ದಾಬಸ್‍ಪೇಟೆ: ಸಿದ್ದರಾಮೇಶ್ವರರು ಕೇವಲ ಕೆರೆ ಕಟ್ಟೆಗಳನ್ನು ಮಾತ್ರವಲ್ಲ, ಸಮಾನತೆಯ ಸಮಾಜ ಕಟ್ಟಲು ಶ್ರಮಿಸಿದರು ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ತಿಳಿಸಿದರು.
ಗ್ರಾಪಂ ಮಾಜಿ ಉಪಾಧ್ಯಕ್ಷ ರಾಜೇಶ್ ಕುಮಾರ್ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಸಂಘಟನೆ ಮುಖ್ಯ. ಸರ್ಕಾರ ನೀಡುವ ಸೌಲಭ್ಯಗಳ ಪ್ರಯೋಜನ ಪಡೆದುಕೊಂಡು ಮುಖ್ಯವಾಹಿನಿಗೆ ಬರಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಹಾಗು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯತು. ಸಿದ್ದರಾಮೇಶ್ವರ ಭಾವಚಿತ್ರವನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯ ವೆಂಕಟೇಶ್, ಗ್ರಾಪಂ ಸದಸ್ಯರಾದ ಪೆಮ್ಮನಹಳ್ಳಿ ಸಿದ್ದಪ್ಪ, ಸಿದ್ದರಾಮು, ನಾರಾಯಣಸ್ವಾಮಿ, ಮುಖಂಡರಾದ ಕೆಂಗಲ್ ಶ್ರೀನಿವಾಸ್, ವೆಂಕಟೇಶ್, ಪುಟ್ಟಸಿದ್ದಯ್ಯ, ಪ್ರಸನ್ನ, ರಾಮು, ಹರೀಶ್, ಹಳೆನಿಜಗಲ್ ವೆಂಕಟೇಶ್, ಚಿಕ್ಕಣ್ಣ, ಯೋಗಾನಂದೀಶ್, ನಾಗೇಶ್, ಮಂಜುಳಾ, ಶಾಂತಕುಮಾರಿ, ಉಮಾದೇವಿ ಇತರರಿದ್ದರು.
ಪೋಟೋ 2 : ದಾಬಸ್‍ಪೇಟೆಯ ಉದ್ದಾನೇಶ್ವರ ವೃತ್ತದಲ್ಲಿ ಭೋವಿ ಸಮುದಾಯದಿಂದ ಶಿವಯೋಗಿ ಸಿದ್ದರಾಮೇಶ್ವರ ಜಯಂತಿ ಕಾರ್ಯಕ್ರಮ ನಡೆಯಿತು.