ಕನ್ನಡಪ್ರಭ ವಾರ್ತೆ ಸಿಂಧನೂರು (ರಾಯಚೂರು ಜಿಲ್ಲೆ)
ಪಟ್ಟಣದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಕಲ್ಯಾಣ ದಸರಾ ಉತ್ಸವ-2024 ಉದ್ಘಾಟನೆ ಹಾಗೂ ಚತುಷ್ಪಥ ರಸ್ತೆ ಕಾಮಗಾರಿಯ ಶಂಕುಸ್ಥಾಪನೆಯನ್ನು ನೆರವೇರಿಸಿ ಶುಕ್ರವಾರ ಮಾತನಾಡಿದರು.
ರಸ್ತೆ ಕಾಮಗಾರಿಯನ್ನು ನಿಯಮಗಳನ್ವಯ ಮಾಡಬೇಕು. ಲೋಪದೋಷಗಳು ಜರುಗಿದರೆ ಗುತ್ತಿಗೆದಾರರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಉತ್ತಮ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.ಕಲಂ 371 (ಜೆ) ಜಾರಿಯಿಂದಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ವಿಶೇಷ ಮೀಸಲಾತಿ ಹಾಗೂ ಸೌಲಭ್ಯ ದೊರೆಕಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ಅವರ ನಿರಂತರ ಪ್ರಯತ್ನವೆ ಇದಕ್ಕೆ ಕಾರಣವಾಗಿದೆ. ವಿಶೇಷ ಮೀಸಲಾತಿಯಿಂದಾಗಿ ಸಾವಿರಾರು ಯುವಕರಿಗೆ ಉದ್ಯೋಗ ದೊರಕಿದೆ. ಇದರಲ್ಲಿ ಕೆಲ ಗೊಂದಲಗಳು ಹಾಗೂ ದೋಷಗಳು ಇರುವ ಬಗ್ಗೆ ತಿಳಿದು ಬಂದಿದ್ದು, ಶೀಘ್ರದಲ್ಲಿಯೇ ಅವುಗಳನ್ನು ಸರಿಪಡಿಸಲಾಗುವುದು ಎಂದು ಹೇಳಿದರು.ದಸರಾ ಹಬ್ಬ ಯಾವುದೇ ಜಾತಿ, ಧರ್ಮ, ಭಾಷೆಗೆ ಸೀಮಿತವಾಗಿಲ್ಲ. ಅದು ಸರ್ವ ಜನಾಂಗದ ಹಬ್ಬವಾಗಿದೆ. ದಸರಾ ಹಬ್ಬ ನಾಡಿನ ಸಾಂಸ್ಕೃತಿಕ, ಹಿರಿಮೆ, ಗರಿಮೆಯನ್ನು ಸಾರುವ ಹಬ್ಬವಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿ ತಾಯಿಯಿದ್ದಂತೆ ಸಿಂಧನೂರು ತಾಲೂಕಿನಲ್ಲಿ ಅಂಬಾದೇವಿ ಶಕ್ತಿ ದೇವತೆಯಾಗಿದ್ದಾಳೆ. ಚಾಮುಂಡೇಶ್ವರಿ ಅವತಾರವೇ ಅಂಬಾದೇವಿ. ಇವರಿಬ್ಬರ ಕೃಪೆಯಿಂದಾಗಿ ಉತ್ತಮ ಮಳೆ-ಬೆಳೆಯಾಗಿದೆ. ಕೆರೆ-ಕಟ್ಟೆಗಳು ತುಂಬಿವೆ. ಇಡೀ ರಾಜ್ಯವೇ ಸಮೃದ್ಧಿಯಾಗಿದೆ ಎಂದರು.
ಕಾನೂನು ಮತ್ತು ಸಂಸದಿಯ ಹಾಗೂ ಪ್ರವಾಸ್ಯೋದ್ಯಮಿ ಸಚಿವ ಹೆಚ್.ಕೆ.ಪಾಟೀಲ್ ಮಾತನಾಡಿ, ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿ ಮಾಡಲು ಸಿಎಂ ಸಿದ್ದರಾಮಯ್ಯ ಅವರು ಕಂಕಣಬದ್ಧರಾಗಿದ್ದಾರೆ.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಮೈಸೂರಿನಲ್ಲಿ ಚಾಂಮುಡೇಶ್ವರಿಯ ಆರಾಧನೆಗೆ ದಸರಾ ಮಹೋತ್ಸವವನ್ನು ಆಚರಿಸುತ್ತಿದ್ದು, ಈಗ ಅದು ನಾಡಹಬ್ಬವಾಗಿ ಹಲವಾರು ವರ್ಷಗಳಿಂದ ನಡೆಯುತ್ತಾ ಬಂದಿದೆ. ಈ ಭಾಗದ ಆರಾಧ್ಯ ದೈವ ವಿವಿಧ ರಾಜ್ಯದ ಜನರಿಂದ ಪೂಜಿಸಲ್ಪಡುವ ಅಂಬಾದೇವಿಯ ಆರಾಧನೆಯೊಂದಿಗೆ ಕಲ್ಯಾಣ ಕರ್ನಾಟಕದಲ್ಲಿ ಪ್ರಥಮ ಬಾರಿಗೆ ದಸರಾ ಮಹೋತ್ಸವವನ್ನು ಆಚರಿಸುತ್ತಿದ್ದು, ಈ ಉತ್ಸವಕ್ಕೆ ಸ್ಥಳೀಯ ವಿರೋಧ ಪಕ್ಷದ ನಾಯಕರು, ಸಂಘ-ಸಂಸ್ಥೆಗಳ ಮುಖಂಡರು, ಅಧಿಕಾರಿ ವರ್ಗದವರು ಸಕರಾತ್ಮಕವಾಗಿ ಸ್ಪಂದಿಸಿರುವುದರಿಂದ ದೊಡ್ಡ ಹಬ್ಬವಾಗಿ ಆಚರಿಸಲು ಸಾಧ್ಯವಾಗಿದೆ ಎಂದು ಅಭಿನಂದಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ 17 ಸಾವಿರ ಹುದ್ದೆಗಳ ಭರ್ತಿಗೆ ತಯಾರಿ ನಡೆದಿದೆ. 5 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯೂ ನಡೆದಿದೆ. ಮಲ್ಲಿಕಾರ್ಜು ಖರ್ಗೆ ಮತ್ತು ಧರ್ಮಸಿಂಗ್ ಅವರು ಕಲ್ಯಾಣ ಕರ್ನಾಟಕದ ಪ್ರಗತಿಯ ಬಗ್ಗೆ ಚಿಂತನೆ ಮಾಡದಿದ್ದರೆ ಈ ಭಾಗದ ಸಾವಿರಾರು ವಿದ್ಯಾರ್ಥಿಗಳಿಗೆ ಮೆಡಿಕಲ್, ಎಂಜಿನಿಯರಿಂಗ್ ಶಿಕ್ಷಣ ಮತ್ತು ಸಹಸ್ರಾರು ಉದ್ಯೋಗಗಳು ಲಭಿಸುತ್ತಿರಲಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ ಪಾಟೀಲ್ ಹೇಳಿದರು.-------