ಆಗಸ್ಟ್‌ 17ಕ್ಕೆ ಸಿದ್ದರಾಮೇಶ್ವರ ರಥೋತ್ಸವ: ಜಯಣ್ಣ

KannadaprabhaNewsNetwork |  
Published : Aug 15, 2026, 02:30 AM IST
14ಕೆಡಿವಿಜಿ4-ದಾವಣಗೆರೆಯಲ್ಲಿ ಶುಕ್ರವಾರ ಭೋವಿ ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಬಿ.ಟಿ.ಸಿದ್ದಪ್ಪ, ಜಿಲ್ಲಾ ಅಧ್ಯಕ್ಷ ಎಚ್.ಜಯಣ್ಣ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ನಗರದ ವೆಂಕಾ ಭೋವಿ ಕಾಲನಿಯಲ್ಲಿ ಶ್ರೀ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ 64ನೇ ರಥೋತ್ಸವ, ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ 24ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಆ.17ರಂದು ನಡೆಯಲಿದೆ ಎಂದು ಜಿಲ್ಲಾ ಭೋವಿ ಸಮಾಜದ ಗೌರವಾಧ್ಯಕ್ಷ ಬಿ.ಟಿ.ಸಿದ್ದಪ್ಪ, ಜಿಲ್ಲಾ ಅಧ್ಯಕ್ಷ ಎಚ್.ಜಯಣ್ಣ ತಿಳಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಶ್ರೀ ಜಗದ್ಗುರು ಸಿದ್ದರಾಮೇಶ್ವರ ಮಹಾಸಂಸ್ಥಾನ ಭೋವಿ ಗುರುಪೀಠದಿಂದ ನಗರದ ವೆಂಕಾ ಭೋವಿ ಕಾಲನಿಯಲ್ಲಿ ಶ್ರೀ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ದೇವರ 64ನೇ ರಥೋತ್ಸವ, ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ 24ನೇ ಸಂಸ್ಮರಣೋತ್ಸವ ಕಾರ್ಯಕ್ರಮ ಆ.17ರಂದು ನಡೆಯಲಿದೆ ಎಂದು ಜಿಲ್ಲಾ ಭೋವಿ ಸಮಾಜದ ಗೌರವಾಧ್ಯಕ್ಷ ಬಿ.ಟಿ.ಸಿದ್ದಪ್ಪ, ಜಿಲ್ಲಾ ಅಧ್ಯಕ್ಷ ಎಚ್.ಜಯಣ್ಣ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 63 ವರ್ಷಗಳಿಂದ ಪ್ರತಿ ಶ್ರಾವಣ ಮಾಸದ ಮೊದಲ ಸೋಮವಾರ ಶ್ರೀ ಸಿದ್ದರಾಮೇಶ್ವರ ಸ್ವಾಮಿಗಳ ರಥೋತ್ಸವ ವಿಜೃಂಭಣೆಯಿಂದ ನಡೆಸಿಕೊಂಡು ಬಂದಿದ್ದು, ಇಡೀ ಕರ್ನಾಟಕದಲ್ಲಿ ದಾವಣಗೆರೆಯಲ್ಲಿ ಮಾತ್ರವೇ ಶ್ರೀಗಳ ರಥೋತ್ಸವ ನಡೆಯುತ್ತಿರುವುದು ಸಹ ಅತ್ಯಂತ ವಿಶೇಷ ಸಂಗತಿ ಎಂದರು.

ಆ.17ರ ಬೆಳಿಗ್ಗೆ 9ಕ್ಕೆ ವೆಂಕಾ ಭೋವಿ ಕಾಲನಿಯ ಶ್ರೀ ಸಿದ್ದರಾಮೇಶ್ವರರ ಮಠದಿಂದ ರಥೋತ್ಸವ ಆರಂಭವಾಗಲಿದೆ. ಅರಳಿ ಮರ ವೃತ್ತ, ಗಣೇಶ ದೇವಸ್ಥಾನ, ಚಾಮರಾಜ ಪೇಟೆ, ಶ್ರೀ ರಾಮ ಮಂದಿರ, ಮಂಡಿಪೇಟೆ, ಗಡಿಯಾರ ಕಂಬದ ವೃತ್ತ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಶ್ರೀ ಗುರು ಬಕ್ಕೇಶ್ವರ ಸ್ವಾಮಿ ದೇವಸ್ಥಾನ, ಹಾಸಬಾವಿ ವೃತ್ತ, ಕೆ.ಆರ್.ವೃತ್ತದ ಮಾರ್ಗವಾಗಿ ವೆಂಕಾ ಭೋವಿ ಕಾಲನಿಯ ಶ್ರೀಮಠವನ್ನು ರಥೋತ್ಸವವು ತಲುಪಲಿದೆ ಎಂದರು.

ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ, ಕೆ.ಎಸ್.ಬಸವಂತಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕ ಸಮರ್ಥ ಎಂ.ಶಾಮನೂರು, ಕೇಂದ್ರದ ಮಾಜಿ ಸಚಿವ ಡಾ.ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಜಿಲ್ಲೆಯ ಹಾಲಿ-ಮಾಜಿ ಶಾಸಕರು, ವಿವಿಧ ಜನಪ್ರತಿನಿಧಿಗಳು ಭಾಗವಹಿಸುವರು. ರಾಜ್ಯದ ವಿವಿಧ ಮೂಲೆಗಳಿಂದ ಸಹಸ್ರಾರು

ಸಂಖ್ಯೆಯಲ್ಲಿ ಭೋವಿ ಸಮಾಜದ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದರು.

ಭೋವಿ ಸಮಾಜದ ಪ್ರಧಾನ ಕಾರ್ಯದರ್ಶಿ, ವಕೀಲ ವಿ.ಗೋಪಾಲ, ಎಚ್.ಬಿ.ವಿಜಯಕುಮಾರ, ಎಚ್.ವೆಂಕಟೇಶ, ಎ.ಬಿ.ನಾಗರಾಜ, ಜಿ.ಲಕ್ಷ್ಮಣ, ಬಿ.ಲಿಂಗರಾಜ, ಎಚ್.ಗಣೇಶ್, ಷಣ್ಮುಖಪ್ಪ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೀಲ್ಸ್ ಕಾಲದಲ್ಲೂ ಚಿತ್ರಮಂದಿರ ನಿರ್ಮಾಣ ಧೈರ್ಯದ ಕೆಲಸ
ಆಟೋ ನಿಲ್ದಾಣ ನಿರ್ಮಾಣ ಸಾಮಗ್ರಿಗಳ ತೆರವು: ಆಟೋ ಚಾಲಕರ ಸಂಘ ಆಕ್ರೋಶ