ಕನ್ನಡಪ್ರಭ ವಾರ್ತೆ ತಾಳಿಕೋಟೆ
ಕೊಡೇಕಲ್ಲ ಶ್ರೀ ದುರದುಂಡೇಶ್ವರ ಮಠದ ಶಿವಕುಮಾರ ಮಹಾಸ್ವಾಮೀಜಿ ಮಾತನಾಡಿ, ಮಠದ ಲೋಕಾರ್ಪಣೆ ಅಂಗವಾಗಿ ಜನವರಿ ೨೮ರಿಂದ ಪ್ರವಚನ, ಫೆ.೩ರಿಂದ ವಿಶೇಷ ಕಾರ್ಯಕ್ರಮ, ರೈತ ಸಮಾವೇಶ, ವಿಶೇಷ ಉಪನ್ಯಾಸಗಳು ನಡೆಯಲಿವೆ. ಫೆ.೪ರಂದು ಯೋಧರಿಗೆ ಮತ್ತು ಚಬನೂರಿನ ೨೦೦ಕ್ಕೂ ಅಧಿಕ ಸರ್ಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಫೆ.೫ರಂದು ಮಾತೃ ನಮನ ಕಾರ್ಯಕ್ರಮದಲ್ಲಿ ಮಾತೆಯರಿಗೆ ಉಡಿ ತುಂಬುವುದು, ೬ರಂದು ಯುವಜನೋತ್ಸವ ನಡೆಯಲಿದೆ ಎಂದರು.
ಕಡಕೋಳದ ಡಾ.ಶ್ರೀ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಫೆ.೭ರಂದು ಬೆಳಗ್ಗೆ ೮ಕ್ಕೆ ಮಹಾದ್ವಾರದ ಪೂಜೆ, ಹೋಮ-ಹವನ ಪೂಜಾ ಕಾರ್ಯಕ್ರಮಗಳೊಂದಿಗೆ ಅಯ್ಯಾಚಾರ, ಲಿಂಗದೀಕ್ಷೆ, ನಡೆಯಲಿದೆ. ಮಧ್ಯಾಹ್ನ ೨ಕ್ಕೆ ಶ್ರೀಮದ್ ಉಜ್ಜಯಿನಿ ಪೀಠದ ಜಗದ್ಗುರುಗಳ ಅಡ್ಡ ಫಲ್ಲಕ್ಕಿ ಮಹೋತ್ಸವ ನಡೆಯಲಿದೆ. ಸಂಜೆ ೫ಕ್ಕೆ ಧರ್ಮಸಭೆ. ೮ರಂದು ಬೆಳಗ್ಗೆ ೯ಕ್ಕೆ ನೂತನ ಶ್ರೀಮಠ ಹಾಗೂ ಸಭಾ ಭವನದ ಉದ್ಘಾಟನೆ ನಡೆಯಲಿದೆ ಎಂದು ತಿಳಿಸಿದರು.ವಿಜಯಪುರ ಅನುಗ್ರಹ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ.ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ಲೋಕಾರ್ಪಣೆ ಕಾರ್ಯಕ್ರಮದ ೨ ದಿನದ ಪ್ರಸಾದ ಸೇವೆಯ ಜೊತೆಗೆ ಇನ್ನಿತರವಾದ ಸೇವೆಗಳನ್ನು ನಮ್ಮ ಕುಟುಂಬದ ಪರವಾಗಿ ಸಲ್ಲಿಸುತ್ತೇನೆಂದರು.
ಅಥಣಿಯ ಗಚ್ಚಿನಮಠದ ಶಿವಬಸವ ಶ್ರೀ, ದೇವರಹಿಪ್ಪರಗಿ ಜಡಿಸಿದ್ದೇಶ್ವರ ಶ್ರೀ, ಮನಗೂಳಿಯ ಸಂಗನಬಸವ ಶ್ರೀ, ಬ.ಬಾಗೇವಾಡಿಯ ಶಿವಪ್ರಕಾಶ ಶ್ರೀ, ಕೋಲಾರ ಪ್ರಭುಕುಮಾರ ಶ್ರೀ ಮಾತನಾಡಿದರು. ಕಲಕೇರಿ ಶ್ರೀ, ಸಾಸನೂರ ಶ್ರೀ, ವಡವಡಗಿ ಶ್ರೀ, ಪಡೇಕನೂರ ಶ್ರೀ, ಕೆರೂಟಗಿ ಶ್ರೀ, ಗುಳಬಾಳ ಶ್ರೀ, ಸೇರಿದಂತೆ ತಾಲೂಕಿನ ಶ್ರೀಮಠದ ಭಕ್ತಾಧಿಗಳು ಭಾಗವಹಿಸಿದ್ದರು. ನಾವದಗಿ ರಾಜೇಂದ್ರ ಒಡೆಯರ ಶಿವಾಚಾರ್ಯರು ಸ್ವಾಗತಿಸಿದರು. ದೇವರ ಹಿಪ್ಪರಗಿ ಪರದೇಶಿ ಮಠದ ಶಿವಯೋಗಿಗಳು ವಂದಿಸಿದರು.