17 ಲಕ್ಷ ಮೌಲ್ಯದ ಬೆಳ್ಳಿ ಕಳವು: ಐವರ ಬಂಧನ

KannadaprabhaNewsNetwork |  
Published : Aug 23, 2026, 03:00 AM IST
ಚನ್ನಮ್ಮನ ಕಿತ್ತೂರು | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು ಚಿನ್ನಾಭರಣ ಅಂಗಡಿಯಲ್ಲಿ ನಡೆದ ಲಕ್ಷಾಂತರ ಮೌಲ್ಯದ ಬೆಳ್ಳಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ ಅಂಗಡಿಯಲ್ಲಿ ಕಳವು ಮಾಡಿದ್ದ ₹17 ಲಕ್ಷ ಮೌಲ್ಯದ 7 ಕೆಜಿ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ಚಿನ್ನಾಭರಣ ಅಂಗಡಿಯಲ್ಲಿ ನಡೆದ ಲಕ್ಷಾಂತರ ಮೌಲ್ಯದ ಬೆಳ್ಳಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಐದು ಜನ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜತೆಗೆ ಅಂಗಡಿಯಲ್ಲಿ ಕಳವು ಮಾಡಿದ್ದ ₹17 ಲಕ್ಷ ಮೌಲ್ಯದ 7 ಕೆಜಿ ಬೆಳ್ಳಿ ಆಭರಣ ಮತ್ತು ಕೃತ್ಯಕ್ಕೆ ಬಳಸಿದ್ದ ₹5 ಲಕ್ಷ ಮೌಲ್ಯದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ರಾಜಸ್ಥಾನದ ಹನುಟಿಯಾದ ನಾಸಿರಸಿಂಗ್ ಅಲಿಯಾಸ್ ಪವನ ಹೇತುಸಿಂಗ್, ಭಿಲೋಕಾಬಡಿಯಾದ ದಿಲೀಪ್‌ಸಿಂಗ್ ದೇವಿಸಿಂಗ್, ಮಧ್ಯಪ್ರದೇಶದ ದಾಖಡಿಯ ಅರ್ಜುನಸಿಂಗ್ ಶಿವನಶಿಂಗ್‌, ಶಹಾಪೂರದ ಲೋಕೇಶ ಚಿಮನರಾಮ ಮೇಗವಾಲ ಹಾಗೂ ಬೇವರಖಾಸದ ನರೇಂದ್ರ ಪ್ರಭುಜಿ ಅಲಿಯಾಸ್ ಪ್ರಭುಲಾಲ ಗುರ್ಜರ ಬಂಧಿತ ಆರೋಪಿಗಳು.

ಪಟ್ಟಣದ ಮಾನಜ್ಜ ಜ್ಯುವೆಲರ್ಸ್‌ನ ಮಾಲೀಕರಾದ ಸುಬ್ರಮಣ್ಯ ಪತ್ತಾರ ಅವರಿಗೆ ಇವು ಸೇರಿದ್ದಾಗಿದೆ. ಅವರು ಎಂದಿನಂತೆ ರಾತ್ರಿ ಅಂಗಡಿ ಬಂದ್‌ ಮಾಡಿಕೊಂಡು ಹೋಗಿದ್ದಾರೆ. ಆ.12ರಂದು ಮಧ್ಯರಾತ್ರಿ ಈ ಕಳ್ಳತನ ನಡೆದಿತ್ತು. ನಂತರ ತೀವ್ರ ಸವಾಲಾಗಿದ್ದ ಪ್ರಕರಣವನ್ನು ವೈಜ್ಞಾನಿಕ ತಳಹದಿಯ ಮೇಲೆ ಪೊಲೀಸರು ಶೋಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಬಿ.ಬಸರಗಿ ಹಾಗೂ ಡಿವೈಎಸ್ಪಿ ಡಾ.ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್‌ಐಗಳಾದ ಭರತ್ ಎಸ್, ಜಿ.ಜಿ.ಹಂಪಣ್ಣವರ ಸೇರಿದಂತೆ ಸಿಬ್ಬಂದಿ ಎಸ್.ಎಂ.ಮುರಗೋಡ, ಆರ್.ಎಸ್.ಶೀಲಿ, ಎಸ್.ಎ.ಧಪೇದಾರ, ಎ.ಎಂ.ಚಿಕ್ಕೇರಿ, ಎನ್.ಆರ್.ಗಳಗಿ, ನಾಗರಾಜ ಕಡಗನ್ನವರ, ಎಸ್.ಎಂ.ಬೆಟಗೇರಿ ಮುಂತಾದವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಬ್ಬದಲ್ಲಿ ಡಿಜೆ ಬಳಕೆಗೆ ಅವಕಾಶವಿಲ್ಲ
ಪ್ರತಿಭಾವಂತ ಗಾಯಕರಿಗೆ ವೇದಿಕೆ ಕಲ್ಪಿಸಲು ರಾಜ್ಯಮಟ್ಟ ಕಾರ್ಯಕ್ರಮ