ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದಲ್ಲಿರುವ ಎಂ.ಸಿ ಆಂಜನೇಯರೆಡ್ಡಿ ಕಲ್ಯಾಣ ಮಂಟಪದಲ್ಲಿ ಚಿಂತಾಮಣಿ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಸಮಿತಿಯ ವತಿಯಿಂದ ‘ವೋಟ್ ಚೋರ್ ಗದ್ದಿ ಚೋಡ್’ ಎಂಬ ಘೋಷಣೆಯಡಿ ಮತಗಳ್ಳತನದ ವಿರುದ್ಧ ಸಹಿ ಸಂಗ್ರಹಣಾ ಅಭಿಯಾನಕ್ಕೆ ಎಐಸಿಸಿ ಜಂಟಿ ಕಾರ್ಯದರ್ಶಿ ಅಭಿಷೇಕ್ ದತ್ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಸಹಿ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.ಎಐಸಿಸಿ ಜಂಟಿ ಕಾರ್ಯದರ್ಶಿ ಅಭಿಷೇಕ್ ದತ್ ಮಾತನಾಡಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಪಂಚ ಗ್ಯಾರಂಟಿಗಳಾದ ಉಚಿತ ಸಾರಿಗೆ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಅನ್ನಭಾಗ್ಯ ಯೋಜನೆಗಳು ನಿರಂತರವಾಗಿ ನೀಡುತ್ತಿದೆ. ೧ ಕೋಟಿಗೂ ಹೆಚ್ಚಿನ ಸಂಖ್ಯೆಯ ಮಹಿಳೆಯರಿಗೆ ಮಾಸಿಕ ೨ಸಾವಿರ ನೀಡಲಾಗುತ್ತಿದೆ ಎಂದರು.
ಬಿಜೆಪಿಯಿಂದ ಮತಗಳ್ಳತನಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷದವರು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದಿರುವುದು ಇಡೀ ದೇಶವೇ ನೋಡಿದೆಯೆಂದರು. ೮೦ ರೂಪಾಯಿ ಕೊಟ್ಟು ಮತದಾರರನ್ನು ಡಿಲಿಟ್ ಮಾಡಿರುವುದು ಸಾಬೀತಾಗಿದ್ದು, ಒಂದೊಮ್ಮೆ ನಾವುಗಳು ಒಗ್ಗಟ್ಟಿನಿಂದ ಮತಗಳ್ಳತನವನ್ನು ತಡೆಯಲು ಮುಂದಾದರೆ ಮುಂದಿನ ಬಾರಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಸ್ಥಿತ್ವಕ್ಕೆ ಬರಲು ಸಾಧ್ಯವಿಲ್ಲ. ರಾಷ್ಟ್ರಪತಿಗಳಿಗೆ ೫ ಕೋಟಿ ಜನರ ಸಹಿ ಮಾಡಿಸಿ ಕಳುಹಿಸುವುದರ ಮೂಲಕ ಬಿಜೆಪಿಯ ನಿಜಬಣ್ಣ ಬಯಲು ಮಾಡುವುದಾಗಿ ತಿಳಿಸಿದರು.
ಬಿಜೆಪಿ ಸರ್ಕಾರ ವಾಮಮಾರ್ಗಗಳ ಮೂಲಕ ಅಧಿಕಾರದ ಗದ್ದುಗೆಯನ್ನು ಹಿಡಿಯುತ್ತಿದ್ದು ಆಪರೇಷನ್ ಕಮಲ, ಶಾಸಕರ ಖರೀದಿ ಸೇರಿದಂತೆ ವಿವಿಧ ಆಮಿಷಗಳನ್ನು ನೀಡುವುದರ ಮೂಲಕ ಚುನಾಯಿತ ಸರ್ಕಾರಗಳನ್ನು ಕೆಡವಿ ಅಧಿಕಾರಕ್ಕೆ ಬರುತ್ತಿದೆ ಎಂದು ಟೀಕಿಸಿದರು.ವಿವಿಧ ಕ್ಷೇತ್ರಗಳಲ್ಲಿ ಮತಗಳ್ಳತನ
ಸಚಿವ ಡಾ. ಎಂ.ಸಿ. ಸುಧಾಕರ್ ಮಾತನಾಡಿ, ವಿರೋಧಿ ಪಕ್ಷದ ನಾಯಕ ರಾಹುಲ್‌ಗಾಂಧಿ ಕರ್ನಾಟಕದಲ್ಲಿ ನಡೆದಿರುವ ಮತಗಳ್ಳತನದ ಬಗ್ಗೆ ರಾಹುಲ್ ಗಾಂಧಿ ಸಾಕ್ಷಿ ಸಮೇತ ದಾಖಲೆ ಬಿಡುಗಡೆ ಮಾಡಿದ್ದಾರೆ. ಮಹದೇವಪುರ, ಆಳಂದ, ಚಿಕ್ಕಪೇಟೆ ವಿಧಾನ ಸಭಾ ಕ್ಷೇತ್ರಗಳಲ್ಲಿ ಅಕ್ರಮ ಮತದಾರರನ್ನು ಗುರುತಿಸಿದ್ದು ಕೆಲವೊಂದು ಸುದ್ದಿ ವಾಹಿನಿಗಳು ಇದನ್ನು ಸಾಕ್ಷಿ ಸಮೇತವಾಗಿ ಬಯಲಿಗೆ ತಂದಿವೆ ಎಂದರು.ಬಿಜೆಪಿ ವಾಮ ಮಾರ್ಗದಲ್ಲಿ ಕೇಂದ್ರದ ಚುಕ್ಕಾಣಿಯನ್ನು ಹಿಡಿಯುವಂತಾಗಿದೆ ಒಂದೊಮ್ಮೆ ನಾವುಗಳು ಪ್ರತಿಯೊಂದು ಬೂತ್ ಗಳಲ್ಲಿ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಮತದಾರರ ಪಟ್ಟಿ ಸಂಪೂರ್ಣ ಅಧ್ಯಯನ ಮಾಡಿ ಜವಾಬ್ದಾರಿ, ಮುತುವರ್ಜಿಯಾಗಿ ಪರಿಶೀಲಿಸಿದರೆ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಆಟ ನಡೆಯುವುದಿಲ್ಲವೆಂದರು.
ಸಂವಿಧಾನ ಸಂರಕ್ಷಣೆ ಜನರ ಹಕ್ಕುಸಂವಿಧಾನ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ. ಜನರ ಹಕ್ಕು, ಜನರ ತೀರ್ಮಾನವನ್ನು ಕದಿಯುವ ಪ್ರಯತ್ನಗಳಿಗೆ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ, ಮತಗಳ್ಳತನ ಮಾಡಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಾಮಮಾರ್ಗದ ಮೂಲಕ ಅಧಿಕಾರಕ್ಕೆ ಬಂದಿದೆ. ಚುನಾವಣೆಯ ಸಮರ್ಪಕವಾಗಿ ನಡೆದಿದ್ದರೆ ದೇಶದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿರುತ್ತಿತ್ತು ಮತ್ತು ರಾಹುಲ್ ಗಾಂಧಿ ಪ್ರಧಾನಿಯಾಗುತ್ತಿದ್ದರೆಂದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಉಸ್ತುವಾರಿ ಕೃಷ್ಣಂರಾಜು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಾವಳ್ಳಿ ಉದಯ್, ಲೋಕಸಭಾ ಚುನಾವಣೆಯ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಗೌತಮ್, ಕಾಂಗ್ರೆಸ್ ಪಕ್ಷದ ಜಿಲ್ಲಾದ್ಯಕ್ಷ ಕೇಶವರೆಡ್ಡಿ, ಕಾಂಗ್ರೇಸ್ ಪಕ್ಷದ ರಾಜ್ಯ ಮುಖಂಡ ಪುಟ್ಟುಆಂಜಿನಪ್ಪ, ತಾಲ್ಲೂಕು ಕಾಂಗ್ರೇಸ್ ಅಧ್ಯಕ್ಷ ಮುರುಗಮಲ್ಲ ಲಕ್ಷಿ÷್ಮನಾರಾಯಣರೆಡ್ಡಿ, ಎಸ್ಸಿ ಘಟಕದ ಜಿಲ್ಲಾದ್ಯಕ್ಷ ಚಿನ್ನಸಂದ್ರ ನಾರಾಯಣಸ್ವಾಮಿ, ಕಾರ್ಮಿಕ ವಿಭಾಗದ ಜಿಲ್ಲಾದ್ಯಕ್ಷ ಕೋನಪಲ್ಲಿ ಕೊದಂಡ, ಜಿಲ್ಲಾ ಯುವ ಕಾಂಗ್ರೇಸ್ ಅದ್ಯಕ್ಷ ಕುಬೇರ ಅಚ್ಚು, ನಗರ ಅಧ್ಯಕ್ಷ ಸಾಯಿನಾಥ್, ಗ್ರಾಮಾಂತರ ಯುವ ಕಾಂಗ್ರೆಸ್ ಅದ್ಯಕ್ಷ ಕಲ್ಯಾಣ್‌ರೆಡ್ಡಿ ನಗರಸಭೆ ಅಧ್ಯಕ್ಷ ಆರ್.ಜಗನ್ನಾಥ್, ಉಪಾದ್ಯಕ್ಷೆ ರಾಣಿಯಮ್ಮ ಸೇರಿದಂತೆ ಎಲ್ಲಾ ನಗರಸಭಾ ಸದಸ್ಯರು, ತಾಲ್ಲೂಕು ಮಟ್ಟದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು, ಮಹಿಳಾ ಘಟಕದ ಸದಸ್ಯರು ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿ ಮತ್ತಿತರರು ಉಪಸ್ಥಿತರಿದ್ದರು.