ದಾವಣಗೆರೆ: ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಬೆಂಬಲಿಸಿದ್ದ ಚನ್ನಗಿರಿ ಕ್ಷೇತ್ರದ ಸಂತೇಬೆನ್ನೂರು ಮುಖಂಡರು, ಎಪಿಎಂಸಿ ಮಾಜಿ ಅಧ್ಯಕ್ಷ ಓ.ಸಿದ್ದಪ್ಪ ಮತ್ತು ಬೆಂಬಲಿಗರನ್ನು ಮರಳಿ ಕಾಂಗ್ರೆಸ್ಸಿಗೆ ಕರೆ ತರುವಲ್ಲಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಪಕ್ಷದ ಅಭ್ಯರ್ಥಿ ಡಾ.ಪ್ರಭಾ ಅವರ ಹಿರಿಯ ಪುತ್ರ ಸಮರ್ಥ ಎಂ. ಶಾಮನೂರು ಶನಿವಾರ ಯಶಸ್ವಿಯಾಗಿದ್ದಾರೆ.
ಸಂತೇಬೆನ್ನೂರು ಗ್ರಾಮಕ್ಕೆ ಶನಿವಾರ ತೆರಳಿದ್ದ ಸಮರ್ಥ ಶಾಮನೂರು ತಮ್ಮ ಪಕ್ಷದ ಹಿರಿಯ ಮುಖಂಡರು, ಎಪಿಎಂಸಿ ಮಾಜಿ ಅಧ್ಯಕ್ಷ ಓ.ಸಿದ್ದಪ್ಪ ಮತ್ತು ಬೆಂಬಲಿಗರ ಮನವೊಲಿಸಿದ್ದಾರೆ. ಕಾಂಗ್ರೆಸ್ ಗೆಲುವಿಗೆ, ತಾಯಿ ಡಾ.ಪ್ರಭಾ ಮಲ್ಲಿಕಾರ್ಜುನ್ ಗೆಲುವಿಗೆ ಶ್ರಮಿಸಬೇಕು. ನೀವೆಲ್ಲರೂ ಕಾಂಗ್ರೆಸ್ ಪಕ್ಷದಲ್ಲಿ ಮತ್ತೆ ಸಕ್ರಿಯವಾಗಿ ಪಕ್ಷದ ಗೆಲುವಿಗೆ ಶ್ರಮಿಸುವಂತೆ ಮನವೊಲಿಸಿದರು. ಸಮರ್ಥ್ ಮನವಿಗೆ ಓಗೊಟ್ಟ ಒ.ಸಿದ್ದಪ್ಪ ಮತ್ತು ಬೆಂಬಲಿಗರು ಸ್ಪಂದಿಸಿ, ಈ ಕ್ಷಣದಿಂದಲೇ ಡಾ.ಪ್ರಭಕ್ಕನವರ ಗೆಲುವಿಗೆ ಶ್ರಮಿಸುತ್ತೇವೆ. ನಮ್ಮ ಗುರಿ ಸಹ ಕಾಂಗ್ರೆಸ್ ಗೆಲ್ಲಬೇಕೆಂಬುದಾಗಿದೆ. ದಾವಣಗೆರೆ ಕ್ಷೇತ್ರದಲ್ಲಿ ವಿನಯಕುಮಾರ ಸ್ಪರ್ಧಿಸಲು ಬಿಜೆಪಿಯವರು ಕೋಟಿಗಟ್ಟಲೇ ಹಣ ಕೊಟ್ಟಿದ್ದಾರೆ. ಕಾಂಗ್ರೆಸ್ಸಿನ ಮತಗಳನ್ನು ಕೆಡಿಸುವುದಕ್ಕಾಗಿಯೇ ಇಂತಹ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ, ಜಿಲ್ಲೆಗೆ ಸಂಸದ ಜಿ.ಎಂ.ಸಿದ್ದೇಶ್ವರ ಕೊಡುಗೆ ಶೂನ್ಯ. ನಮ್ಮ ಸಂತೇಬೆನ್ನೂರು ಗ್ರಾಮಕ್ಕೆ ಕಾಲಿಡುವ ಯಾವುದೇ ನೈತಿಕತೆಯೂ ಸಂಸದ ಸಿದ್ದೇಶ್ವರರಿಗೆ ಇಲ್ಲ. ವಿದೇಶದಿಂದ ಅಡಿಕೆ ತರಿಸಿ, ಸ್ಥಳೀಯ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದೂ ದೂರಿದರು.
ಪಕ್ಷದ ಮುಖಂಡರು, ಕಾರ್ಯಕರ್ತರು ಈ ಸಂದರ್ಭದಲ್ಲಿದ್ದರು.- - - (** ಈ ಫೋಟೋ ಕ್ಯಾಪ್ಷನ್ ಪ್ಯಾನೆಲ್‌ಗೆ ಬಳಸಬಹುದು)
-20ಕೆಡಿವಿಜಿ16, 17:ಚನ್ನಗಿರಿ, ಸಂತೇಬೆನ್ನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್‌ಗೆ ಬೆಂಬಲಿಸಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಸಮರ್ಥ ಶಾಮನೂರು ಅವರು ಮರಳಿ ಕಾಂಗ್ರೆಸ್‌ಗೆ ಕರೆ ತರುವಲ್ಲಿ ಯಶಸ್ವಿಯಾದರು.