ವದೇಗೊಳ ಗ್ರಾಮದಲ್ಲಿ ಸಿದ್ದರಾಮಯ್ಯ ಅಭಿಮಾನಿಗಳಿಂದ ನಾಟಿಕೋಳಿ ಔತಣ

KannadaprabhaNewsNetwork |  
Published : Jan 08, 2026, 02:30 AM IST
ಗಜೇಂದ್ರಗಡ ಸುದೀರ್ಘ ಆಡಳಿತ ನಡೆಸಿದ ಸಿಎಂ ಎಂಬ ಹೆಗ್ಗಳಿಕೆ ಸಿಎಂ ಸಿದ್ದರಾಮಯ್ಯ ಪಾತ್ರವಾದ ಹಿನ್ನಲೆ ವದೇಗೊಳ ಗ್ರಾಮದಲ್ಲಿ ನಾಟಿಕೋಳಿ ಔತಣಕೂಟ ನಡೆಯಿತು. | Kannada Prabha

ಸಾರಾಂಶ

ವದೇಗೊಳ ಗ್ರಾಮದಲ್ಲಿ ನಡೆದ ನಾಟಿಕೋಳಿ ಔತಣಕೂಟದಲ್ಲಿ ಜೀಗೇರಿ, ಕುಂಟೋಜಿ ಸೇರಿ ಸುತ್ತಲಿನ ಗ್ರಾಮಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು.

ಗಜೇಂದ್ರಗಡ: ರಾಜ್ಯದಲ್ಲಿ ಸುದೀರ್ಘ ಅವಧಿಯ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹೊಂದಿದ್ದ ದೇವರಾಜ ಅರಸು ಅವರ ದಾಖಲೆಯನ್ನು ಸಿಎಂ ಸಿದ್ದರಾಮಯ್ಯ ಮುರಿದ ಹಿನ್ನೆಲೆ ಸಿದ್ದರಾಮಯ್ಯ ಅಭಿಮಾನಿ ಬಳಗದಿಂದ ಸಮೀಪದ ವದೇಗೊಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಾಟಿಕೋಳಿ ಔತಣಕೂಟ ನಡೆಯಿತು.

ವದೇಗೊಳ ಗ್ರಾಮದಲ್ಲಿ ನಡೆದ ನಾಟಿಕೋಳಿ ಔತಣಕೂಟದಲ್ಲಿ ಜೀಗೇರಿ, ಕುಂಟೋಜಿ ಸೇರಿ ಸುತ್ತಲಿನ ಗ್ರಾಮಗಳಿಂದ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಾಗೂ ಅಭಿಮಾನಿಗಳು ಭಾಗವಹಿಸಿದ್ದರು. ಇದಕ್ಕೂ ಮುಂಚೆ ಸಿದ್ದರಾಮಯ್ಯ ಅವರ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಯಿತು.

ಈ ವೇಳೆ ಗಜೇಂದ್ರಗಡ ಹಾಲುಮತ ಸಮಾಜದ ಅಧ್ಯಕ್ಷ ಅಂದಪ್ಪ ಬಿಚ್ಚೂರ ಮಾತನಾಡಿ, ರಾಜ್ಯದಲ್ಲಿನ ಸರ್ವ ಸಮುದಾಯಗಳ ಹಿತ ಕಾಪಾಡಲು ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದ ಸಿದ್ದರಾಮಯ್ಯ ಅವರ ಅಧಿಕಾರ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಸಾಗಿಸಿದೆ. ಸಿಎಂ ಸಿದ್ದರಾಮಯ್ಯ ಅವರ ಸಾಮಾಜಿಕ ನ್ಯಾಯ ಪಾಲನೆಯ ಆಡಳಿತ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಿಂದ ದಾಖಲಾಗಿದೆ. ದೇಶದ ಪ್ರಭಾವಿ ಮುಖ್ಯಮಂತ್ರಿಗಳ ಪಟ್ಟಿಯಲ್ಲಿ ಸಿದ್ದರಾಮಯ್ಯ ಅಗ್ರಗಣ್ಯರು ಎಂಬುದು ಹೆಮ್ಮೆಯ ವಿಷಯ ಎಂದರು.

ರಾಜ್ಯದಲ್ಲಿ ಜನಪರ, ರೈತಪರ ಹಾಗೂ ಮಹಿಳಾಪರ ಮತ್ತು ಕಾರ್ಮಿಕರ ಪರವಾದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಿದ್ದರಾಮಯ್ಯ ಅವರು ಸಿಎಂ ಆಗಿರುವುದು ಅಗತ್ಯವಾಗಿದೆ. ರೋಣ ಮತಕ್ಷೇತ್ರದ ಅದರಲ್ಲೂ ಗಜೇಂದ್ರಗಡ ತಾಲೂಕಿನ ಅಭಿವೃದ್ಧಿಗೆ ಶಾಸಕ ಜಿ.ಎಸ್. ಪಾಟೀಲ ಅವರು ಸಿಎಂ ಸಿದ್ದರಾಮಯ್ಯ ಮೂಲಕ ಸಾಕಷ್ಟು ಅನುದಾನವನ್ನು ತಂದಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನವನ್ನು ಶಾಸಕರು ತರಲಿದ್ದಾರೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ಭೀಮಪ್ಪ ಮೇಟಿ, ಸದಸ್ಯ ಬಸವರಾಜ ಕುರಿ, ರಾಮನಗೌಡ ಗೌಡ್ರ, ಶರಣಪ್ಪ ದಾಸರ, ಶರಣಪ್ಪ ದೊಣ್ಣೆಗುಡ್ಡ, ಮುಕ್ತುಂಸಾಬ ಮಕಾನದಾರ, ಕಳಕಪ್ಪ ಕನಕೊಪ್ಪದ, ಸಣ್ಣರಾಮನಗೌಡ ಗೌಡ್ರ, ಶೇಖಪ್ಪ ಗೌಡ್ರ, ಖಾಸೀಂ ಸುಂಕದ, ಚಿಕ್ಕಪ್ಪ ಮೇಟಿ, ಬಸವರಾಜ ಗಡಾದ, ಶರಣಪ್ಪ ಬೆಟಗೇರಿ, ಮಲ್ಲಪ್ಪ ಕುರಿ, ಶಂಕರಗೌಡ ಗೌಡ್ರ, ಹನಮಪ್ಪ ಗೌಡ್ರ, ಮಹ್ಮದಲಿ ಮಕಾನದಾರ, ಪರೀಮಸಾಬ ಮಕಾನದಾರ ಸೇರಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನುವಾದಕರು ಸಾಂಸ್ಕೃತಿಕ ರಾಯಭಾರಿಗಳಿದ್ದಂತೆ:ಎಸ್.ಜಿ.ಎಸ್‌
9.5 ಲಕ್ಷ ಲಂಚ ಪಡೆದ ಕೇಂದ್ರ ವಿದ್ಯುತ್‌ಸಂಸ್ಥೆ ಜಂಟಿ ನಿರ್ದೇಶಕ ಸಿಬಿಐ ಬಲೆಗೆ