ಸಂಭ್ರಮದಿಂದ ಜರುಗಿದ ಶ್ರೀ ಕಂಬದ ನರಸಿಂಹಸ್ವಾಮಿ ಬ್ರಹ್ಮೋತ್ಸವ

KannadaprabhaNewsNetwork |  
Published : May 22, 2024, 12:51 AM IST
೨೧ಕೆಎಂಎನ್‌ಡಿ-೫ಮಂಡ್ಯ ತಾಲೂಕು ಸಾತನೂರು ಬೆಟ್ಟದಲ್ಲಿ ಶ್ರೀ ಕಂಬದ ನರಸಿಂಹಸ್ವಾಮಿ ಬ್ರಹ್ಮೋತ್ಸವ ಸಹಸ್ರಾರು ಜನರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. | Kannada Prabha

ಸಾರಾಂಶ

ಶ್ರೀಕಂಬದ ನರಸಿಂಹಸ್ವಾಮಿಯವರ ರಥೋತ್ಸವದ ಅಂಗವಾಗಿ ಮೇ ೧೭ರಿಂದ ೨೨ರವರೆಗೆ ದೇವಾಲಯದ ಸಮೀಪ ಭಾರೀ ಜನಗಳ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ವತಿಯಿಂದ ಉತ್ತಮ ರಾಸುಗಳಿಗೆ ಸೂಕ್ತ ಬಹುಮಾನವನ್ನೂ ಘೋಷಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕಿನ ಸಾತನೂರು ಬೆಟ್ಟದ ಶ್ರೀಕಂಬದ ನರಸಿಂಹಸ್ವಾಮಿ ಮೂರನೇ ವರ್ಷದ ಬ್ರಹ್ಮ ರಥೋತ್ಸವ ಮಂಗಳವಾರ ಸಹಸ್ರಾರು ಮಂದಿ ಭಕ್ತಾದಿಗಳ ಸಮ್ಮುಖಧಲ್ಲಿ ಸಂಭ್ರಮ ಸಡಗರದಿಂದ ನಡೆಯಿತು.

ರಥೋತ್ಸವಕ್ಕೂ ಮುನ್ನ ದೇವರಿಗೆ ವಿಶೇಷ ಪೂಜೆ, ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಮಧ್ಯಾಹ್ನ ೧೨ ಗಂಟೆಗೆ ಸಲ್ಲುವ ಅಭಿಜಿನ್ ಲಗ್ನದಲ್ಲಿ ಶ್ರೀಸ್ವಾಮಿಯವರ ರಥೋತ್ಸವ ನಡೆಸಲಾಯಿತು.

ಶ್ರೀಕಂಬದ ನರಸಿಂಹಸ್ವಾಮಿಯವರ ರಥೋತ್ಸವದ ಅಂಗವಾಗಿ ಮೇ ೧೭ರಿಂದ ೨೨ರವರೆಗೆ ದೇವಾಲಯದ ಸಮೀಪ ಭಾರೀ ಜನಗಳ ಜಾತ್ರೆ ಹಮ್ಮಿಕೊಳ್ಳಲಾಗಿತ್ತು. ದೇವಸ್ಥಾನ ವ್ಯವಸ್ಥಾಪನಾ ಸಮಿತಿ ವತಿಯಿಂದ ಉತ್ತಮ ರಾಸುಗಳಿಗೆ ಸೂಕ್ತ ಬಹುಮಾನವನ್ನೂ ಘೋಷಿಸಲಾಗಿದೆ.

ಶ್ರೀನರಸಿಂಹ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯ

ಕನ್ನಡಪ್ರಭ ವಾರ್ತೆ ಮದ್ದೂರುಪಟ್ಟಣದ ಪುರಾಣ ಪ್ರಸಿದ್ಧ ಶ್ರೀಉಗ್ರ ನರಸಿಂಹಸ್ವಾಮಿ ದೇವಾಲಯದಲ್ಲಿ ಮಂಗಳವಾರ ಶ್ರೀನರಸಿಂಹ ಜಯಂತಿ ಅಂಗವಾಗಿ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು.

ಸ್ಥಳೀಯರು ಸೇರಿದಂತೆ ಬೆಂಗಳೂರು, ಮೈಸೂರು ಮಂಡ್ಯ ಹಾಗೂ ಹಲವಡೆಗಳಿಂದ ಆಗಮಿಸಿದ್ದ ಅಸಂಖ್ಯಾತ ಭಕ್ತಾದಿಗಳು ದೇವರ ದರ್ಶನ ಪಡೆದು ಧನ್ಯತಾಭಾವ ಮೆರೆದರು.ನರಸಿಂಹ ಜಯಂತಿ ಅಂಗವಾಗಿ ಮುಂಜಾನೆ ಉಗ್ರ ನರಸಿಂಹಸ್ವಾಮಿ ದೇವರ ಮೂಲ ವಿಗ್ರಹಕ್ಕೆ ಪಂಚಾಮೃತ ಅಭಿಷೇಕದ ನಂತರ ಪುಷ್ಪಾಲಂಕಾರ ಸೇವೆಯೊಂದಿಗೆ ಮಹಾಮಂಗಳಾರತಿ ನೆರವೇರಿಸಲಾಯಿತು.

ದೇವರ ದರ್ಶನಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಧಾನ ಅರ್ಚಕ ನಾರಾಯಣಚಾರ್ ನರಸಿಂಹ ಜಯಂತಿ ಮಹತ್ವವನ್ನು ಮನನ ಮಾಡಿಕೊಟ್ಟರು. ಪ್ರಹಲ್ಲಾದನ ಭಕ್ತಿಯ ಪರಾಕಾಷ್ಠೆ ಯನ್ನು ಜಗತ್ತಿಗೆ ತೋರಿಸಲೆಂದೇ ವಿಷ್ಣು ದೇವರು ತಾನೇ ಮನುಷ್ಯ, ಮೃಗ ಸೇರಿ ನರಸಿಂಹನಾದನು. ಹಗಲು ರಾತ್ರಿ ತೊರೆದು ಮುಸ್ಸಂಜೆಯ ವೇಳೆಗೆ ಭಗವಂತ ಕಂಬದಿಂದ ಉದ್ಭವಿಸಿದ ಯಾವ ಅಸ್ತ್ರ ಶಸ್ತ್ರಗಳಿಲ್ಲದೆ ಕೈ ಉಗು ರಿನ್ನಿಂದಲೇ ಹಿರಣ್ಯ ಕಶ್ಯಪ ನನ್ನು ಸಂಹಾರಗೈದ ಹೀಗಾಗಿ ಈ ದಿನವನ್ನು ನರಸಿಂಹ ಜಯಂತಿ ಎಂದು ಆಚರಿಸಲಾಗುತ್ತಿದೆ ಎಂದು ನಾರಾಯಣಚಾರ್ ವಿವರಿಸಿದರು.ದೇವಾಲಯದಲ್ಲಿ ಪೂಜಾ ಕಾರ್ಯಗಳು ನೆರವೇರಿದ ನಂತರ ಭಕ್ತಾಧಿಗಳಿಗೆ ತೀರ್ಥ ಪ್ರಸಾದ ಬಳಿಕ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

PREV

Recommended Stories

ಧರ್ಮಸ್ಥಳ: ಬಂಗ್ಲೆಗುಡ್ಡದಲ್ಲಿ ಮತ್ತೆರಡು ತಲೆಬುರುಡೆ ಪತ್ತೆ
ದಸರಾ : ಬೆಂಗಳೂರು ನಗರದಿಂದ ವಿವಿಧೆಡೆ ವಿಶೇಷ ರೈಲು