ಶ್ರೀಧರ ಪಾಂಡಿ ಸಂಸ್ಮರಣೆ, ಪ್ರಶಸ್ತಿ, ಪುರಸ್ಕಾರ ಪ್ರದಾನ

KannadaprabhaNewsNetwork |  
Published : Nov 04, 2026, 01:45 AM IST
ಶ್ರೀಧರ ಪಾಂಡಿ ಸಂಸ್ಮರಣೆ ,  ಪ್ರಶಸ್ತಿ, ಪುರಸ್ಕಾರ ಪ್ರದಾನ | Kannada Prabha

ಸಾರಾಂಶ

ಜೈನ ಧರ್ಮದ 24 ತೀರ್ಥಂಕರರ ಕಥಾನಕಗಳು ಯಕ್ಷಗಾನದ ಮೂಲಕ ಮತ್ತೆ ಮತ್ತೆ ಪ್ರದರ್ಶನಗೊಳ್ಳಬೇಕು. ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ಯಕ್ಷಗಾನ ಅತ್ಯಂತ ಶ್ರೇಷ್ಠ ಕಲೆಯಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.

ಮೂಡುಬಿದಿರೆ : ಜೈನ ಧರ್ಮದ 24 ತೀರ್ಥಂಕರರ ಕಥಾನಕಗಳು ಯಕ್ಷಗಾನದ ಮೂಲಕ ಮತ್ತೆ ಮತ್ತೆ ಪ್ರದರ್ಶನಗೊಳ್ಳಬೇಕು. ಧರ್ಮದ ಪ್ರಚಾರ ಮತ್ತು ಪ್ರಸಾರಕ್ಕೆ ಯಕ್ಷಗಾನ ಅತ್ಯಂತ ಶ್ರೇಷ್ಠ ಕಲೆಯಾಗಿದೆ ಎಂದು ಮೂಡುಬಿದಿರೆ ಜೈನ ಮಠದ ಡಾ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.ಜೈನ್ ಕಾಶಿ ಟ್ರಸ್ಟ್ ಹಾಗೂ ಎಂ. ಶ್ರೀಧರ ಪಾಂಡಿ ಸಂಸ್ಮರಣಾ ಸಮಿತಿ ಸಹಯೋಗದಲ್ಲಿ ನಡೆದ ಎಂ. ಶ್ರೀಧರ ಪಾಂಡಿ ಅವರ 15ನೇ ಸಂಸ್ಮರಣೆ ಮತ್ತು ಪ್ರಶಸ್ತಿ, ಪುರಸ್ಕಾರ ಪ್ರದಾನ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಜೈನ ಧರ್ಮದ ಕಥಾನಕಗಳಲ್ಲಿ ಸತ್ಯ, ತತ್ವ ಮತ್ತು ಸೌಂದರ್ಯಕ್ಕೆ ಮಹತ್ವವಿದೆ ಎಂದರು.ಯಕ್ಷಗಾನವು ಕರಾವಳಿಯ ಪ್ರಮುಖ ಕಲೆಯಾಗಿದ್ದು, ಕೇಳುವಿಕೆ ಮತ್ತು ನೋಡುವಿಕೆ ಎರಡರಲ್ಲೂ ರಸಾನುಭವ ನೀಡುತ್ತದೆ. ಜ್ಞಾನಕ್ಕೆ ಮಹತ್ವ ನೀಡುವ ಕರಾವಳಿ ಭಾಗದಲ್ಲಿ ಎಲ್ಲ ಸಮುದಾಯದವರೂ ಯಕ್ಷಗಾನವನ್ನು ಒಪ್ಪಿಕೊಂಡಿದ್ದಾರೆ ಎಂದು ನುಡಿದರು.ಕಾಶಿ ಟ್ರಸ್ಟ್ ಮತ್ತು ಆರೋಗ್ಯ ವೃದ್ಧಿ ಬ್ರ್ಯಾಂಡ್ ಸಹಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀಧರ ಪಾಂಡಿ ಸಂಸ್ಮರಣಾ ಗೌರವ ಪ್ರಶಸ್ತಿಯನ್ನು ಯಕ್ಷಗಾನ ಅರ್ಥಧಾರಿ ಮುನಿರಾಜ ರೆಂಜಾಳ ಅವರಿಗೆ ಪ್ರದಾನ ಮಾಡಲಾಯಿತು. ಶ್ರೀಧರ ಪಾಂಡಿ ಸಂಸ್ಮರಣಾ ಗೌರವ ಮರಣೋತ್ತರ ಸನ್ಮಾನವನ್ನು ಪ್ರಸಾದನ ಕಲಾವಿದ ದಿ. ದಾಮೋದರ ಶೆಟ್ಟಿಗಾರ್ ಅವರಿಗೆ ಸಲ್ಲಿಸಲಾಯಿತು. ಅವರ ಪುತ್ರ ಪ್ರಶಸ್ತಿ ಸ್ವೀಕರಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರತೀಕ್ ಜೈನ್ ಇವರ್ತೂರು ಮತ್ತು ವಿಕಾಸ್ ಜೈನ್ ಇವರ್ತೂರು ಅವರಿಗೆ ಪುರಸ್ಕಾರ ನೀಡಲಾಯಿತು.ಯಕ್ಷಗಾನ ವಿದ್ವಾಂಸ ಡಾ. ಕೆ. ಎಂ. ರಾಘವ ನಂಬಿಯಾರ್, ಡಾ. ಆಳ್ವಾಸ್ ಪಾರಂಪರಿಕ ಔಷಧ ಸಂಶೋಧನಾ ಕೇಂದ್ರದ ಸುಬ್ರಹ್ಮಣ್ಯ ಪದ್ಯಾಣ, ನಿವೃತ್ತ ಪ್ರಾಂಶುಪಾಲ ಕೆ. ಗುಣಪಾಲ ಕಡಂಬ, ಡಾ. ಉದಯ ಕುಮಾರ್ ಇವರ್ತೂರು, ಬಸದಿಗಳ ಮೊಕ್ತೇಸರ ಪಟ್ಟಶೆಟ್ಟಿ ಎಂ. ಸುಧೇಶ್ ಕುಮಾರ್, ಎ. ಸುಧೇಶ್ ಕುಮಾರ್ ಬೆಟ್ಕೇರಿ ಹಾಗೂ ಕಾರ್ಯಕ್ರಮದ ಸಂಯೋಜಕ ಶ್ರೀಕಾಂತ್ ಪಾಂಡಿ ಉಪಸ್ಥಿತರಿದ್ದರು.ನವೀನ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ನಾಗವರ್ಮ ಸನ್ಮಾನಪತ್ರ ವಾಚಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಫೋಟೋಗಳನ್ನು ಆಧರಿಸಿ ಮಹಿಳೆಯ ಆದಾಯ ನಿರ್ಧರಿಸಲಾಗದು: ಕೋರ್ಟ್‌
13ರಂದು ಮೆಟ್ರೋ ಗುಲಾಬಿ ಮಾರ್ಗ ಉದ್ಘಾಟನೆ