ಕನ್ನಡಪ್ರಭ ವಾರ್ತೆ ಮೈಸೂರು
ಸಚಿವ ಸಂಪುಟದಲ್ಲಿ ಮೈಸೂರು ಜಿಲ್ಲೆಗೆ ಒಂದು ಸ್ಥಾನ ಮಾತ್ರ ನೀಡಿರುವ ಕುರಿತು ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಮಗನನ್ನು ಮಂತ್ರಿ ಮಾಡಲು ಮಲ್ಲಿಕಾರ್ಜುನ ಖರ್ಗೆ ಆ ಭಾಗದ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದರು. ಅದೇ ರೀತಿ ಮೈಸೂರು ಭಾಗದಲ್ಲಿ ಮಗನನ್ನು ಲೀಡರ್ ಮಾಡಲು ಸಿದ್ದರಾಮಯ್ಯ ಎಲ್ಲಾ ಕಾಂಗ್ರೆಸ್ ನಾಯಕರ ರಾಜಕೀಯ ಮುಗಿಸಿದ್ದಾರೆ ಎಂದು ಟೀಕಿಸಿದರು.
ಡಾ. ಮಹದೇವಪ್ಪ, ಕೆ. ವೆಂಕಟೇಶ್ ಎಲ್ಲರನ್ನು ಸಿದ್ದರಾಮಯ್ಯ ಮೂಲೆ ಗುಂಪು ಮಾಡಿದ್ದಾರೆ. ಸಭ್ಯ ರಾಜಕಾರಣಿ ತನ್ವೀರ್ ಸೇಠ್ ಗೆ ಅವಕಾಶ ತಪ್ಪಿಸಿದ್ದು ಸಿದ್ದರಾಮಯ್ಯ. ದಲಿತರ ಧ್ವನಿ ಆಗಿರುವ ಮಹದೇವಪ್ಪರ ಸ್ನೇಹವನ್ನೆ ಸಿದ್ದರಾಮಯ್ಯ ಮರೆತು ಬಿಟ್ಟರು. ತನ್ನ ಮಗನ ಮೇಲೆ ಮಾತ್ರ ಕಿರೀಟ ಇರಬೇಕು ಅಂತಾ ಎಲ್ಲಾ ನಾಯಕರ ರಾಜಕೀಯ ಮುಗಿಸಿದ್ದಾರೆ. ಮಹಾದೇವಪ್ಪ, ವೆಂಕಟೇಶ್ ಅವರು ಸಿದ್ದರಾಮಯ್ಯಗೆ ಸದಾ ಜೊತೆ ಇದ್ದರು. ಸ್ನೇಹಿತರ ರಾಜಕೀಯವನ್ನೆ ಸಿದ್ದರಾಮಯ್ಯ ಮುಗಿಸಿದರು ಎಂದು ಅವರು ದೂರಿದರು.ಭ್ರಷ್ಟಾಚಾರ ಮಾಡಿ 14 ಸೈಟ್ ಪಡೆದು ಭ್ರಷ್ಟಾಚಾರ ಬಗ್ಗೆ ಮಾತಾಡುವ ನೈತಿಕತೆಯನ್ನು ಸಿದ್ದರಾಮಯ್ಯ ಕಳೆದುಕೊಂಡಿದ್ದರು. ಈಗ ಮಗನಿಗಾಗಿ ಎಲ್ಲರ ರಾಜಕೀಯ ಮುಗಿಸಿ ಕುಟುಂಬ ರಾಜಕೀಯದ ಬಗ್ಗೆ ಟೀಕೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಅವರು ಕುಟುಕಿದರು.
ಸಂಪುಟದಲ್ಲಿ ಒಬ್ಬ ಮಹಿಳೆಯರೂ ಇಲ್ಲ. ಕಾಂಗ್ರೆಸ್ ಮಹಿಳಾ ವಿರೋಧಿ. ಲಕ್ಷ್ಮಿ ಹೆಬ್ಬಾಳ್ಕರ್, ಗಾಯತ್ರಿ ಶಾಂತೇಗೌಡ ಇಬ್ಬರು ಮಂತ್ರಿ ಆಗುವುದಕ್ಕೆ ಕಲ್ಲು ಹಾಕಿದವರು ಸಿದ್ದರಾಮಯ್ಯ. ಕರ್ನಾಟಕದ ರಾಜಕೀಯ ಹೊಲಸು ಮಾಡಿದ್ದೆ ಸಿದ್ದರಾಮಯ್ಯ. ರಾಜಕೀಯ ಹಾಳು ಮಾಡಿ, ಈಗ ರಾಜಕೀಯ ಹೊಲಸಾಗಿದೆ ಅಂತಾ ಸಿದ್ದರಾಮಯ್ಯ ಭಾಷಣ ಮಾಡುತ್ತಾರೆ ಎಂದು ಅವರು ಟೀಕಿಸಿದರು.
- ಪ್ರತಾಪ್ ಸಿಂಹ, ಮಾಜಿ ಸಂಸದರು