ಕಳೆದ ೫೦೦ ವರ್ಷಗಳಿಂದ ಅಂತರ್ಗತವಾಗಿದ್ದ ರಾಷ್ಟ್ರೀಯತೆಯ ಭಕ್ತಿ ಇಂದು ಭವ್ಯ ಶ್ರೀರಾಮ ಮಂದಿರದ ನಿರ್ಮಾಣದೊಂದಿಗೆ ರಾಷ್ಟ್ರೀಯ ಭಾವವಾಗಿ ಹೊರಹೊಮ್ಮಿದೆ.
ಅಂಕೋಲಾ:
ಕಳೆದ ೫೦೦ ವರ್ಷಗಳಿಂದ ಅಂತರ್ಗತವಾಗಿದ್ದ ರಾಷ್ಟ್ರೀಯತೆಯ ಭಕ್ತಿ ಇಂದು ಭವ್ಯ ಶ್ರೀರಾಮ ಮಂದಿರದ ನಿರ್ಮಾಣದೊಂದಿಗೆ ರಾಷ್ಟ್ರೀಯ ಭಾವವಾಗಿ ಹೊರಹೊಮ್ಮಿದೆ ಎಂದು ಆರ್‌ಎಸ್‌ಎಸ್ ಹಿರಿಯ ಪ್ರಚಾರಕ ಸು. ರಾಮಣ್ಣ ಅಭಿಪ್ರಾಯ ವ್ಯಕ್ತಪಡಿಸಿದರು.ಅವರು ತಾಲೂಕಿನ ಬಾಸಗೋಡದ ಸರಯೂಬನದಲ್ಲಿ ಜ್ಞಾನ ಸತ್ರದ ರೂವಾರಿ, ವಕೀಲ ನಾಗರಾಜ ನಾಯಕ ಏರ್ಪಡಿಸಿದ್ದ ೧೩ನೇ ವರ್ಷದ ವಿಚಾರ ಸಂಕಿರಣ ಮತ್ತು ಶ್ರೀರಾಮ ತಾರಕ, ಹವನ ಕಾರ್ಯಕ್ರಮದಲ್ಲಿ ಶ್ರೀರಾಮ ರಾಷ್ಟ್ರೀಯತೆಯ ಮೂರ್ತ ರೂಪ ವಿಷಯದ ಕುರಿತು ಉಪನ್ಯಾಸ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಶಿರಡಿ ಸಾಯಿಬಾಬಾ ಮಂದಿರದ ರೂವಾರಿ ಕೆ. ದಿವಾಕರ ಶೆಟ್ಟಿ, ಪ್ರಭು ಶ್ರೀರಾಮಚಂದ್ರ ನಮ್ಮೆಲ್ಲರಿಗೂ ಆದರ್ಶಯುತವಾದ ಬದುಕಿನ ಪಾಠ ಕಲಿಸಿಕೊಟ್ಟಿದ್ದಾನೆ ಎಂದರು.ಜ್ಞಾನ ಸತ್ರದ ರೂವಾರಿ ನಾಗರಾಜ ನಾಯಕ ಮಾತನಾಡಿ, ವಿಚಾರ ಸಂಕಿರಣ ಹಾಗೂ ಶ್ರೀರಾಮ ತಾರಕ ಹವನದಲ್ಲಿ ಭಾಗಿ ಆದವರನ್ನು ಸ್ಮರಿಸಿಕೊಂಡರು.ಈ ವೇಳೆ ಉಡುಪಿಯ ಶಿರಡಿ ಸಾಯಿಬಾಬಾ ಮಂದಿರದ ರೂವಾರಿ ಕೆ. ದಿವಾಕರ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಸಮರ್ಪಿಸಿದ ಹೊರೆ ಕಾಣಿಕೆ ಪುಸ್ತಕ ವಿತರಿಸಲಾಯಿತು. ಆನಂದು ಭಾಗವತ ಹಾಗೂ ತಂಡದವರು ಯಕ್ಷಗಾನ ಹಾಡಿನ ಮೂಲಕ ಪ್ರಾರ್ಥಿಸಿದರು. ಎಲ್.ಎಸ್. ಫರ್ನಾಂಡಿಸ್, ಜಯರಾಮ ನಾಯಕ ಸೂರ್ವೆ, ದಿನೇಶ ವಾಳ್ಕೆ, ಸತ್ಯಾನಂದ ನಾಯಕ, ಗುರುಪ್ರಸಾದ ನೀಲಕಂಠ ನಾಯಕ, ಗುರುರಾಜ ನಾಯಕ ಬೇಲೆಕೇರಿ, ಮಂಗಲಾ ಅರವಿಂದ ನಾಯಕ, ರಾಮಚಂದ್ರ ನಾಯಕ ಬಾಸಗೋಡ ಪುಸ್ತಕ ಪ್ರಸಾದವನ್ನು ಸಾಂಕೇತಿಕವಾಗಿ ಪಡೆದುಕೊಂಡರು. ಶಿಕ್ಷಕ ರಾಜೇಶ ನಾಯಕ ಸೂರ್ವೆ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಮುಖ್ಯಾಧ್ಯಾಪಕ ಗೋಪಾಲ ನಾಯಕ ವಂದಿಸಿದರು. ಶ್ರೀರಾಮ ತಾರಕ ಹವನದಲ್ಲಿ ಸಹಸ್ರಾರು ಭಕ್ತರು ಭಾಗಿಯಾಗಿ ಧನ್ಯತೆ ಮೆರೆದರು.ವೆಂಕಣ್ಣ ನಾಯಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಭು ಶ್ರೀರಾಮನನ್ನು ರಾಷ್ಟ್ರ ಪುರುಷ ಎಂದು ಅಂತಃಕರಣದಿಂದ ಸ್ವೀಕರಿಸಲಾಗಿದ್ದು ಸಂವಿಧಾನದಲ್ಲಿ ಸೇರ್ಪಡೆಯಾಗುವ ಸುಸಮಯ ಕೂಡಿಬಂದಿದೆ ಎಂದು ಸು. ರಾಮಣ್ಣ ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.