ಕನ್ನಡಪ್ರಭ ವಾರ್ತೆ ಮುಧೋಳ
ನಗರದ ಬಸವೇಶ್ವರ ಸರ್ಕಲ್ ನಲ್ಲಿ ಮುಧೋಳ-ಲೋಕಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಮಂಗಳವಾರ ಆಯೋಜಿಸಿದ್ದ ಸಿಹಿ ವಿತರಣೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿ, ಕರ್ನಾಟಕ ರಾಜ್ಯದ ರಾಜಕೀಯ ಇತಿಹಾಸ ದಲ್ಲಿ ದೀರ್ಘಾವಧಿಯ ಕಾಲ ಮುಖ್ಯಮಂತ್ರಿಯಾಗಿ ದಾಖಲೆ ನಿರ್ಮಿಸಿರುವ ಸಿದ್ದರಾಮಯ್ಯನವರಿಗೆ ಅಭಿನಂದಿಸಿದ ಅವರು, ಕರ್ನಾಟಕದ ಕೌಟಿಲ್ಯ ಅರ್ಥಶಾಸ್ತ್ರಜ್ಞರಾಗಿ ದೇಶಕ್ಕೆ ಮಾದರಿಯಾಗಿದ್ದಾರೆ. ಜನಪರ ಯೋಚನೆ ಮತ್ತು ಯೋಜನೆ ರೂಪಿಸುವ ಸರಳ ವ್ಯಕ್ತಿತ್ವಹೊಂದಿರುವ ಮಹಾನ್ ನಾಯಕ ಇತರರಿಗೆ ಮಾದರಿಯಾಗಿ, ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದ್ದಾರೆಂದರು.
ಕಾಂಗ್ರೆಸ್ ಮುಖಂಡರಾದ ಉದಯಸಿಂಗ ಫಡತಾರೆ, ಶಿವಕುಮಾರ ಮಲಘಾಣ, ಅಶೋಕ ಕಿವಡಿ, ಸಿದ್ದು ಕಾಳಗಿ, ಐ.ಎಚ್.ಅಂಬಿ, ಸದುಗೌಡ ಪಾಟೀಲ ಸೇರಿದಂತೆ ಇತರರು ಸಾಂದರ್ಭಿಕವಾಗಿ ಮಾತನಾಡಿದರು. ಕಾಂಗ್ರೆಸ್ ನಾಯಕರಾದ ವೆಂಕಣ್ಣ ಗಿಡಪ್ಪನವರ, ಸಂಜಯ ತಳೇವಾಡ, ನಾರಾಯಣ ಹವಾಲ್ದಾರ, ಭೀಮಶಿ ಸರಕಾರಕುರಿ, ಹನುಮಂತ ತೇಲಿ, ಸಂತೋಷ ಪಾಲೋಜಿ, ಸಿದ್ರಾಮ ಕುರಿ, ಮಾರುತಿ ಮಾನೆ, ರಾಮನಗೌಡ ನಾಡಗೌಡ, ಮುದಕಣ್ಣ ಅಂಬಿಗೇರ, ಪರಮಾನಂದ ಕುಟ್ರಟ್ಟಿ, ಸಂಗಪ್ಪ ಇಮ್ಮನ್ನವರ, ಎಸ್.ಎ.ಸೂರ್ಯವಂಶಿ, ಬಸವಂತ ಕಾಟೆ, ಸುನಂದಾ ತೇಲಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.