ದಿ.ಸಿದ್ದಲಿಂಗ ಶ್ರೀಗಳು ಶಿಕ್ಷಣ ಕ್ರಾಂತಿಯ ರುವಾರಿ: ಬಂಡೇರ

KannadaprabhaNewsNetwork |  
Published : Feb 16, 2024, 01:47 AM IST
ಚಿತ್ತಾಪುರ ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಲಿಂ. ಸಿದ್ದಲಿಂಗ ಸ್ವಾಮಿಗಳ ೪ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ಲಿಂ. ರಾವೂರ ಸಿದ್ದಲಿಂಗ ಸ್ವಾಮಿಗಳು ನಮ್ಮ ಸಮಾಜಕ್ಕೆ ಧರ್ಮಕ್ಕಿಂತ ಹೆಚ್ಚಾಗಿ ಶಿಕ್ಷಣದ ಅವಶ್ಯಕತೆ ಇದೆ ಎನ್ನುವುದನ್ನು ಪ್ರಬಲವಾಗಿ ಅರಿತುಕೊಂಡಿದ್ದ ಅವರು, ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದರು.

ಕನ್ನಡಪ್ರಭ ವಾರ್ತೆ ಚಿತ್ತಾಪುರ

ಲಿಂ. ರಾವೂರ ಸಿದ್ದಲಿಂಗ ಸ್ವಾಮಿಗಳು ಧಾರ್ಮಿಕತೆಗಿಂತ ಹೆಚ್ಚಾಗಿ ಶಿಕ್ಷಣದ ಕಡೆ ಒಲವು ಬೆಳೆಸಿಕೊಂಡಿದ್ದರು. ಹೀಗಾಗಿ ಅವರನ್ನು ಶೈಕ್ಷಣಿಕ ಕ್ರಾಂತಿಯ ರೂವಾರಿಯನ್ನಬಹುದು ಎಂದು ಸಚ್ಚಿದಾನಂದ ಪ್ರೌಢ ಶಾಲೆಯ ಮುಖ್ಯಶಿಕ್ಷಕ ಚನ್ನಬಸಪ್ಪ ಬಂಡೇರ ಹೇಳಿದರು.

ತಾಲೂಕಿನ ರಾವೂರ ಗ್ರಾಮದ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ಲಿಂ. ಸಿದ್ದಲಿಂಗ ಸ್ವಾಮಿಗಳ ೪ನೇ ವರ್ಷದ ಪುಣ್ಯಸ್ಮರಣೆ ನಿಮಿತ್ತ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.

ನಮ್ಮ ಸಮಾಜಕ್ಕೆ ಧರ್ಮಕ್ಕಿಂತ ಹೆಚ್ಚಾಗಿ ಶಿಕ್ಷಣದ ಅವಶ್ಯಕತೆ ಇದೆ ಎನ್ನುವುದನ್ನು ಪ್ರಬಲವಾಗಿ ಅರಿತುಕೊಂಡಿದ್ದ ಅವರು, ಶಿಕ್ಷಣ ಸಂಸ್ಥೆಗಳನ್ನು ಹುಟ್ಟುಹಾಕಿದರು. ಲಕ್ಷಾಂತರ ಬಡ ವಿದ್ಯಾರ್ಥಿಗಳ ಬಾಳಿನಲ್ಲಿ ಶಿಕ್ಷಣದ ಸೂರ್ಯ, ರಶ್ಮಿ ಬೆಳಗುವಂತೆ ಮಾಡಿದರು. ಅವರ ಕನಸಿನ ಶೈಕ್ಷಣಿಕ ಸಾಮ್ರಾಜ್ಯ ಆಕಾಶದ ಎತ್ತರಕ್ಕೆ ತಲೆಯೆತ್ತಿ ನಿಂತಿದೆ. ಶೈಕ್ಷಣಿಕ ಸಂಸ್ಥೆಯ ನೆರಳಿನಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕು ರೂಪಿಸಿಕೊಳ್ಳುತ್ತಿದ್ದಾರೆ ಎಂದರು.

ಶ್ರೀಮಠದ ಪೀಠಾಧಿಪತಿ ಶ್ರೀಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಸಹ ಶಿಕ್ಷಕ ನಾಗಪ್ಪ ತುಮಕೂರು ಮಾತನಾಡಿ, ಅರಿವಿನ ಹಣತೆ ಹಚ್ಚಿದ ಗುರು ಸಿದ್ದಲಿಂಗ ಸ್ವಾಮೀಜಿ ನಮ್ಮಿಂದ ಕಣ್ಮರೆಯಾಗಿದ್ದಾರೆ. ನಿಜ ಆದರೆ ನಮ್ಮೆಲ್ಲರ ಅಂತರಂಗದಲ್ಲಿ ಮನೆ ಮಾಡಿದ್ದಾರೆ. ಅವರನ್ನು ಅನುದಿನವೂ ಮರೆತು ಬದುಕಲಾಗದು ಎಂದರು.

ಶಿವಲಿಂಗ ಯಳಮೆಲಿ, ಚನ್ನಬಸಪ್ಪ ಬಂಡೇರ, ಪ್ರಾಚಾರ್ಯ ವಿದ್ಯಾಧರ ಖಂಡಾಳ, ಭೀಮಾಶಂಕರ ಬೊಮ್ಮನಳ್ಳಿ, ನಾಗರಾಜ ಲಖಡಿ, ಶಿವುಕುಮಾರ್ ಸರಡಗಿ, ವಿಜಯಲಕ್ಷ್ಮಿ ಬೊಮನಹಳ್ಳಿ, ಸೋಮಶೇಖರ ಬಾಳಿ, ದತ್ತಾತ್ರೇಯ ಗುತ್ತೇದಾರ, ವೀರಣ್ಣ ಹಳ್ಳಿ, ರಾಜಶೇಖರ ಅಳ್ಳೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗ ಬಾಳಿ ನಿರೂಪಿಸಿ, ವಂದಿಸಿದರು. ಬಳಿಕ ಅನ್ನ ಸಂತರ್ಪಣೆ ಹಾಗೂ ಭಜಾನ ಕಲಾಮಂಡಳಿ ಅವರಿಂದ ಇಡೀ ರಾತ್ರಿ ಗಾಯನ ನಡೆಯಿತು.

PREV

Recommended Stories

2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ
ಕುರ್ಚಿಯಲ್ಲೇ ಬಿಟ್ಟುಹೋಗಿದ್ದ ಡೈರಿಯಲ್ಲಿತ್ತು ಅಚ್ಚರಿಯ ಮಾಹಿತಿ : ಡೈರಿ ರಹಸ್ಯ...