ಅಂಧ ಮಕ್ಕಳೊಂದಿಗೆ ಸಿದ್ಧರಾಮೇಶ್ವರ ಶ್ರೀಗಳ 40ನೆಯ ಜನ್ಮದಿನ ಸಂಭ್ರಮ

KannadaprabhaNewsNetwork |  
Published : Jul 20, 2025, 01:15 AM IST
ಕ್ಯಾಪ್ಷನ18ಕೆಡಿವಿಜಿ31 ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿಯವರ ಹುಟ್ಟು ಹಬ್ಬವನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಭೋವಿ ಗುರುಪೀಠದ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 40ನೇ ವರ್ಷದ ಹುಟ್ಟುಹಬ್ಬವನ್ನು ಇಲ್ಲಿನ ಹೊರವಲಯದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಅಂಧ ಮಕ್ಕಳಿಗೆ ಹಣ್ಣು, ಧಾನ್ಯ ನೀಡುವ ಮೂಲಕ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಭೋವಿ ಗುರುಪೀಠದ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 40ನೇ ವರ್ಷದ ಹುಟ್ಟುಹಬ್ಬವನ್ನು ಇಲ್ಲಿನ ಹೊರವಲಯದ ಶ್ರೀ ವೀರೇಶ್ವರ ಪುಣ್ಯಾಶ್ರಮದಲ್ಲಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿ ಅಂಧ ಮಕ್ಕಳಿಗೆ ಹಣ್ಣು, ಧಾನ್ಯ ನೀಡುವ ಮೂಲಕ ಆಚರಿಸಲಾಯಿತು.

ಆರ್.ಎಲ್. ಕಾನೂನು ಕಾಲೇಜಿನ ಉಪನ್ಯಾಸಕ ವಿದ್ಯಾಧರ ವೇದವರ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶ್ರೀ ಸಿದ್ಧರಾಮೇಶ್ವರ ಶ್ರೀಗಳು ಚಿಕ್ಕ ವಯಸ್ಸಿನಲ್ಲಿಯೇ ದೇಶ-ವಿದೇಶಗಳಲ್ಲಿ ಸಂಚರಿಸಿ, ಭೋವಿ ಸಮಾಜದ ಸಂಘಟನೆಯನ್ನು ಮಾಡಿ, ಎಲ್ಲರಿಗೂ ಆದರ್ಶವಾಗಿದ್ದಾರೆ. ಹುಟ್ಟುಹಬ್ಬವನ್ನು ಇಂದು ಅಂಧ ಮಕ್ಕಳೊಂದಿಗೆ ಆಚರಿಸುತ್ತಿರುವುದು ದೇವರಿಗೆ ಪ್ರಿಯವಾದ ಕಾರ್ಯವಾಗಿದೆ ಎಂದರು.

ವಕೀಲ ಎಸ್. ಹನುಮಂತಪ್ಪ ಮಾತನಾಡಿ, ಸ್ವಾಮೀಜಿ ಅವುರ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಬುದ್ಧ-ಬಸವ-ಅಂಬೇಡ್ಕರ್‌ ತತ್ವ ಆದರ್ಶಗಳನ್ನು ಮೈಗೂಡಿಸಿಕೊಂಡು, ಅವುಗಳಿಗೆ ಒತ್ತು ನೀಡುತ್ತಿದ್ದಾರೆ. ಸಮಾಜ ಸಂಘಟನೆ ಜೊತೆಗೆ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಅಂಬೇಡ್ಕರ್‌ ಆಶಯಗಳನ್ನು ಈಡೇರಿಸುತ್ತಿದ್ದಾರೆ. ಆ ಮೂಲಕ ಸಮಾಜವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆ. ಶ್ರೀಗಳ ಜನ್ಮಭೂಮಿ ದಾವಣಗೆರೆಯ ವೆಂಕಭೋವಿ ಕಾಲೋನಿಯಾಗಿದ್ದು, ದೇಶ-ವಿದೇಶಗಳನ್ನು ಸಂಚರಿಸಿ, ಅಲ್ಲಿನ ಉತ್ತಮ ಮೌಲ್ಯಗಳನ್ನು ಸಮಾಜದ ಬಂಧುಗಳಿಗೆ ತಿಳಿಸುತ್ತಿರುವುದು ಆದರ್ಶನೀಯವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಪಿ.ಶ್ರೀನಿವಾಸ, ಆರ್.ಶಿವಾನಂದ, ತಿಮ್ಮಣ್ಣ, ಶ್ರೀನಿವಾಸ ಹೊನ್ನೂರು, ವಕೀಲರಾದ ಎಂ.ಎನ್. ವಿಜಯೇಂದ್ರ, ಆಕಾಶ್‌ ರೆಡ್ಡಿ, ಶಬನಂ, ದೀಪಾ, ಪವನ, ಗೋವಿಂದಪ್ಪ ಹುಚ್ಚಂಗಿಪುರ, ನಾಗರಾಜ್, ಮತ್ತು ಸಮಾಜದ ಮುಖಂಡರಾದಕೃಷ್ಣ, ಅರುಣ್‌ಕುಮಾರ್, ಮಲ್ಲೇಶ್, ಮಂಜುನಾಥ, ಪರಶುರಾಮ್, ಅಶೋಕ ವಿ. ದ್ವಾರಕೀಶ್, ಪರಮೇಶ್, ಪತ್ರಕರ್ತೆ ಭಾರತಿ, ಜಾನಪದ ಕಲಾವಿದ ಉಮೇಶ ನಾಯ್ಕ ಇತರರು ಉಪಸ್ಥಿತರಿದ್ದರು.

- - -

-18ಕೆಡಿವಿಜಿ31.ಜೆಪಿಜಿ:

ದಾವಣಗೆರೆಯ ವೀರೇಶ್ವರ ಪುಣ್ಯಾಶ್ರಮದಲ್ಲಿ ಇಮ್ಮಡಿ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಹುಟ್ಟುಹಬ್ಬ ಆಚರಿಸಲಾಯಿತು.

PREV

Latest Stories

ಸಹನೆ, ತಾಳ್ಮೆ, ನೈತಿಕತೆಯಿಂದ ಯಶಸ್ಸು ಸಾಧ್ಯ
ಚಿಕ್ಕಬಳ್ಳಾಪುರಕ್ಕೂ ಬರಲಿದೆ ಕುಸುಮ್‌ ಯೋಜನೆ
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ