ಮೂರು ವರ್ಷದಲ್ಲಿ ಮೂರುಪಟ್ಟು ಸಾಲ ಮಾಡಿದ ಸಿದ್ದರಾಮಯ್ಯ-ಸಂಸದ ಬೊಮ್ಮಾಯಿ

KannadaprabhaNewsNetwork |  
Published : Mar 17, 2026, 02:15 AM IST
16ಎಚ್‌ವಿಆರ್‌1 | Kannada Prabha

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಂಕಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೂರು ವರ್ಷದಲ್ಲಿ ಮೂರು ಪಟ್ಟು ಸಾಲ ಮಾಡಿದ್ದಾರೆ. ಯಾರು ಸಾಲ ಮಾಡುತ್ತಾರೆ ಅವರೇ ತೀರಿಸುವ ಕಾನೂನು ಜಾರಿಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶಿಗ್ಗಾಂವಿ ಪಟ್ಟಣದ ಸವಣೂರ ರಸ್ತೆಯಲ್ಲಿರುವ ಬಸವರಾಜ ಬೊಮ್ಮಾಯಿಯವರ ನಿವಾಸದ ಸಭಾಭವನದಲ್ಲಿ ಬಿಜೆಪಿ ಶಿಗ್ಗಾಂವಿ - ಸವಣೂರ ವಿಧಾನ ಸಭಾ ಮತಕ್ಷೇತ್ರದ ಬಿ.ಎಲ್.ಎ - 2 ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಿದ್ದರಾಮಯ್ಯ ಅವರ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ. ಬಜೆಟ್‌ನಲ್ಲಿ 1.32 ಲಕ್ಷ ಕೋಟಿ ಸಾಲ ಮಾಡಿದ್ದಾರೆ.‌ ನಾವಿದ್ದಾಗ 54 ಸಾವಿರ ಕೋಟಿ ಸಾಲ ಮಾಡಿದ್ದೇವು. ನಾವು ಅಧಿಕಾರದಲ್ಲಿದ್ದಾಗ ಸಾಲದ ಲೆಕ್ಕಾ ಮಾಡುತ್ತಿದ್ದಾಗ ಸಿದ್ದರಾಮಯ್ಯ ಹತ್ತು ವರ್ಷಕ್ಕೆ ಸಾಲ ಮಾಡಿದ್ದರು. ಆ ಸಾಲವನ್ನು ನಾವು ತೀರಿಸಿದೆವು ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮಾತನಾಡುತ್ತ ನನಗೆ ನಿಮ್ಮನ್ನು ನೋಡಿ ಬಹಳ ಸಂತೋಷವಾಗಿದೆ. ಗಡಿಯಲ್ಲಿ ಸೈನಿಕರು ಇರುವಂತೆ ಕಷ್ಟಕಾಲದಲ್ಲಿ ನೀವು ನನ್ನನ್ನು ಸುರಕ್ಷೆ ಮಾಡುವ ಸೈನಿಕರ ಥರ ಕಾಣುತ್ತಿದ್ದಿರಿ. ಬಿಎಲ್ಎ 2 ಗಳು ಸರಿಯಾಗಿ ಕೆಲಸ ಮಾಡಿದರೆ ಪಾಕಿಸ್ತಾನ-ಭಾರತ ಮ್ಯಾಚ್ ಆದ ಹಾಗೆ ಆಗುತ್ತದೆ. ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವ ವಿಶ್ವಾಸದಲ್ಲಿ ಕುಂತಹಾಗೆ ನೀವು ಕುಂತಿದ್ದಿರಿ. ಶಿಗ್ಗಾಂವಿ ಸವಣೂರು ಕ್ಷೇತ್ರದ ಅಭಿವೃದ್ಧಿಗೆ ಸಂಕಲ್ಪ ಮಾಡಿ ಸಂಘಟಿತರಾಗಿ ನೀವು ಬಂದಿದ್ದೀರಿ, ಬಿಎಲ್ಎ 2 ಗಳು, ನಿಮ್ ಕೆಲಸ ಏನಿದೆ ಅಂತ ತಿಳಿದಕೊಳ್ಳಿ, ಒಂದು ಮತದಾರರ ಪಟ್ಟಿಯನ್ನು ಹಿಡಿದುಕೊಂಡು ಯಾರು ಅನಧಿಕೃತವಾಗಿದ್ದಾರೆ. ಯಾವ ರೀತಿ ಸುಳ್ಳು ಹೇಳಿ ಹೆಸರು ಸೇರಿಸಿದ್ದಾರೆ. ಅದನ್ನು ಪತ್ತೆ ಹಚ್ಚಬೇಕು. ಎಸ್ ಆರ್ ಐ ಕೆಲಸ ಸರ್ಕಾರಿ ಕೆಲಸ ಅಲ್ಲ ಸರ್ಕಾರಿ ಅಧಿಕಾರಿಗಳ ಮುಖಾಂತರ ಮಾಡುವ ಕೆಲಸ ಅಷ್ಟೆ ಆದರೆ ನೀವು ನ್ಯಾಯ ಸಮ್ಮತವಾಗಿ ಸತ್ಯದ ಪರವಾಗಿ ಕಾನೂನು ಪರವಾಗಿ ಇರಬೇಕು. ದೇಶದ ಭದ್ರತೆಯಲ್ಲಿ ಸೈನಿಕರು ಎಷ್ಟು ಪ್ರಮುಖವೊ, ಪ್ರಜಾಪ್ರಭುತ್ವದಡಿಯಲ್ಲಿ ದೇಶವನ್ನು ಉಳಿಸಿಕೊಳ್ಳುವ ಜವಾಬ್ದಾರಿ ಬಿಎಲ್ಓಗಳ ಮೇಲಿದ್ದು, ನಡೆಯುವ ಎಸ್ಐಆರ್ ಪ್ರಕ್ರಿಯೆಯಲ್ಲಿ ಹೆಚ್ಚಿನ ಜವಾಬ್ದಾರಿಯಿಂದ ಶಿಗ್ಗಾಂವಿ ಸವಣೂರ ಕ್ಷೇತ್ರವನ್ನು ಮೊದಲಿನ ರೀತಿಯಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದರು.

ಹದಿನೈದು ಸಾವಿರ ಮನೆಗಳನ್ನು ಕೊಟ್ಟಿದ್ದೇವೆ. ಸುಳ್ಳು ಹೇಳಿ ರಾಜಕಾರಣ ಮಾಡುವ ಅವಶ್ಯಕತೆ ನನಗೆ ಇಲ್ಲ. ಕ್ಷೇತ್ರದ ಜನರ ಮನದಲ್ಲಿ ನಾನು ನೆಲೆ ಊರಿದ್ದೇನೆ. ಇವತ್ತು ಈ ಜನ ಪ್ರೀತಿ ವಿಶ್ವಾಸ ಯಾಕೆ ತೋರಿಸುತ್ತಾರೆ ಎಂದರೆ ನಾವು ಏನು ಮಾತನಾಡುತ್ತೇವೆ ಅದನ್ನು ಮಾಡುತ್ತೇವೆ. ನಮಗಿಂತ ಒಳ್ಳೆಯ ಕೆಲಸ ಮಾಡಿದರೆ ನಾನೆ ಶಹಬ್ಬಾಶಗಿರಿ ಕೊಡುತ್ತೇನೆ. ಆದರೆ ಜನರನ್ನು ದಾರಿ ತಪ್ಪಿಸಿ ನನ್ನೊಬ್ಬನಿಂದ ಕೆಲಸ ಆಗಿದೆ. ನಾನೇ ಸೂರ್ಯನ ಹುಟ್ಟಿಸಿದೆ ಅಂದರೆ ದೇವರು ನೋಡಿಕೊಳ್ಳುತ್ತಾನೆ ಎಂದರು.

ಅಕ್ರಮ ಚಟುವಟಿಕೆ ತಾಣ

ಕ್ಷೇತ್ರದಲ್ಲಿ ಯಾವುದೇ ತೋಟಗಳಿಗೆ ಹೋದರೆ ಇಸ್ಪೀಟು, ಒಸಿ ಆಡುವುದು ಕಾಣಿಸುತ್ತದೆ. ಅಲ್ಲಿ ಊಟದ ಎಲಿ ಬದಲು ಇಸ್ಪೀಟ್ ಎಲೆ ಇಟ್ಟಿರುತ್ತಾರೆ. ಈ ಕ್ಷೇತ್ರದ ಯುವಕರು ಹಾಳಾಗುತ್ತಿದ್ದಾರೆ‌. ಎಸ್ಪಿ ಸೇರಿದಂತೆ ಯಾವುದೇ ಅಧಿಕಾರಿಗಳ ಭಯ ಇಲ್ಲದಂತಾಗಿದೆ. ಕ್ಷೇತ್ರದಲ್ಲಿ ಗಾಂಜಾ, ಮಟ್ಕಾ ಸೇರಿದಂತೆ ಅಕ್ರಮ ಚಟುವಟಿಕೆಗಳು ವ್ಯಾಪಕವಾಗಿ ನಡೆಯುತ್ತಿವೆ. ನಾವು ತಂದ ಯೋಜನೆಗಳನ್ನೇ ಉದ್ಘಾಟನೆ ಮಾಡುತ್ತಿದ್ದಾರೆ. ಶಿಗ್ಗಾಂವಿ ಬಂಕಾಪುರ ಸವಣೂರು ಮೂರು ಪಟ್ಟಣಗಳಿಗೆ ನಾನು ಕುಡಿಯುವ ನೀರಿನ ಯೋಜನೆ ತಂದಿದ್ದೇನೆ. ಆದರೆ, ಈಗಿನವರು ಈ ಯೋಜನೆಗೆ ಅನುಮೋದನೆ ಪಡೆದು ನಾನೇ ತಂದಿದ್ದೇನೆ ಎಂದು ಹೇಳಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ನ್ಯಾಯ ಸಮ್ಮತ ಕೆಲಸ ಮಾಡಿ

ಇಡೀ ಕರ್ನಾಟಕ ಅಭಿವೃದ್ಧಿ ಅಷ್ಟೆ ಅಲ್ಲ, ಶಿಗ್ಗಾಂವಿ ಸವಣೂರು ಅಭಿವೃದ್ಧಿ ಪರ್ವ ಮುಂದುವರೆಯಬೇಕು. ಚಾಕು ಚೂರಿ ಸಂಸ್ಕೃತಿ ಬಂದಾಗಬೇಕು. ನೀವು ಎಷ್ಟು ಸಕ್ರಿಯರಾಗಿ ಕೆಲಸ ಮಾಡುತ್ತೀರಿ ಅಷ್ಟು ಅನುಕೂಲ ಆಗುತ್ತದೆ. ಎಲ್ಲಿ ಅನ್ಯಾಯ ಆಗಿದೆ ಅದನ್ನು ಸರಿಪಡಿಸಿ, ಶುದ್ಧವಾದ ಮತದಾರರ ಪಟ್ಟಿ ಸಿದ್ಧವಾಗಲಿ, ಇದೊಂದು ಅವಕಾಶ ಸಿಕ್ಕಿದೆ. ಇನ್ನೊಬ್ಬರನ್ನು ನೋಡಬೇಡಿ ನ್ಯಾಯ ಸಮ್ಮತವಾಗಿ ಮತದಾರರ ಪಟ್ಟಿ ಸಿದ್ಧಪಡಿಸಿ ನಿಮ್ಮ ಕೆಲಸ ಮಾಡಿ, ನಾನೂ ಕೂಡ ಕೆಲವು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡುತ್ತೇನೆ, ಮುಂಬರುವ ಜಿಪಂ, ತಾಪಂ ಚುನಾವಣೆಗಳಿಗೆ ಸನ್ನದ್ಧರಾಗಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ, ಯುವ ಮುಖಂಡರಾದ ಭರತ ಬೊಮ್ಮಾಯಿ, ಶಿಗ್ಗಾಂವ ಮಂಡಳದ ಅಧ್ಯಕ್ಷರಾದ ವಿಶ್ವನಾಥ ಹರವಿ, ಸವಣೂರ ಮಂಡಳದ ಅಧ್ಯಕ್ಷ ಶಿವಪುತ್ರಪ್ಪ ಕಲಕೋಟಿ, ಮುಖಂಡರುಗಳಾದ ಮಹಾಂತೇಶ ಬಿಜ್ಜೂರ, ಡಿ.ಎಸ್. ಮಾಳಗಿ, ಎಂ.ಎನ್. ಹೊನಕೇರಿ, ಶಿವಾನಂದ ಮ್ಯಾಗೇರಿ, ಕರೆಪ್ಪ ಕಟ್ಟಿಮನಿ, ಶಿವಪ್ರಸಾದ ಸುರಗೀಮಠ, ಮಹಿಳಾ ಮೋರ್ಚಾ ಅಧ್ಯಕ್ಷೆ ಯಶೋದಾ ಪಾಟೀಲ್, ಬಿ.ಎಲ್.ಎ 1 ನವೀನ ಸವಣೂರ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ, ಧಾರವಾಡ ಮಹಾನಗರ ಅಭಿವೃದ್ಧಿಗೆ ಸಪ್ತಸೂತ್ರ
ಹಾನಗಲ್ಲಿನ 14 ಕೇಂದ್ರಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಸಿದ್ಧತೆ