ಕನ್ನಡಪ್ರಭ ವಾರ್ತೆ ಮಂಗಳೂರು
ಉರ್ವ ಶ್ರೀ ಮಾರಿಯಮ್ಮ ದೇವಸ್ಥಾನದಲ್ಲಿ ಡಿ. 25 ಮತ್ತು 26ರಂದು ಗ್ರಾಮ ಕ್ಷೇಮ ಮತ್ತು ಲೋಕ ಕಲ್ಯಾಣಾರ್ಥವಾಗಿ ಹಾಗೂ ಸಾನಿಧ್ಯ ಶ್ರೇಯೋಭಿವೃದ್ಧಿಗಾಗಿ ‘ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ’ ನಡೆಯಲಿದೆ.ಕ್ಷೇತ್ರದ ತಂತ್ರಿವರ್ಯರಾದ ಕೋಡಿಕಲ್ ಶ್ರೀ ಸುಬ್ರಹ್ಮಣ್ಯ ತಂತ್ರಿ ಅವರ ನೇತೃತ್ವದ ಪೌರೋಹಿತ್ವದಲ್ಲಿ ಎರಡು ದಿನ ಕ್ಷೇತ್ರದಲ್ಲಿ ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗದ ವೈದಿಕ ವಿಧಿ-ವಿಧಾನಗಳು ನಡೆಯಲಿದೆ. ಈ ಮಹಾಮಂತ್ರ ಯಾಗವು ವಿಶಿಷ್ಠವಾದ ಯಾಗವಾಗಿದ್ದು, ಮಹಾದೇವಿಗೆ ತುಂಬಾ ಪ್ರಿಯವಾದ ಶ್ರೇಷ್ಠ ಯಾಗವೆನಿಸಿದೆ ಎಂದು ದೇವಸ್ಥಾನದ ಆಡಳಿತ ಮೊಕ್ತೇಸರ ಲಕ್ಷ್ಮಣ್ ಅಮೀನ್ ಕೋಡಿಕಲ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಡಿ.25ರಂದು ಬೆಳಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ವೈದಿಕ ಕಾರ್ಯಕ್ರಮ, 24 ತೆಂಗಿನಕಾಯಿ ಹೋಮ, ಪಂಚದುರ್ಗಾ ಮಹಾಯಾಗ, ಮೃತ್ಯುಂಜಯ ಆರಾಧನೆ, ಹೋಮ ಪೂರ್ಣಾಹುತಿ, ಶ್ರೀ ದೇವರ ಮಹಾಪೂಜೆ, ಸಂಜೆ 5.30ಕ್ಕೆ ಶ್ರೀ ಮಹಾದೇವಿ ಸಹಸ್ರನಾಮ ಹೋಮ, ದೀಪಾರಾಧನೆ, ವಿಶೇಷ ಸಾನಿಧ್ಯಕ್ಕಾಗಿ ಪುಷ್ಪಾರ್ಚನೆ ಆರಾಧನೆ, ಸಪ್ತಶತೀ ಪಾರಾಯಣ, ಪೂರ್ಣಾಹುತಿ, ರಾತ್ರಿಯ ಮಹಾಪೂಜೆ ನಡೆಯಲಿದೆ ಎಂದರು.ಡಿ.24ರಂದು ಮಧ್ಯಾಹ್ನ 2ರಿಂದ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ, ರಾತ್ರಿ 8ರಿಂದ ಎನ್ನನೇ ಕಥೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಡಿ.25ರಂದು ಬೆಳಗ್ಗೆ 9ರಿಂದ ಲಲಿತಸಹಸ್ರನಾಮ ಪಾರಾಯಣ, ಬೆಳಗ್ಗೆ 11ರಿಂದ ಸಂಜೆ 7ರವರೆಗೆ ಜಿಲ್ಲೆಯ ಆಯ್ದ ತಂಡಗಳಿಂದ ಹರಿನಾಮ ಸಂಕೀರ್ತನೆ, 26ರಂದು ಬೆಳಗ್ಗೆ 9ರಿಂದ ಲಲಿತ ಸಹಸ್ರನಾಮ ಪಾರಾಯಣ, ಮಧ್ಯಾಹ್ನ 12.30ರಿಂದ ಯಕ್ಷ ತೆಲಿಕೆ ಹಾಸ್ಯ ಕಾರ್ಯಕ್ರಮ, ರಾತ್ರಿ 8ರಿಂದ ತುಳು ಹಾಸ್ಯ ನಾಟಕ ಆಂಟೀ ಅಂಕಲ್ ಪ್ರದರ್ಶನವಾಗಲಿದೆ ಎಂದು ಹೇಳಿದರು.ಡಿ.26ರಂದು ಬೆಳಗ್ಗೆ 7ರಿಂದ ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ ಪ್ರಾರಂಭ, ಬೆಳಗ್ಗೆ 10.30ರಿಂದ ಮಹಾಯಾಗದ ಪೂರ್ಣಾಹುತಿ, ಶ್ರೀದೇವಿಗೆ ಮಹಾ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಪಲ್ಲಪೂಜೆ, ಮಹಾ ಅನ್ನಸಂರ್ತಣೆ, ಸಂಜೆ 6.30ರಿಂದ ಶ್ರೀದೇವಿಗೆ ಮಹಾರಂಗಪೂಜೆ, ಶ್ರೀದೇವಿಯ ದರ್ಶನ ಸೇವೆ, ದೀಪೋತ್ಸವ, ಶ್ರೀಮನ್ಮಹಾರಥೋತ್ಸವ, ಮಹಾಪ್ರಸಾದ ವಿತರಣೆ ನೆರವೇರಲಿದೆ ಎಂದು ಲಕ್ಷ್ಮಣ್ ಅಮೀನ್ ಕೋಡಿಕಲ್ ತಿಳಿಸಿದರು.ಮಂಗಳೂರು ಏಳು ಪಟ್ಣ ಮೊಗವೀರ ಸಂಯುಕ್ತ ಸಭಾ ಅಧ್ಯಕ್ಷ ಲೋಕೇಶ್ ಸುವರ್ಣ ಕುದ್ರೋಳಿ, ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಉಪಾಧ್ಯಕ್ಷ ಮೋಹನ್ ಬೆಂಗ್ರೆ, ಕರ್ನಾಟಕ ಪರ್ಸೀನ್ ಮೀನುಗಾರರ ಸಂಘ ಅಧ್ಯಕ್ಷ ಅನಿಲ್‌ಕುಮಾರ್ ಬೊಕ್ಕಪಟ್ಣ, ಶ್ರೀ ಮಾರಿಯಮ್ಮ ನವಾಕ್ಷರಿ ಮಹಾಮಂತ್ರ ಯಾಗ ಸಮಿತಿ ಸಂಚಾಲಕ ಗೌತಮ್ ಸಾಲ್ಯಾನ್ ಕೋಡಿಕಲ್, ಮಂಗಳೂರು ಏಳುಪಟ್ಣ ಮೊಗವೀರ ಸಂಯುಕ್ತ ಸಭಾ ಪ್ರಧಾನ ಕಾರ್ಯದರ್ಶಿ ಜಗದೀಶ್ ಬಂಗೇರ ಬೋಳೂರು, ಯಶವಂತ ಬೋಳೂರು ಇದ್ದರು.