ಕನ್ನಡಪ್ರಭ ವಾರ್ತೆ ದೇವದುರ್ಗ
ಪಟ್ಟಣದಲ್ಲಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ಮೌನ ಪ್ರತಿಭಟನೆ ಮಾಡಿ, ದೇಶದ ಪ್ರತಿಷ್ಠಿತ ನಗರವಾದ ಕೊಲ್ಕತ್ತದ ಆರ್‌ಜಿಕರ್ ವೈದ್ಯಕೀಯ ವಿದ್ಯಾಲಯದ ಡಾ.ಮೌಮಿತ ದೇಬನಾಥರನ್ನು ಕರ್ತವ್ಯದಲ್ಲಿ ಇರುವಾಗಲೇ ಅತ್ಯಾಚಾರವೆಸಗಿ, ಬರ್ಬರವಾಗಿ ಹತ್ಯೆಗೈದಿರುವ ಘಟನೆಯನ್ನು ಖಂಡಿಸಿತು.
ವೈದ್ಯೆಯ ಭಾವಚಿತ್ರದ ಮುಂದೆ ಮೇಣದ ಬತ್ತಿ ಹೊತ್ತಿಸುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪಟ್ಟಣದ ವಿವಿಧ ಬೀದಿಗಳ ಮೂಲಕ ಮೌನ ಮೆರವಣಿಗೆ ಮಾಡಿ ರಾಷ್ಟ್ರಪತಿಗಳಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿರಿಗೆ ಸಲ್ಲಿಸಿದರು.ಈ ವೇಳೆ ಡಾ.ರಾಜೇಂದ್ರ ಜಹಗೀರದಾರ, ಡಾ.ಬಸವರಾಜ ರೆಡ್ಡಿ, ಡಾ.ಮಂಜುನಾಥ ಬೆನಕನ್, ಡಾ.ಶಿವಾನಂದ ಚೌವ್ಹಾಣ, ಡಾ.ಸಿದ್ರಾಮರೆಡ್ಡಿ, ಡಾ.ಮಾರುತಿ, ಡಾ.ನಿರ್ಮಲಾ, ಡಾ.ಶ್ರೀದೇವಿ, ಡಾ.ಅಪ್ಸನಾ ಸೇರಿ ಖಾಸಗಿ ಹಾಗೂ ಸರ್ಕಾರಿ ವೈದ್ಯರು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.