ಸಿದ್ದೇಶ್ವರ ಶ್ರೀ ಅಧ್ಯಾತ್ಮ ಲೋಕದ ಮಹಾನ್ ಸಂತ: ಅಶೋಕ ಡಿ. ಸೊರಟೂರ

KannadaprabhaNewsNetwork |  
Published : Jan 05, 2026, 02:30 AM IST
ಕಾರ್ಯಕ್ರಮವನ್ನು ಅಶೋಕ ಡಿ. ಸೊರಟೂರ ಉದ್ಘಾಟಿಸಿದರು. | Kannada Prabha

ಸಾರಾಂಶ

ವಿಜಯಪುರದ ಜ್ಞಾನಯೋಗ ಮಂದಿರ ಸ್ಥಾಪನೆ ಮಾಡಿ ನಾಡಿನ ಲಕ್ಷಾಂತರ ಭಕ್ತರನ್ನು ಹೊಂದಿದ್ದ ಅಧ್ಯಾತ್ಮದ ಮಹಾನ್ ಶಿಖರವಾಗಿದ್ದರು.

ಲಕ್ಷ್ಮೇಶ್ವರ: ಸಿದ್ದೇಶ್ವರ ಶ್ರೀಗಳು ನಡೆದಾಡುವ ದೇವರೆಂದೇ ಪ್ರಸಿದ್ದ ಪಡೆದಿದ್ದರು. ನುಡಿದಂತೆ ನಡೆದು ನಡೆ ನುಡಿ ಒಂದೇ ಆಗಿದ್ದ ಆಧುನಿಕ ಜಗತ್ತಿನ ಸಂತರಾಗಿದ್ದಾರೆ ಎಂದು ಲಕ್ಷ್ಮೇಶ್ವರ ತಾಲೂಕು ಕಾನಿಪ ನೂತನ ಅಧ್ಯಕ್ಷ ಅಶೋಕ ಡಿ. ಸೊರಟೂರ ತಿಳಿಸಿದರು.

ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಶನಿವಾರ ಸಂಜೆ ಜರುಗಿದ ಪುಲಿಗೆರೆ ಪೌರ್ಣಿಮೆ ಕಾರ್ಯಕ್ರಮದ ೩೪ನೇ ಸಂಚಿಕೆ ಉದ್ಘಾಟಿಸಿ ಮಾತನಾಡಿದರು.

ಸಿದ್ದೇಶ್ವರ ಶ್ರೀಗಳು ತಮ್ಮ ಪ್ರವಚನಗಳ ಮೂಲಕ ಸಮಾಜದ ಸುಧಾರಣೆ ಮಾಡಿದ ಮಹಾನ್ ಸಂತರಾಗಿದ್ದರು. ಸಿದ್ದೇಶ್ವರ ಶ್ರೀಗಳು ದೇಶದ ಅತ್ಯುನ್ನತ ಪದ್ಮಶ್ರೀ ಪುರಸ್ಕಾರಕ್ಕೆ ಹೆಸರು ಘೋಷಣೆ ಆಗಿದ್ದರೂ ಅದನ್ನು ನಯವಾಗಿ ಬೇಡವೆಂದು ಹೇಳುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ವಿಜಯಪುರದ ಜ್ಞಾನಯೋಗ ಮಂದಿರ ಸ್ಥಾಪನೆ ಮಾಡಿ ನಾಡಿನ ಲಕ್ಷಾಂತರ ಭಕ್ತರನ್ನು ಹೊಂದಿದ್ದ ಅಧ್ಯಾತ್ಮದ ಮಹಾನ್ ಶಿಖರವಾಗಿದ್ದರು. ಜೇಬು ಇಲ್ಲದ ಅಂಗಿ ಹಾಕಿಕೊಂಡಿರುವ ಜಗತ್ತಿನ ಏಕೈಕ ಶರಣರಾಗಿದ್ದರು. ಬೇರೊಬ್ಬರ ಮನ ನೋಯಿಸುವ ಬದಲು ಅವರ ಮನ ಗೆಲ್ಲುವಲ್ಲಿ ಇರುವ ಸುಖ ಬೇರೆಲ್ಲೂ ಇಲ್ಲವೆಂದು ಹೇಳಿದವರು ಶರಣರು. ಶರಣರ ನಡೆ- ನುಡಿಗಳು ಒಂದೇ ಆಗಿದ್ದು, ಆಡಿದಂತೆ ಬಾಳಿ ತೋರಿಸಿದ ದಾರ್ಶನಿಕರಾಗಿದ್ದಾರೆ ಎಂದರು. ಈ ವೇಳೆ ಶಿಕ್ಷಕ ಫಕ್ಕೀರೇಶ ಚಕಾರದ ಸಿದ್ದೇಶ್ವರ ಶ್ರೀಗಳ ಕುರಿತು ಉಪನ್ಯಾಸ ನೀಡಿದರು. ಸೋಮೇಶ್ವರ ದೇವಸ್ಥಾನದ ಅರ್ಚಕರ ಸಂಘದ ಅಧ್ಯಕ್ಷ ದಿಗಂಬರ ಪೂಜಾರ, ಪತ್ರಿಕಾ ವರದಿಗಾರ ಶಿವಲಿಂಗಯ್ಯ ಹೊತಗಿಮಠ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಸೋಮೇಶ್ವರ ಭಕ್ತರ ಸೇವಾ ಸಮಿತಿಯ ಅಧ್ಯಕ್ಷ ಗುರುರಾಜ ಪಾಟೀಲ ಕುಲಕರ್ಣಿ ಮಾತನಾಡಿದರು. ಸಭೆಯಲ್ಲಿ ಚಂಬಣ್ಣ ಬಾಳಿಕಾಯಿ, ಪೂರ್ಣಾಜಿ ಕರಾಟೆ, ಸುರೇಶ ರಾಚನಾಯಕರ್, ಎನ್.ಆರ್. ಸಾತಪೂತೆ, ಸಿದ್ದನಗೌಡ ಬಳ್ಳೊಳ್ಳಿ, ನೀಲಪ್ಪ ಕರ್ಜಕಣ್ಣವರ, ಚಂದ್ರು ಹಂಪಣ್ಣವರ, ಶೈಲಾ ಆದಿ, ತಹಸೀಲ್ದಾರ, ಸಮೀರ್‌ ಪೂಜಾರ ಸೇರಿದಂತೆ ಅನೇಕರು ಇದ್ದರು. ಪ್ರಾ. ನಾಗರಾಜ ಕಳಸಾಪೂರ ಕಾರ್ಯಕ್ರಮ ನಿರ್ವಹಿಸಿದರು. ಶಿಕ್ಷಕ ನಾಗರಾಜ ಹೊಟ್ಟಿ ಸ್ವಾಗತಿಸಿದರು. ಜಿ.ಎಸ್. ಗುಡಗೇರಿ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ