ನಾಫೆಡ್‌ ಸಂಸ್ಥೆಯ ಉಪಾಧ್ಯಕ್ಷರಾಗಿ ಸಿದ್ದಪ್ಪ ಹೊಟ್ಟಿ ಆಯ್ಕೆ

KannadaprabhaNewsNetwork |  
Published : May 24, 2024, 12:45 AM IST
ಎನ್.ಸಿ.ಯು.ಐ. (NCUI) ದೆಹಲಿಯ ಸಭಾಂಗಣದಲ್ಲಿ ನಡೆದ ಆಡಳಿತ ಸಭೆಯಲ್ಲಿ ಅಧ್ಯಕ್ಷರಾಗಿ ಗುಜರಾತ್ ನ ಜಿತಾ ಬಾಯಿ ಆಯ್ಕೆ ಆಗಿ ಹಾಗೂ ಕರ್ನಾಟಕದ ಯಾದಗಿರಿ ಜಿಲ್ಲೆಯ ಯಾದಗಿರಿಯ ಡಾ. ಸಿದ್ದಪ್ಪ ಎಸ್. ಹೊಟ್ಟಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. | Kannada Prabha

ಸಾರಾಂಶ

ಎನ್‌ಸಿಯುಐ (NCUI) ದೆಹಲಿಯ ಸಭಾಂಗಣದಲ್ಲಿ ನಡೆದ ಆಡಳಿತ ಸಭೆಯಲ್ಲಿ ನಾಫೆಡ್‌ ಸಂಸ್ಥೆಯ ಉಪಾಧ್ಯಕ್ಷರಾಗಿ ಯಾದಗಿರಿಯ ಡಾ. ಸಿದ್ದಪ್ಪ ಎಸ್. ಹೊಟ್ಟಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಕನ್ನಡಪ್ರಭ ವಾರ್ತೆ ಯಾದಗಿರಿ

ನ್ಯಾಷನಲ್ ಅಗ್ರಿಕಲ್ಚರ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಶನ್ ಆಫ್ ಇಂಡಿಯಾ(ನಾಫೆಡ್‌) ಸಂಸ್ಥೆಗೆ ಯಾದಗಿರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿರುವ ಡಾ. ಸಿದ್ದಪ್ಪ ಎಸ್. ಹೊಟ್ಟಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ದೆಹಲಿಯಲ್ಲಿ ಮೇ 21ರಂದು ನಡೆದ ನಾಫೆಡ್‌ (NAFED) ಚುನಾವಣೆಯಲ್ಲಿ ಸೌತ್ ಝೋನ್ (ದಕ್ಷಿಣ ಭಾರತ) ದಿಂದ ಸ್ಪರ್ಧೆ ಮಾಡಿ, 31 ಮತಗಳ ಅಂತರದಿಂದ ಸೌತ್ ಜೋನ್ ಉಪಾಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

ಮೇ 22 ರಂದು ಎನ್‌ಸಿಯುಐ(NCUI) ದೆಹಲಿಯ ಸಭಾಂಗಣದಲ್ಲಿ ನಡೆದ ಆಡಳಿತ ಸಭೆಯಲ್ಲಿ ಅಧ್ಯಕ್ಷರಾಗಿ ಗುಜರಾತ್ ನ ಜಿತಾ ಬಾಯಿ ಆಯ್ಕೆ ಆಗಿ ಹಾಗೂ ಕರ್ನಾಟಕದ ಯಾದಗಿರಿ ಜಿಲ್ಲೆಯ ಡಾ.ಸಿದ್ದಪ್ಪ ಎಸ್. ಹೊಟ್ಟಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಈ ಸಂದರ್ಭದಲ್ಲಿ ಪ್ರಕಾಶ ಅಂಗಡಿ ಕನ್ನಳ್ಳಿ, ಬಸವರಾಜ ಅರಳಿ ಮೊಟ್ನಳ್ಳಿ, ಚೆನ್ನಪ್ಪ ಸಾಹು ಠಾಣಗುಂದಿ, ಚೆನ್ನಯ್ಯಸ್ವಾಮಿ ಮಳಮಗಿಮಠ, ಅಯ್ಯಣ್ಣ ಗೌಡ ಕ್ಯಾಸಪನಳ್ಳಿ, ದೊಡ್ಡಯ್ಯ ಸ್ವಾಮಿ, ಪ್ರಶಾಂತ ಅಂಚಾಟೆ, ದೇವರಾಜ ನಾಯಕ ಇತರರಿದ್ದರು.

ಅಭಿಮಾನಿಗಳಿಂದ ಅದ್ಧೂರಿ ಸ್ವಾಗತ

ಯಾದಗಿರಿ: ರಾಷ್ಟ್ರಮಟ್ಟದ ನಾಫೆಡ್ ಸಂಸ್ಥೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ, ಪ್ರಥಮವಾಗಿ ಯಾದಗಿರಿ ಜಿಲ್ಲೆಗೆ ಆಗಮಿಸಿದ ಡಾ. ಸಿದ್ದಪ್ಪ ಹೊಟ್ಟಿ ಅವರಿಗೆ ನಗರದಲ್ಲಿ ಅಭಿಮಾನಿಗಳು, ಹಿತೈಷಿಗಳು ಅದ್ಧೂರಿಯಾಗಿ ಸ್ವಾಗತಿಸಿದರು.

ನಗರದ ಮೈಲಾಪುರ ಅಗಸಿಯಿಂದ ತೆರೆದ ವಾಹನದಲ್ಲಿ, ಭಾಜಾ ಭಜಂತ್ರಿ, ತಮಟೆಗಳಿಂದ ಗಾಂಧಿ ವೃತ್ತ ಮಾರ್ಗವಾಗಿ ಹೊಟ್ಟಿಯವರ ನಿವಾಸದ ವರೆಗೆ ಅಭಿಮಾನಿಗಳು ಭವ್ಯವಾಗಿ ಮೆರವಣಿಗೆ ನಡೆಸಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರ್, ಡಾ. ಸುಭಾಶ್ಚಂಧ್ರ ಕೌಲಗಿ, ಡಾ. ಭೀಮರಾಯ ಲಿಂಗೇರಿ, ಎಮ್. ಕೆ. ಬಿರನೂರ್, ಅಯ್ಯಣ್ಣ ಹುಂಡೇಕಾರ್, ಆರ್ ಮಹಾದೇವಪ್ಪಗೌಡ, ಪ್ರಕಾಶ ಅಂಗಡಿ, ಬಂಡೆಪ್ಪ ಆಕಾಳ, ಸೇರಿದಂತೆ ಮತ್ತಿತರರು ಇದ್ದರು.

PREV

Recommended Stories

ತಿಮರೋಡಿ ವಿರುದ್ಧದ ಕೇಸ್‌ಗೆ ಹೈಕೋರ್ಟ್‌ ತಡೆ
ಒತ್ತಡ ಹೇರಿ ಶಾಸಕರಿಂದ ರಸ್ತೆ ಅಗಲೀಕರಣ