಸ್ತರೇಖೆ ಪ್ರತಿಷ್ಠಾಪನೆ ನಂತರ ಅಭಿಷೇಕ, ಅಷ್ಟೋತ್ತರ ಹೂವಿನ ಅಲಂಕಾರ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಮಧ್ಯಾಹ್ನ 12-30 ರಿಂದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಜರುಗಿತು.
ಶಾಸಕ ಕೆ.ಎಂ.ಉದಯ್, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವು ಗಣ್ಯರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರಾದ ಶಿವರಾಮು ಮಹಾದೇವಮ್ಮ, ಕುಮಾರಸ್ವಾಮಿ, ಯಜಮಾನರಾದ ಮಹೇಶ್, ಮಂಚಣ್ಣ, ಮಹದೇವ, ಕೃಷ್ಣ, ನಂದೀಶ, ಮಲ್ಲೇಶ್, ಗಿರೀಶ್, ಪ್ರಕಾಶ್, ಹಲೋ ಬ್ಲಾಕ್ ಸಂತೋಷ, ವಿನೋದ್ ರಾಜ್, ಧನಂಜಯ, ಮೃತ್ಯುಂಜಯ, ಹರಿಪ್ರಸಾದ್, ಅಡುಗನಹಳ್ಳಿ ಗ್ರಾಮಸ್ಥರು, ಅಕ್ಕ ಪಕ್ಕದ ಗ್ರಾಮಸ್ಥರು ಇದ್ದರು.