ಕಲಘಟಗಿ:
ಸಚಿವ ಸಂತೋಷ ಲಾಡ್ ಅವರಿಗೆ ಮೋದಿ ಹಾಗೂ ಜೋಶಿ ಅವರನ್ನು ಟೀಕಿಸಿದೆ ಇದ್ದರೆ ನಿಮ್ಮ ಮಂತ್ರಿ ಸ್ಥಾನದಿಂದ ತೆಗೆಯುತ್ತೇವೆ ಎಂದು ಅವರ ಮುಖಂಡರು ಹೇಳಿದ್ದರಿಂದ ಪದೇ ಪದೇ ಟೀಕೆ ಮಾಡುತ್ತಾರೆ. ನಾನು ಸಣ್ಣವನು, ನನ್ನ ಬೈಯಲ್ಲಿ. ಆದರೆ, ಜಗತ್ತೇ ಭಾರತ ಕಡೆ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದು ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ದೇಶ ದುರ್ಬಲ ಸ್ಥಿತಿಯಲ್ಲಿ ಇತ್ತು. ಈಗ ಜಗತ್ತಿನಲ್ಲಿ 5ನೇ ಅತಿದೊಡ್ಡ ಆರ್ಥಿಕ ರಾಷ್ಟ್ರವಾಗಿ ಹೊರಹೊಮ್ಮಿದೆ. ಮುಂದಿನ ಅವಧಿಯಲ್ಲಿ ಮತ್ತೆ ಜಗತ್ತಿನ ಮಾರನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಈ ವೇಳೆ ವಿಪ ಸದಸ್ಯ ಎಸ್.ವಿ. ಸಂಕನೂರ, ಈರಣ್ಣ ಜಡಿ, ನಾಗರಾಜ ಛಬ್ಬಿ, ಐ.ಸಿ. ಗೋಕುಲ, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಬಸವರಾಜ ಕರಡಿಕೊಪ್ಪ, ನಿಜಗುಣಿ ಕೆಲಗೇರಿ, ಫಕೀರೇಶ ನೆಸ್ರೆಕರ, ಶಶಿಧರ ನಿಂಬಣ್ಣವರ, ವಿಜಯಲಕ್ಷ್ಮಿ ಆಡಿನವರ, ಸದಾನಂದ ಚಿಂತಾಮಣಿ, ಗೀತಾ ಮರಲಿಂಗನವರ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಉಪ್ಥಿತರಿದ್ದರು.