ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಜಾತ್ರಾ ಮಹೋತ್ಸವದ ನಿಮಿತ್ತ ಶ್ರೀಗುರು ಗೋರಕ್ಷನಾಥರ ಪಲ್ಲಕ್ಕಿ ಸೇವೆ ಬನಹಟ್ಟಿ ನಗರದ ಮಹಾದೇವ ದೇವಸ್ಥಾನದಿಂದ ನಗರದ ಪ್ರಮುಖ ಬೀದಿಗಳಲ್ಲಿ ಮೂಲಕ ದತ್ತಾತ್ರೆಯ ಮಂದಿರದ ವರೆಗೆ ನಡೆಯಿತು. ನಂತರ ಮಹಾಮಂಗಳಾರತಿ, ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಮತ್ತು ಮಹಾಪ್ರಸಾದ ನಡೆಯಿತು.
ಈ ವೇಳೆ ರಾವಳ ಸಮಾಜದ ಅಧ್ಯಕ್ಷ ತವನಪ್ಪ ರಾವಳ, ಅಶೋಕ ರಾವಳ, ಗೋರಕನಾಥ ರಾವಳ, ಪರಶುರಾಮ ರಾವಳ, ಮಹಾಂತೇಶ ರಾವಳ, ರವಿ ರಾವಳ, ಯಲ್ಲಪ್ಪ ರಾವಳ, ಉಮೇಶ ರಾವಳ ಸೇರಿದಂತೆ ಶ್ರೀಗೋರಕ್ಷನಾಥ ದೇವಸ್ಥಾನ ಸೇವಾ ಸಮಿತಿಯ ಸರ್ವ ಸದಸ್ಯರು ಇದ್ದರು.