ಕನ್ನಡಪ್ರಭ ವಾರ್ತೆ ಮಾಗಡಿ
ತಾಲೂಕಿನ ದಮ್ಮನ ಕಟ್ಟೆ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಯತೀಂದ್ರ ಅವರಿಗೆ ತಂದೆಯ ಮೇಲೆ ಅಭಿಮಾನ, ಪ್ರೀತಿ ಇದೆ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿರಲಿ ಎಂಬ ಭಾವನೆಯಿಂದ ಹೇಳಿದ್ದಾರೆ. ಇದನ್ನು ಹೈಕಮಾಂಡ್ ಅವರು ಒಪ್ಪಿಕೊಂಡು ಅವರನ್ನೇ ಮುಂದುವರಿಸುವುದಾದರೆ ನಮ್ಮದೇನು ತಕರಾರು ಇಲ್ಲ. ಇದನ್ನು ಹೈಕಮಾಂಡ್ ಅಂತಿಮವಾಗಿ ತೀರ್ಮಾನಿಸಲಿದೆ. ನಾವ್ಯಾರು ಹೈಕಮಾಂಡ್ ಗಿಂತ ದೊಡ್ಡವರಲ್ಲ, ಈ ಬಗ್ಗೆ ಯಾರೂ ಮಾತನಾಡಬಾರದು ಎಂದರು.
ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಬೇರೆ ಯಾರಾದರೂ ಹೇಳಿಕೆ ನೀಡಿದರೆ ನೋಟಿಸ್ ಕೊಡುತ್ತಾರೆ. ಯತೀಂದ್ರ ಅವರಿಗೇಕೆ ನೋಟಿಸ್ ಕೊಡುತ್ತಿಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ, ದೊರೆ ತಪ್ಪು ಮಾಡಿದರೆ ದೂರು ಇಲ್ಲವಂತೆ ಎಂದು ಉತ್ತರ ಹೇಳುತ್ತಾ ಮುಗುಳು ನಗೆ ಬೀರಿದರು.ಕಾಂಗ್ರೆಸ್ ನ ಕೆಲ ಮುಖಂಡರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರಲ್ಲ ಎಂಬ ಪ್ರಶ್ನೆಗೆ, ಮುಂಬರುವ ಪುರಸಭೆ ಚುನಾವಣೆಯಲ್ಲಿ ಹಲವಾರು ಮಂದಿ ಕಾಂಗ್ರೆಸ್ ನಿಂದ ಟಿಕೇಟ್ ನೀಡುವಂತೆ ಕೇಳಿದರು. ಅದನ್ನು ಈಗ ತೀರ್ಮಾನಿಸಲು ಸಾಧ್ಯವಿಲ್ಲ. ಚುನಾವಣೆ ನಿಗದಿಯಾಗಲಿ, ಆ ವೇಳೆ ಸ್ಥಳಿಯ ಜನರು ತೀರ್ಮಾನಿಸಿದವರಿಗೆ ಟಿಕೆಟ್ ನೀಡುವುದಾಗಿ ಹೇಳಿದೆ. ಇದಕ್ಕೆ ನಮ್ಮ ಬಳಿ ಇರುವವರಿಗೆ ಅವರು (ಜೆಡಿಎಸ್) ಪ್ರಚೋದನೆ ಕೊಟ್ಟಿದಕ್ಕೆ ಕೆಲ ಮುಖಂಡರು ಹೋಗಿದ್ದಾರೆ ಹೊರತು ನನ್ನ ಕಾರ್ಯವೈಖರಿ, ನನ್ನ ಮೇಲೆ ಮುನಿಸಿಕೊಂಡು, ಬೇಸರ ಮಾಡಿಕೊಂಡು ಹೋಗಿಲ್ಲ ಎಂದು ಸ್ವಷ್ಟಪಡಿಸಿದರು.
ನಾರಸಂದ್ರ ಗ್ರಾಪಂ ಅಧ್ಯಕ್ಷೆ ರೇಖಾ ನಂದೀಶ್, ಸದಸ್ಯ ಶಿವಪ್ರಸಾದ್, ರಾಮಕೃಷ್ಣಪ್ಪ, ಶಿವಕುಮಾರ, ಚಿಲೂರು ರಾಜಣ್ಣ, ಮರೂರು ಜಯರಾಮಯ್ಯ, ಕಾಳೇಗೌಡ, ಮರಿಗೌಡ, ತಾಪಂ ಮಾಜಿ ಸದಸ್ಯ ತಿಪ್ಪಸಂದ್ರ ವೆಂಕಟೇಶ್, ಪಿಡಿಒ ಶಿವಕುಮಾರ, ಕುದೂರು ಲೋಕೇಶ್, ಜಿ.ಪಂ. ಚರಣ್ ರಾಜು, ಸಿಡಿಪಿಓ ಸುರೇಂದ್ರ ಮತ್ತಿತರರು ಹಾಜರಿದ್ದರು.---- 7ಕೆಆರ್ ಎಂಎನ್ 10.ಜೆಪಿಜಿ
ಮಾಗಡಿ ತಾಲೂಕಿನ ದಮ್ಮನ ಕಟ್ಟೆ ಗ್ರಾಮದಲ್ಲಿ ನೂತನ ಅಂಗನವಾಡಿ ಕಟ್ಟಡವನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಉದ್ಘಾಟಿಸಿದರು.