ಮಂಡ್ಯ:
ಗ್ರಾಮದ ಮಾರಮ್ಮನ ದೇವಸ್ಥಾನಗಳಾದ ಮುದ್ದಮ್ಮ ದೇವಿ, ಮಾರಮ್ಮ ದೇವಿ, ಶ್ರೀ ದೊಡ್ಡಮ್ಮತಾಯಿ ದೇವಸ್ಥಾನಕ್ಕೆ ಮೊದಲು ಬಾಯಿ ಬೀಗ ಹಾಕಿಕೊಂಡು ತಮಟೆ ನಗಾರಿ ಯೊಂದಿಗೆ ಗ್ರಾಮದ ದೇವಾಲಯಗಳಿಗೆ ತಂಬಿಟ್ಟಿನ ಆರತಿ ಬೆಳಗಿಸಿ ನಂತರ ಗ್ರಾಮ ದೇವತೆಯಾದ
ಶ್ರೀ ದೊಡ್ಡಮ್ಮತಾಯಿ ದೇವಸ್ಥಾನದಲ್ಲಿ ಎಲ್ಲಾ ಸಮುದಾಯದವರು ಒಟ್ಟಿಗೆ ಸೇರಿ ಬಾಯಿ ಬೀಗ ಧರಿಸಿ ಮಹಿಳೆಯರು ಹರಕೆ ತೀರಿಸಿದರು.ಅಮ್ಮನಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗ ಮಾಡಲಾಯಿತು. ಶ್ರೀ ಮಡಿವಾಳ ಮಾಚಿದೇವರ ಸಮುದಾಯದವರು ಬಾಯಿ ಬೀಗ ಧರಿಸಿ ಹರಕೆ ಹೊತ್ತ ಮಹಿಳೆಯರಿಗೆ (ಕಾಲ್ನಡಿಗೆಯಲ್ಲಿ ಬರುವ ಮಹಿಳೆಯರಿಗೆ) ನೆಲಕ್ಕೆ ಮಡಿ ಸೀರೆ ಹಾಸಿ ಸೇವೆ ನೆರವೇರಿಸಿಕೊಟ್ಟರು. ಹಬ್ಬದ ಪ್ರಯುಕ್ತ ವಿಶೇಷವಾಗಿ ಬಂದ ಭಕ್ತಾದಿಗಳಿಗೆ ವಿನಾಯಕ ಗೆಳೆಯರ ಬಳಗದ ವತಿಯಿಂದ ಮಜ್ಜಿಗೆ ಪಾನಕವನ್ನು ವಿತರಿಸಲಾಯಿತು.
ಪಾಂಡವಪುರ:ಪಟ್ಟಣದ ಹಾರೋಹಳ್ಳಿಯ ಶ್ರೀಮಾರಿಯಮ್ಮನ ದೇವಸ್ಥಾನದ ಆವರಣದಲ್ಲಿ ಮಾರಮ್ಮನ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು.
ಸಂಜೆ ತಂಬಿಟ್ಟು ಅರತಿ, ಮಡಿ ಹೊತ್ತ ಮಹಿಳೆಯರು ಮಡಿ ಮೇಲೆ ಗ್ರಾಮದ ಮಾರಮ್ಮ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಬಳಿಕ ಮಾರಮ್ಮ ದೇವಾಲಯದ ಬಳಿ ಸೇರಿ ಸಾಮೂಹಿಕ ಪೂಜೆ ಸಲ್ಲಿಸಿ ಗ್ರಾಮದ ಒಳಿತಿಗಾಗಿ ಪ್ರಾರ್ಥಿಸಿದರು.ಹೆಣ್ಣು ಮಕ್ಕಳು ಮಡಿ ಬಟ್ಟೆಯ ಮೇಲೆ ತಂಬಿಟ್ಟಿನ ಆರತಿ ಇಟ್ಟು ಪೂಜಿಸಿದ ಬಳಿಕ, ಪುರುಷರು ಕುರಿ, ಕೋಳಿ, ಮಡಕೆಗಳನ್ನು ದೇವಸ್ಥಾನದ ಆವರಣದಲ್ಲಿ ಬಲಿ ನೀಡಿ ಗ್ರಾಮದಲ್ಲಿ ಶಾಂತಿಗಾಗಿ ಪ್ರಾರ್ಥಿಸಿದರು. ಈ ವೇಳೆ ಗ್ರಾಮದ ಮುಖಂಡರು, ಯುವಕರು ಭಾಗವಹಿಸಿದ್ದರು. ವಿ.ಸಿ.ಕಾಲನಿ, ಶಾಂತಿನಗರ ಮಹಾಂಕಾಳೇಶ್ವರಿ ದೇವಸ್ಥಾನ ಸೇರಿದಂತೆ ತಾಲೂಕಿನ ವಿವಿಧೆಡೆ ಮಾರಮ್ಮನ ಹಬ್ಬವನ್ನು ಬಹಳ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.