ಮಲ್ಲಿಕಾರ್ಜುನ ಸಿದ್ದಣ್ಣವರ
ಡಾ.ಡಿ.ಎಂ.ನಂಜುಂಡಪ್ಪ ಆಯೋಗದ ಶಿಪಾರಸ್ಸಿನಂತೆ ಕಳೆದ 22 ವರ್ಷಗಳಿಂದ ಅಭಿವೃದ್ಧಿಯಲ್ಲಿನ ಪ್ರಾದೇಶಿಕ ಅಸಮಾನತೆ ನೀಗಿಸುವ ಕೆಲಸಗಳು ತಕ್ಕಮಟ್ಟಿಗೆ ನಡೆಯುತ್ತಿದ್ದರೂ ಕರ್ನಾಟಕದ ಉತ್ತರ ಭಾಗವನ್ನು ನೆರೆ, ಬರ, ಗುಳೆಗಳು ಅತಿಯಾಗಿ ಬಾಧಿಸುತ್ತಲೇ ಇವೆ.
ಹೀಗೆ ನೆರೆ ಉಕ್ಕಿದಾಗ, ಬರಗಾಲ ಆವರಿಸಿದಾಗ ಸರ್ಕಾರಗಳು ಶಾಶ್ವತ ಪರಿಹಾರದ ಮಾತುಗಳನ್ನು ಆಡುತ್ತ ಬಂದಿವೆಯೇ ಹೊರತು, ಆ ದಿಸೆಯಲ್ಲಿ ಯಾವುದೇ ಗಟ್ಟಿ ನಿರ್ಧಾರ ಕೈಕೊಳ್ಳುವುದಿಲ್ಲ ಎನ್ನುವುದನ್ನು ಪ್ರಸಕ್ತ ಬಜೆಟ್ ಮತ್ತೊಮ್ಮೆ ಸಾಬೀತು ಮಾಡಿದೆ. ಸಿದ್ದರಾಮಯ್ಯ ಅವರು ಈ ಯಾವುದೇ ಸಮಸ್ಯೆಗಳು ನೆನಪೇ ಇಲ್ಲದವರಂತೆ ಬಜೆಟ್ ಮಂಡಿಸಿದರು. ಸಂತ್ರಸ್ತರು, ಸಂಕಟಪಡುವವರ ಸಮಾಧಾನಕ್ಕಾದರೂ ಈ ವಿಷಯ ಪ್ರಸ್ತಾಪಿಸುವ ಗೋಜಿಗೆ ಹೋಗಿಲ್ಲ.ನದಿಗಳ ಅತಿಕ್ರಮಣ ತೆರವು
ಇದೇ ಕಾರಣಕ್ಕೆ ಈ ಎಲ್ಲ ನದಿಗಳ ಸರ್ವೇ ಮಾಡಿ, ಮುಲಾಜಿಲ್ಲದೇ ಅತಿಕ್ರಮಣ ತೆರವುಗೊಳಿಸುವ ಮೂಲಕ ನೀರು ಸರಾಗವಾಗಿ ಹರಿದು ಹೋಗುವಂತೆ ಮತ್ತು ಹೆಚ್ಚು ಅವಧಿ ನಿರಂತರವಾಗಿ ಹರಿಯುವಂತೆ ಮಾಡಬೇಕು ಎನ್ನುವುದು ಬಹುದಿನಗಳ ಬೇಡಿಕೆ.
ಬರ, ಗುಳೆಗೆ ಔಷಧಿ
ಪ್ರಸಕ್ತ ಬಜೆಟ್‌ನಲ್ಲಿ ಸಿದ್ದರಾಮಯ್ಯ ಅವರು ಮೆಳ್ಳಿಗೇರಿ- ಹಲಗಲಿ, ಸಸಾಲಟ್ಟಿ-ಶಿವಲಿಂಗೇಶ್ವರ, ಸತ್ತಿಗೇರಿ, ಮಾರ್ಕಂಡೇಯ, ಸಂತಿ ಬಸ್ತವಾಡ, ಯಲ್ಲಾಪುರ, ಕಿರವತ್ತಿ, ಕೆರೂರು, ಹೊರ್ತಿ, ಚಿಮ್ಮಲಗಿ, ಮುಳವಾಡ ಸೇರಿದಂತೆ ಪ್ರಮುಖ ಏತನೀರಾವರಿ ಯೋಜನೆಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸುವ ಮತ್ತು ಯಲಬುರ್ಗಾ ಹಾಗೂ ಕುಕನೂರು ತಾಲೂಕಿನ 38 ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಳ್ಳುವುದಾಗಿ ಹೇಳಿರುವುದು ಆಶಾದಾಯಕ ಎನಿಸಿದ್ದರೂ ಪ್ರಮುಖ ನೀರಾವರೀ ಯೋಜನೆಗಳಾದ ತುಂಗಾ ಮೇಲ್ದಂಡೆ, ಮಹದಾಯಿ ವಿಷಯವಾಗಿ ಕೇಂದ್ರದೆಡೆ ಹಾಗೂ ನವಲಿ ಸಮಾನಾಂತರ ಜಲಾಶಯ ನಿರ್ಮಾಣ ಸಂಬಂಧ ತೆಲಂಗಾಣ, ಆಂದ್ರಪ್ರದೇಶದೆಡೆ ಬೊಟ್ಟು ಮಾಡಿರುವುದು ಜನತೆಯಲ್ಲಿ ನಿರಾಸೆ ಹುಟ್ಟಿಸಿದೆ.
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರಡ್ಡಿ ಅವರಿಗೆ ನೀರು ಬಳಕೆಯ ಸರಿಯಾದ ಯೋಜನೆಗಳಿಲ್ಲದೇ ಬರಗಾಲ ಹಾಗೂ ಭೂಮಿ, ನೀರು ಇದ್ದಾಗ್ಯೂ ಉತ್ತರದ ಗುಳೇ ಪಿಡುಗು ತಪ್ಪಿತ್ತಿಲ್ಲ ಎನ್ನುವ ವಾಸ್ತವ ಈ ಬಾಗದ ಜನಪರ ಕಳಕಳಿಯ ನಾಯಕ ಬಸವರಾಜ ರಾಯರಡ್ಡಿ ಅವರಿಗೆ ಗೊತ್ತು. ಅವರೇ ಈಗ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು. ಮೇಲಾಗಿ ಈ ಬಜೆಟ್ ರೂಪಿಸುವಲ್ಲಿ ಹಗಲಿರುಳು ಶ್ರಮಿಸಿದವರು. ಹೀಗಿರುವಾಗ ಉತ್ತರದ ನೆರೆ, ಬರ, ಗುಳೆ ಮರೆತು ಮುಖ್ಯಮಂತ್ರಿಗಳು ಬರೀ ಗ್ಯಾರಂಟಿ ಜಪಿಸಿದ್ದು ಏಕೆ? ಎನ್ನುವುದು ಯಕ್ಷಪ್ರಶ್ನೆಯಾಗಿದೆ.