ಕನ್ನಡಪ್ರಭ ವಾರ್ತೆ ಮದ್ದೂರು
ಪಟ್ಟಣದ ಸರ್ಕಾರಿ ನಿವೃತ್ತ ನೌಕರರ ಸಂಘದ ಕಚೇರಿಯಲ್ಲಿ ವಾರ್ಷಿಕ ದಿನದರ್ಶಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಲವಾರು ವರ್ಷಗಳ ಕಾಲ ಜನಸೇವೆ ಮಾಡಿ ನಿವೃತ್ತರಾಗಿರುವ ತಮಗೆ ವಿಶ್ರಾಂತಿ ಜೀವನ ಅಗತ್ಯವಾಗಿದೆ. ಹೀಗಾಗಿ ಆರೋಗ್ಯದ ಕಡೆಗೆ ಹೆಚ್ಚು ಗಮನ ಹರಿಸಿ ಎಂದರು.
ನಿವೃತ್ತರಾದ ನಂತರ ತಮ್ಮ ಕರ್ತವ್ಯ ಮುಗಿಯಿತೆಂದು ಭಾವಿಸಬೇಡಿ. ದೇಹದಲ್ಲಿ ಶಕ್ತಿ ಇರುವವರೆಗೆ ಸಮಾಜ ಸೇವೆಗೆ ಹೆಚ್ಚು ಒತ್ತು ನೀಡಿ. ಬಿಡುವಿನ ಸಮಯದಲ್ಲಿ ಪುಸ್ತಕ ಮತ್ತು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಿ. ಸಂಘದಲ್ಲಿ ಗ್ರಂಥಾಲಯ ಸ್ಥಾಪನೆಗೆ ವೈಯಕ್ತಿಕವಾಗಿ ಆರ್ಥಿಕಸಹಾಯ ನೀಡುವುದಾಗಿ ಭರವಸೆ ನೀಡಿದರು.ಸಂಘಕ್ಕೆ ಹೆಚ್ಚುವರಿಯಾಗಿ ನಿವೇಶನ ದೊರಕಿಸುವಂತೆ ಮನವಿ ಸಲ್ಲಿಸಿದ್ದೀರಿ, ನಿವೇಶನ ದೊರಕಿಸುವ ಸಂಬಂಧ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಉದಯ ಆಶ್ವಾಸನೆ ನೀಡಿದರು. ಗುರುಗಳ ಮಾತಿಗೆ ಕಟ್ಟು ಬಿದ್ದು ಕಣದಿಂದ ಹಿಂದಕ್ಕೆ: ಸ್ವಾಮೀಜಿ
ಕೇಂದ್ರ ಸಚಿವ ಪ್ರಹ್ಲಾದಜೋಶಿ ಅವರಿಂದ ಹಣ ಪಡೆದು ನಾಮಪತ್ರ ಹಿಂದಕ್ಕೆ ಪಡೆದೆ ಎನ್ನುವುದು ಸತ್ಯಕ್ಕೆ ದೂರವಾದ ವಿಚಾರ. ಆ ರೀತಿ ಹೇಳಿಕೊಳ್ಳುವವರಿಗೆ ನೂರಾರು ದಾರಿಗಳಿರುತ್ತವೆ ಪ್ರತಿಕ್ರಿಯಿಸಿದರು.
ಮದ್ದೂರು ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಎಚ್.ಎಂ .ಮಲ್ಲಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಮೈಸೂರು ವಿಭಾಗದ ಉಪಾಧ್ಯಕ್ಷ ರಾದಶ್ರೀನಿವಾಸ್, ಶಶಿಧರ್, ಗೌರವಾಧ್ಯಕ್ಷ ಮುದ್ದೇಗೌಡ, ಉಪಾಧ್ಯಕ್ಷ ಪುಟ್ಟೇಗೌಡ ಕಾರ್ಯದರ್ಶಿ ಸಿದ್ದೇಗೌಡ, ಚಿಕ್ಕ ಪುಟ್ಟಯ್ಯ, ರಾಜ್ಯ ಸಂಘದ ಪ್ರತಿನಿಧಿ ಮಲ್ಲೇಶಪ್ಪ, ತಾಲೂಕು ಸರ್ಕಾರಿ ನೌಕರ ಸಂಘದ ಮಾಜಿ ಅಧ್ಯಕ್ಷ ಎಚ್.ಕೆ.ನಾರಾಯಣ ಮತ್ತಿತರರು ಭಾಗವಹಿಸಿದ್ದರು.