ಗ್ರಾಮೀಣ ರಸ್ತೆಗಳ ಸುಧಾರಣೆಗೆ ಪ್ರಾಮಾಣಿಕ ಪ್ರಯತ್ನ-ಶಾಸಕ ಲಮಾಣಿ

KannadaprabhaNewsNetwork |  
Published : Apr 18, 2025, 12:34 AM IST
ಪೋಟೋ ಇದೆ. | Kannada Prabha

ಸಾರಾಂಶ

ಕ್ಷೇತ್ರದಲ್ಲಿ ರಸ್ತೆ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಸರಕಾರ ಇದಕ್ಕಾಗಿ ವಿಶೇಷ ಅನುದಾನವನ್ನು ನೀಡುವಂತೆ ಮನವಿ ಮಾಡಿದ್ದು, ಪ್ರಮುಖ ರಸ್ತೆಗಳು ಸೇರಿದಂತೆ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಸಹ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.

ಲಕ್ಷ್ಮೇಶ್ವರ: ಕ್ಷೇತ್ರದಲ್ಲಿ ರಸ್ತೆ ಸುಧಾರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿದ್ದು, ಸರಕಾರ ಇದಕ್ಕಾಗಿ ವಿಶೇಷ ಅನುದಾನವನ್ನು ನೀಡುವಂತೆ ಮನವಿ ಮಾಡಿದ್ದು, ಪ್ರಮುಖ ರಸ್ತೆಗಳು ಸೇರಿದಂತೆ ಗ್ರಾಮೀಣ ಪ್ರದೇಶದ ರಸ್ತೆಗಳನ್ನು ಸಹ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.ಅವರು ಗುರುವಾರ ಗೊಜನೂರ ಗ್ರಾಮದಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಮತ್ತು ಶಿರಹಟ್ಟಿ ತಾಲೂಕಿನ ಕಾರವಾರ ಕೈಗಾ ಇಳಕಲ್ಲ ರಸ್ತೆ ಆಯ್ದ ಕಾಮಗಾರಿ ಸುಮಾರು ೪ ಕೋಟಿ ರು.ಗಳ ವೆಚ್ಚದಲ್ಲಿ ರಾ.ಹೆ-೦೬ ರ ಕಿ.ಮೀ. ೨೧೫.೨೦ ರಿಂದ ೨೨೧.೭೧ ಕಿ.ಮೀ. ಆಯ್ದ ಭಾಗಗಳಲ್ಲಿ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಬೇಕು, ಯಾವುದೇ ಕಾರಣಕ್ಕೂ ಕಳಪೆ ಕಾಮಗಾರಿ ನಡೆದಿರುವುದು ಕಂಡು ಬಂದಲ್ಲಿ ತಕ್ಷಣದಲ್ಲಿ ಕ್ರಮಕ್ಕೆ ಶಿಫಾರಸ್ಸು ಮಾಡುತ್ತೇನೆ, ಯಾವುದೇ ಹಂತದಲ್ಲಿಯೂ ಗುಣಮಟ್ಟದಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದು ಗುತ್ತಿಗೆದಾರರಿಗೆ ಸೂಚ್ಯವಾಗಿ ಹೇಳಿದರು. ಅಲ್ಲದೆ ಇದು ಪ್ರಮುಖ ರಸ್ತೆಯಾಗಿದ್ದು ನಿಗದಿತ ವೇಳೆಯಲ್ಲಿ ಆದಷ್ಟು ಶೀಘ್ರ ಕಾಮಗಾರಿಯನ್ನು ಮುಗಿಸಿ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸೂಚಿಸಿದರು. ಅಲ್ಲದೆ ರಸ್ತೆ ಹದಗೆಡಲು ಮರಳು, ಖಡಿ, ಎಂ.ಸ್ಯಾಂಡ್ ಇವುಗಳನ್ನು ಹೇರಿಕೊಂಡು ಬರುವ ವಾಹನಗಳು ಮೀತಿ ಮೀರಿದ ಓವರ್ ಲೋಡ್ ಮಾಡಿಕೊಂಡು ಬರುತ್ತಿರುವದು ಮುಖ್ಯ ಕಾರಣವಾಗಿವೆ ಎಂದ ಅವರು ಓವರ್ ಲೋಡ್ ಕಡಿಮೆ ಮಾಡಿಕೊಂಡು ಬರುವಂತೆ ವಾಹನ ಮಾಲೀಕರಿಗೆ ತಿಳಿಸುತ್ತೇವೆ, ಮುಂದಿನ ದಿನಗಳಲ್ಲಿ ಇದು ಮುಂದುವರೆದರೆ ಅಲ್ಲಿನ ಗ್ರಾಮಸ್ಥರು ಓವರ್‌ಲೋಡ್ ವಾಹನಗಳನ್ನು ನಿಲ್ಲಿಸುವ ಪ್ರಸಂಗ ಬರಬಹುದು ಎಂದು ಹೇಳಿದರು.ಈ ಸಂದರ್ಭದಲ್ಲಿ ಗ್ರಾ.ಪಂ.ಅಧ್ಯಕ್ಷ ಮಂಜುನಾಥ ಚಲುವಾದಿ, ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ಸಿ.ಪಿ. ಮಾಡಳ್ಳಿ, ರಮೇಶ ದನದಮನಿ, ಮಂಜುನಾಥ ಕಣವಿ, ಮುತ್ತಣ್ಣ ಶೆಟ್ರು ವಡಕಣ್ಣವರ, ಶಿವನಗೌಡ ಕಂಠಿಗೌಡರ, ನೀಲಪ್ಪ ಗುಡ್ಡಣ್ಣವರ, ಚಂದ್ರೇಗೌಡ ಪಾಟೀಲ, ನಿಂಗನಗೌಡ ಪಾಟೀಲ, ಹನಮಂತಪ್ಪ ಮಾದರ, ಮಹೇಶ ಅಥಣಿ, ಭೀಮಪ್ಪ ನಾಯಕ್, ದ್ಯಾಮಣ್ಣ ಅಡರಕಟ್ಟಿ, ಪಿಡಿಓ ಶಿವಾನಂದ ಮಾಳವಾಡ, ಗಂಗಾಧರ ಮೆಣಸಿನಕಾಯಿ, ಜಾನು ಲಮಾಣಿ, ಹನುಮಂತೇಗೌಡ ಪಾಟೀಲ, ನಿಂಗನಗೌಡ ಕಣಿವಿ, ಶಂಬು ಪಾಟೀಲ, ಮಾಬುಸಾಬ ಆನಿ, ರಾಕೇಶ ಪುರದ, ನೀಲಪ್ಪಗೌಡ ಪಾಟೀಲ್, ಪಂಚಾಕ್ಷರ ಸವಣೂರು ಗುತ್ತಿಗೆದಾರರು ಮತ್ತಿತರರಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ರಮೇಶ ದನದಮನಿ, ಸಿ.ಪಿ. ಮಾಡಳ್ಳಿ ಮುತ್ತಣ್ಣ ವಡ್ಕಣ್ಣವರ್, ಸಿ.ಡಿ. ಪಾಟೀಲ್ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''