ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಶ್ರೀಕೃಷ್ಣ ಪರಮಾತ್ಮ ಸದಾಕಾಲ ನೊಂದವರ ಧ್ವನಿಯಾಗಿ ಕಾರ್ಯನಿರ್ವಹಿಸಿದ್ದರು. ಪ್ರತಿವರ್ಷ ಭಕ್ತಿ, ಶ್ರದ್ಧೆಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬಂದಿದೆ. ಎಲ್ಲಾ ವರ್ಗಗಳ ಶ್ರೀಕೃಷ್ಣನ ಭಕ್ತರು ಈ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದು, ಮೆರವಣಿಗೆಯಲ್ಲಿ ಭಾಗವಹಿಸಿ ಶ್ರೀಕೃಷ್ಣ ಮೇಲಿನ ಅಪಾರವಾದ ಗೌರವ, ಭಕ್ತಿಯನ್ನು ಸಮರ್ಪಿಸುತ್ತಾ ಬಂದಿದ್ದಾರೆ ಎಂದು ಹೇಳಿದರು.
ಬೆಳಗ್ಗೆ 11ಗಂಟೆಗೆ ಆರಂಭವಾದ ಮೆರವಣಿಗೆ ಮಧ್ಯಾಹ್ನ 2ಕ್ಕೆ ಮುಕ್ತಾಯವಾಯಿತು. ತಾಲೂಕು ಯಾದವ ಸಂಘದ ಅಧ್ಯಕ್ಷ ಟಿ.ರವಿಕುಮಾರ್, ಹಿರಿಯ ಮುಖಂಡ ಸಿ.ವೀರಭದ್ರಬಾಬು, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ, ನಗರಸಭಾ ಸದಸ್ಯ ವೈ.ಪ್ರಕಾಶ್, ಸಾಕಮ್ಮ, ಎಂ.ಜೆ.ರಾಘವೇಂದ್ರ, ಬಿ.ಟಿ.ರಮೇಶ್‌ಗೌಡ, ಕೆ.ವೀರಭದ್ರಪ್ಪ, ಜಿ.ಟಿ.ಶಶಿಧರ, ಶ್ರೀನಂದಗೋಕುಲ ಸೇವಾ ಸಮಿತಿ ಅಧ್ಯಕ್ಷ ವೈ.ಶ್ರೀನಿವಾಸ್, ಎಚ್.ಮಹಲಿಂಗಪ್ಪ, ವೈ.ಕಾಂತರಾಜ್, ವಿ.ಅಪ್ಪುವೀರೇಶ್, ಕೆಂಪಮಂಜ, ದಾಸಪ್ಪರರಂಗಣ್ಣ, ಈ.ವೀರೇಶ್, ಇಂಡಸ್‌ಚಿಕ್ಕಣ್ಣ, ಮಂಜಣ್ಣ, ಜಗನ್ನಾಥ ಸೇರಿ ಅಪಾರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.