- ದಾವಣಗೆರೆಯಲ್ಲಿ ಗೆದ್ದರೂ ಚಿತ್ರದುರ್ಗಕ್ಕೆ ಅನುದಾನ ಒಯ್ತಿದ್ದರು: ಪ್ರವೀಣ ಜಾಧವ್ ಆರೋಪ,- - - ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಗೆದ್ದರೂ, ಚಿತ್ರದುರ್ಗ ಜಿಲ್ಲೆಗೆ ಅನುದಾನ ಒಯ್ಯುತ್ತಿದ್ದ ನಡೆಯೇ ಮಾಜಿ ಸಂಸದರ ಸೋಲಿಗೆ ಕಾರಣ. ಬೇಲಿಕೇರಿ ಹಗರಣದಲ್ಲಿ ಮಾಜಿ ಸಂಸದರು ಮಾಡಿದ ತಪ್ಪಿಗೆ ತಮ್ಮ ಜೈಲು ಪಾಲಾಗಿದ್ದರು. ಭೀಮಸಮುದ್ರದಲ್ಲಿ ಮೈನ್ಸ್ ಲಾರಿಗಳಿಂದ ಧೂಳು ಬರುತ್ತದೆಂದು ನಿಮ್ಮದೇ ಕುಟುಂಬದವರು ಮೈನ್ಸ್ ಲಾರಿ ತಡೆದು, ಅವುಗಳಿಂದ ಕಮಿಷನ್ ವಸೂಲು ಮಾಡಿದವರು ಎಂದು ದೂರಿದರು.
ಯಡಿಯೂರಪ್ಪನವರ ಆಶೀರ್ವಾದವಿದೆ ಎಂದು ಸಾವಿರಾರು ಲೈಟ್‌ಗಳನ್ನು ಅಳವಡಿಸಿ, ಮೈನ್ಸ್‌ನಲ್ಲಿ ಕೊಳ್ಳೆ ಹೊಡೆದವರು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ. ಕೇಂದ್ರ ಸಚಿವರಾಗಿದ್ದ ಅವರನ್ನು ಸಚಿವ ಸ್ಥಾನದಿಂದ ತೆಗೆದು ಹಾಕಿದ್ದು ಯಾಕೆಂಬುದು ಜನತೆಗೂ ಗೊತ್ತಿದೆ. ಜಿಲ್ಲೆ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು, ದಾವಣಗೆರೆಗೆ ಬರುವ ಮೊದಲು ನಿಮ್ಮ ಕುಟುಂಬದ ಆಸ್ತಿಯು ಎಷ್ಟಿತ್ತು? ಈಗ ಎಷ್ಟಾಗಿದೆ ಎಂಬುದನ್ನೂ ಸಾರ್ವಜನಿಕವಾಗಿ ಬಹಿರಂಗಪಡಿಸಿ ಎಂದು ಆಗ್ರಹಿಸಿದರು.ಜಮೀರ್ ಅಹಮ್ಮದ್ ಅವರಿಗೆ ಎಷ್ಟು ಹಣ ನೀಡಿದ್ದೀರಿ, ಹಿರಿಯೂರು ಶಾಸಕ ಸುಧಾಕರ್‌ಗೆ ಎಷ್ಟು ಹಣ ನೀಡಿದ್ದೀರೆಂದು ಕೇಳಿದರೆ, ಅದು ವ್ಯವಹಾರ ಎನ್ನುತ್ತೀರಿ. ಇದು ಒಳಒಪ್ಪಂದವಲ್ಲದೇ ಮತ್ತೇನು? ಸಿದ್ದೇಶ್ವರ ಅವರೇ, ನಿಮ್ಮ ರಾಜಕೀಯ ಮತ್ತು ಹಣದ ವ್ಯವಹಾರದ ರಹಸ್ಯ ಏನೆಂಬುದನ್ನು ಕ್ಷೇತ್ರದ ಜನರೇ ಮಾತನಾಡುತ್ತಿದ್ದಾರೆ. ಇಂತಹವರ ಪರ ಕೆಲವರು ಹೇಳಿಕೆ ನೀಡುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.
ಪಕ್ಷದ ಮುಖಂಡರಾದ ರಾಜು ವೀರಣ್ಣ, ಜಯರುದ್ರೇಶ, ದಯಾನಂದ, ಸುಮಂತ್, ಮಂಜು, ಕೆ.ಎನ್. ವೆಂಕಟೇಶ, ಗಿರೀಶ ಇತರರು ಇದ್ದರು.
ಕೋಟ್ ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಎರಡು ಬಣಗಳಾಗಿರುವುದಕ್ಕೆ ಮಾಜಿ ಸಂಸದ ಸಿದ್ದೇಶ್ವರರೇ ಕಾರಣ. ಈಗ ಕಾರ್ಯಕರ್ತರಲ್ಲೂ ಗೊಂದಲ ಮೂಡಿಸುತ್ತಿದ್ದಾರೆ. ತಕ್ಷಣವೇ ಬಿಜೆಪಿಯಿಂದ ಸಿದ್ದೇಶ್ವರರನ್ನು ಉಚ್ಚಾಟಿಸಲು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕ್ರಮ ಕೈಗೊಳ್ಳಬೇಕು
- ಪಂಜು ಪೈಲ್ವಾನ್, ಯುವ ಮುಖಂಡ- - - -14ಕೆಡಿವಿಜಿ2.ಜೆಪಿಜಿ: