ಕನ್ನಡಪ್ರಭ ವಾರ್ತೆ ವಿಜಯಪುರ:
ಕಾಂಗ್ರೆಸ್ ಸರ್ಕಾರದ ವಕ್ಫ್ ಲ್ಯಾಂಡ್ ಜಿಹಾದ್ ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಬಿಜೆಪಿ ಜಿಲ್ಲಾ ಘಟಕದಿಂದ ನಮ್ಮಭೂಮಿ ನಮ್ಮಹಕ್ಕು ಘೋಷಣೆಯಡಿ ಶುಕ್ರವಾರ ಬೆಳಗ್ಗೆಯಿಂದ ಸಂಜೆ ವರೆಗೂ ಪ್ರತಿಭಟನಾ ಧರಣಿ ನಡೆಸಲಾಯಿತು. ದೇವರ ಗುಡಿಗಳನ್ನು ಸಹ ವಕ್ಫ್ ಗೆ ಸೇರಿಸಿದ್ದಾರೆ. ದೇವಸ್ಥಾನ, ರೈತರ, ಅಲ್ಪಸಂಖ್ಯಾತರ ಯಾರದ್ದೇ ಜಮೀನು ಹೋದರು ಚಿಂತಿಸಬೇಕಿಲ್ಲ. ನಾನೊಬ್ಬ ಸರ್ಕಾರದ ಪ್ರತಿನಿಧಿಯಾಗಿ ಲೋಕಸಭೆಯಲ್ಲಿ ಹೋರಾಟ ಮಾಡಿ ನ್ಯಾಯ ಒದಗಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಜೆಪಿಸಿ ಕಮಿಟಿ ಮಾಡಿ ಎಲ್ಲ ದಾಖಲೆಗಳನ್ನು ತರಿಸಿಕೊಂಡಿದ್ದಾರೆ. ವಕ್ಫ್ ಮಾಡಿದ ಅವಾಂತರಕ್ಕೆ ಕಾಂಗ್ರೆಸ್ ಶಾಸಕರ ವಿರೋಧವಿದೆ. ವಕ್ಫ್ ವಿಚಾರ ಡೈವರ್ಟ್ ಮಾಡಲು ಬಿಜೆಪಿ ಶಾಸಕರನ್ನು ಖರೀದಿ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಾರೆ. ಆದರೆ, ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದನ್ನು ನೋಡಿ ಕಾಂಗ್ರೆಸ್ ಶಾಸಕರೇ ತಲೆಕೆಟ್ಟು ಬಿಜೆಪಿಗೆ ಸೇರಲು ಸಿದ್ಧವಾಗಿದ್ದಾರೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ಮಾತನಾಡಿ, 1974ರ ಗೆಜೆಟ್ ರದ್ದು ಮಾಡಲು ಹೋರಾಟ ಮಾಡುತ್ತಿದ್ದೇವೆ. ಕಳೆದ ಎರಡು ತಿಂಗಳ ಹಿಂದೆ ಜಿಲ್ಲೆಗೆ ಬಂದ ಸಚಿವ ಜಮೀರ್ ಅಹಮ್ಮದ್ ಖಾನ್ ವಕ್ಫ್ ಅದಾಲತ್ ನಡೆಸಿದರು. ಮುಖ್ಯಮಂತ್ರಿಗಳು ಹೇಳಿದ್ದು, 1974ರ ಗೆಜೆಟ್ ಪ್ರಕಾರ ಎಲ್ಲ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸಿ ಎಂದು ಆದೇಶಿದಿದ್ದಾರೆ. ಅದರ ಹಿನ್ನೆಲೆ ಈಗಾಗಲೇ ಬೃಹತ್ ಹೋರಾಟ ಮಾಡಿದ ನಂತ್ರ ಜಿಲ್ಲೆಗೆ ಜೆಪಿಸಿ ಕಮೀಟಿ ಬಂದು ಅವಹಾಲು ಸ್ವೀಕಾರ ಮಾಡಿದ ಮೇಲೂ ಸಹ ಇನ್ನೂ ಪಹಣಿಗಳಲ್ಲಿ ವಕ್ಫ್ ಹೆಸರು ಸೇರಿಸುತ್ತಿದ್ದಾರೆ. ಈ ವಕ್ಫ್ ಎಂಬ ಪೆಡಂಭೂತ ಎಲ್ಲೆಡೆ ಪಸರಿಸುತ್ತಿದ್ದು, ರೈತ ಸಮುದಾಯ ಆತಂಕದಲ್ಲಿದೆ. ವಿಜಯಪುರ ಜಿಲ್ಲೆಯೊಂದರಲ್ಲೆ 16ಸಾವಿರ ಎಕರೆ, ರಾಜ್ಯದಲ್ಲಿ 1.20 ಲಕ್ಷ ಎಕರೆ, ದೇಶದಲ್ಲಿ 38 ಲಕ್ಷ ಎಕರೆ ಜಮೀನು ವಕ್ಫ್ ಆಗಿದೆ ಎಂದರು.ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ರಾಜ್ಯ ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ ಗೈರು:
ಧರಣಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಕೆ.ಬೆಳ್ಳುಬ್ಬಿ, ಸೋಮನಗೌಡ ಪಾಟೀಲ ಸಾಸನೂರ, ರಮೇಶ ಭೂಸನೂರ, ಚಂದ್ರಶೇಖರ ಕವಟಗಿ, ರಾಜಶೇಖರ ಮಗಿಮಠ, ಮಳುಗೌಡ ಪಾಟೀಲ. ಗುರುಲಿಂಗಪ್ಪ ಅಂಗಡಿ, ಸಂಜೀವ ಐಹೊಳ್ಳಿ, ಈರಣ್ಣ ರಾವೂರ, ಚಿದಾನಂದ ಹಾಗೂ ಪಕ್ಷದ ಕಾರ್ಯಕರ್ತರು ಹಲವಾರು ರೈತರು ಭಾಗವಹಿಸಿದ್ದರು.
ಬಿಜೆಪಿ ಸರ್ಕಾರವಿದ್ದಾಗ ಅನ್ವರ್ ಮಾನಪ್ಪಾಡಿ ಕೊಟ್ಟ ವರದಿಯಲ್ಲಿ ಶೇ.99ರಷ್ಟು ವಕ್ಫ್ ಭೂಮಿಯನ್ನು ಕಮಿಟಿ ಸದಸ್ಯರು ಹಾಗೂ ಕಾಂಗ್ರೆಸ್‌ನವರೇ ಎತ್ತಿ ಹಾಕಿದ್ದಾರೆ. ಸಿದ್ರಾಮಣ್ಣ ನಿನಗೆ ಅಷ್ಟು ಕಾಳಜಿ ಇದ್ದರೆ ಇದರ ಬಗ್ಗೆ ನೀನು ತನಿಖೆ ಮಾಡಿಸು ಅಥವಾ ಸಿಬಿಐಗೆ ಕಳಿಸು. ಅಲ್ಲಿ ಮೇಲೆ ಮೋದಿ ಗಂಡಸು ಇದ್ದಾನೆ. ಅವ ಎಲ್ಲ ಮಾಡ್ತಾನೆ. ಅದು ಬಿಟ್ಟು ಇಲ್ಲಿ ಕುಯಿ ಕುಯಿ ಅಂದರೆ ಏನು ಆಗಲ್ಲ.