ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವೆ ಸಮಾಜಕ್ಕೆ ಮಾದರಿ: ಜ.ಕೃಷ್ಣ ದೀಕ್ಷಿತ್ ಶ್ರೀಪಾದ್

KannadaprabhaNewsNetwork |  
Published : Nov 06, 2025, 02:45 AM IST
ಶ್ರೀ ಚಂದ್ರಶೇಖರ ಸ್ವಾಮೀಜಿಯವರ ನಿಸ್ವಾರ್ಥ ಸೇವೆ ಸಮಾಜಕ್ಕೆ ಮಾದರಿ  | Kannada Prabha

ಸಾರಾಂಶ

ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ದೀಪಾವಳಿ, ರಾಜ್ಯೋತ್ಸವ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

ಮೂಲ್ಕಿ: ಜನರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಆಧ್ಯಾತ್ಮಿಕ ವಿಶ್ವಗುರು ಶ್ರೀ ಚಂದ್ರಶೇಖರ ಸ್ವಾಮೀಜಿ ನಿಸ್ವಾರ್ಥ ಸೇವೆ ನಿತ್ಯ ನಿರಂತರವಾಗಿರಲಿ, ಭಕ್ತಿ ಶ್ರದ್ಧೆಯಿಂದ ಜೀವನ ನಡೆಸಿದಲ್ಲಿ ಸಮಾಜವು ನಮ್ಮನ್ನು ಗುರುತಿಸುತ್ತದೆ. ಸ್ವಾಮೀಜಿಯವರು ಕಲಾವಿದರಿಗೆ ಸಂಜೀವಿನಿಯಾಗಿದ್ದಾರೆ ಎಂದು ಒಡಿಶಾ ಹೈಕೋರ್ಟ್‌ ನ್ಯಾಯಾಧೀಶ ಜಸ್ಟೀಸ್ ಕೃಷ್ಣ ದೀಕ್ಷಿತ್ ಶ್ರೀಪಾದ್‌ ಹೇಳಿದ್ದಾರೆ.ಮೂಲ್ಕಿ ಶ್ರೀ ಚಂದ್ರಶೇಖರ ಸ್ವಾಮೀಜಿ ಸೇವಾಶ್ರಮದಲ್ಲಿ ನಡೆದ ದೀಪಾವಳಿ, ರಾಜ್ಯೋತ್ಸವ ಸಂಭ್ರಮದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಸ್ಟೀಸ್ ಕೃಷ್ಣ ದೀಕ್ಷತ್ ಶ್ರೀಪಾದ್‌ ಹಾಗೂ ಅವರ ಪತ್ನಿ ಯೋಗಿನಿ ದಂಪತಿಯನ್ನು ಸೇವಾಶ್ರಮದ ಪರವಾಗಿ ಶ್ರೀ ಚಂದ್ರಶೇಖರ ಸ್ವಾಮೀಜಿ ಗೌರವಿಸಿದರು.ಈ ಸಂದರ್ಭ ಮಾತನಾಡಿದ ಶ್ರೀ ಚಂದ್ರಶೇಖರ ಸ್ವಾಮೀಜಿ, ನ್ಯಾಯಾಲಯದಲ್ಲಿ ಪ್ರಾಮಾಣಿಕತೆಯೊಂದಿಗೆ ನ್ಯಾಯದೇವತೆಯ ರೂಪದಲ್ಲಿ ಜಸ್ಟೀಸ್ ಕೃಷ್ಣ ದೀಕ್ಷಿತ್ ನೀಡಿದ ತೀರ್ಪುಗಳು ಐತಿಹಾಸಿಕ ತೀರ್ಪುಗಳಾಗಿ ಪರಿವರ್ತನೆಯಾಗಿದೆ. ಮೂಲಗೇಣಿದಾರರ ಹಕ್ಕು, ಮಹಿಳೆಯರ ಸ್ವಾಭಿಮಾನದ ಬದುಕಿಗೆ, ಸರ್ಕಾರಿ ಹಸ್ತಕ್ಷೇಪರಹಿತ ಧಾರ್ಮಿಕ ಹಿಂದೂಶ್ರದ್ಧಾಕೇಂದ್ರಗಳು, ಪಿಂಚಣಿದಾರರ, ರಕ್ಷಣಾ ಸಿಬ್ಬಂದಿ ಸವಲತ್ತುಗಳು, ವಿಶ್ವವಿದ್ಯಾನಿಲಯಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ, ಅಪರಾಧಿಗಳ ಮನಃಪರಿರ್ತನೆಯಂತಹ ಮಹತ್ವದ ತೀರ್ಮಾನಗಳು ದೀಕ್ಷಿತ್ ಮೂಲಕ ಜನಮಾನಸದಲ್ಲಿ ಮೂಡಿದೆ ಎಂದರು.

ಅವರ ಸರಳ ವ್ಯಕ್ತಿತ್ವದಿಂದ ಎಲ್ಲರ ವಿಶ್ವಾಸಗಳಿಸಿದ್ದಾರೆ. ತಮ್ಮ ನಯವಿನಯ ನಡೆಯಿಂದ ಮುಂದೊಂದು ದಿನ ಇನ್ನಷ್ಟು ಎತ್ತರದ ಸ್ಥಾನಮಾನ ಪಡೆಯಲಿದ್ದಾರೆ ಎಂದರು.

ಬಜಪೆ ವಿಮಾನ ನಿಲ್ದಾಣದ ಸಿಐಎಸ್ಎಫ್ ಕಾಮೆಂಡರ್ ವಿ.ಎಂ.ಜೋಶಿ ಅವರನ್ನು ಗೌರವಿಸಲಾಯಿತು. ಕಲಾವಿದರಾದ ರವೀಂದ್ರಪ್ರ ಭು, ಕೃಷ್ಣಪ್ರಸಾದ್, ರೇಷ್ಮಾಮಂಜುನಾಥ್, ಮಲ್ಲಿಕಾ ಶೆಟ್ಟಿ, ಅಶೋಕ್ ಸಾವಂತ್ ಅವರನ್ನು ಸನ್ಮಾನಿಸಲಾಯಿತು.

ಸೇವಾಶ್ರಮದ ನಿರ್ದೇಶಕಿ ರಜನಿ ಚಂದ್ರಶೇಖರ್, ವಿಶ್ವನಾಥ್ ಭಟ್, ಉಷಾ ವಿಶ್ವನಾಥ್, ರಾಘವ ಸೂರ್ಯ, ನ್ಯಾಯವಾದಿ ರೋಶನಿ ಚಂದ್ರಶೇಖರ್, ಯುವ ಉದ್ಯಮಿ ರಾಹುಲ್ ಚಂದ್ರಶೇಖರ್ ಮತ್ತಿತರರು ಇದ್ದರು.ಆಶ್ರಮದ ಸಂಚಾಲಕ ಪುನೀತ್ ಕೃಷ್ಣ ಸ್ವಾಗತಿಸಿದರು. ವಕ್ತಾರ ನರೇಂದ್ರ ಕೆರೆಕಾಡು ನಿರೂಪಿಸಿದರು.

PREV

Recommended Stories

ಕಸದಿಂದ ಲಕ್ಷ ಮನೆಗೆ ವಿದ್ಯುತ್ ಪೂರೈಕೆ: ಕರಿಗೌಡ
‘ಶಕ್ತಿ’ಯಿಂದ ಮಹಿಳೆಯರ ಸಾರಿಗೆಯ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆ