ಕನ್ನಡಪ್ರಭ ವಾರ್ತೆ ಬೇಲೂರು,
ಈ ವೇಳೆ ಮಾತನಾಡಿದ ಶಾಸಕ ಎಚ್ ಕೆ ಸುರೇಶ್, ಪೆಹಲ್ಗಾಮ್‌ನಲ್ಲಿ ಸುಮಾರು ೨೮ ಜನ ಪ್ರವಾಸಿಗರನ್ನು ಉಗ್ರಗಾಮಿಗಳು ಧರ್ಮದ ಹೆಸರಿನಲ್ಲಿ ಹಣೆಗೆ ಗುಂಡಿಟ್ಟು ಕೊಂದಿದ್ದು, ಇದಕ್ಕೆ ಪ್ರತಿಯಾಗಿ ಪ್ರತಿಕಾರ ತೀರಿಸಲು "ಆಪರೇಷನ್ ಸಿಂದೂರ "ದ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ತಕ್ಕ ಉತ್ತರವನ್ನು ಭಾರತ ನೀಡಿದೆ.ಹೆಣ್ಣುಮಕ್ಕಳ ಹಣೆಯ ಮೇಲೆ ಸಿಂದೂರ ಎನ್ನುವುದು ಹಿಂದೂ ಸಂಸ್ಕೃತಿಯಲ್ಲಿ ಪ್ರಮುಖವಾಗಿದೆ. ಈ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಸಂಕಲ್ಪದಿಂದ ನಮ್ಮ ಹೆಣ್ಣುಮಕ್ಕಳ ಮಾತೆಯರ ಸಿಂದೂರ ಅಳಿಸಿದ್ದಕ್ಕೆ ಸರಿಯಾದ ಪ್ರತೀಕಾರ ತೀರಿಸಿಕೊಂಡಿದ್ದಾರೆ. ನಮ್ಮ ದೇಶದಲ್ಲಿ ಶಾಂತಿಗೆ ಮೊದಲು ಪ್ರಾಮುಖ್ಯತೆ ಕೊಡುತ್ತೇವೆ. ಆದರೆ ನಮ್ಮ ತಂಟೆಗೆ ಬಂದರೆ ಮಾತ್ರ ಯಾರನ್ನೂ ಸುಮ್ಮ ನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಇದು ನರೇಂದ್ರ ಮೋದಿಯವರ ಆತ್ಮಸ್ಥೈರ್ಯ ಹೆಚ್ಚಿಸಿದೆ. ಅದೇ ರೀತಿಯಾಗಿ ನಮ್ಮ ಸೈನಿಕರಿಗೆ ಸ್ಫೂರ್ತಿ ಹಾಗೂ ಭಗವಂತನ ಆಶೀರ್ವಾದ ಇರಲಿ ಎಂದು ಬೇಲೂರು ತಾಲೂಕಿನ ಜನರು ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಭಾರತಾಂಬೆ ಮಕ್ಕಳಿಗೆ ಸಿಂದೂರಕ್ಕೆ ಮತ್ತೊಂದು ವಿಜಯದ ತಿಲಕವನ್ನು ಪ್ರಧಾನಿ ಮೋದಿ ಅರ್ಪಿಸಿದ್ದಾರೆ ಎಂದರು.
ಬಿಜೆಪಿ ಮಂಡಲದ ಅಧ್ಯಕ್ಷ ಕೌರಿ ಸಂಜು ಮಾತನಾಡಿ, ಭಾರತದ ಮಕ್ಕಳನ್ನು ಕೆಣಕಿದರೆ ಏನಾಗುತ್ತದೆ ಎಂದು ಪಾಪಿ ಪಾಕಿಸ್ತಾನಕ್ಕೆ ನಮ್ಮ ಸೈನಿಕರು ತಕ್ಕ ಉತ್ತರ ನೀಡಿದ್ದು ನರಹೇಡಿಗಳಂತೆ ಬಂದು ಪ್ರವಾಸಿಗರನ್ನು ಹತ್ಯೆ ಮಾಡಿ ಆ ಹೆಣ್ಣುಮಕ್ಕಳ ಕಣ್ಣೀರಿನ ಸಿಂದೂರ ಅಳಿಸಿದ್ದಕ್ಕೆ ನಮ್ಮ ದೇಶದ ಪ್ರಧಾನಿ ಆ ಸಿಂದೂರ ಹೆಸರಿನಲ್ಲಿ ತಕ್ಕ ಶಾಸ್ತಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಇದೇ ರೀತಿ ನರಿ ಬುದ್ಧಿ ತೋರಿಸಿದರೆ ಭೂಪಟದಲ್ಲಿ ನಿಮ್ಮ ಹೆಸರಿರದಂತೆ ಅಳಿಸಿ ಹಾಕುವ ಕೆಲಸ ಮಾಡುವುದರಲ್ಲಿ ಸಂಶಯವಿಲ್ಲ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಜಿ ಕೆ ಕುಮಾರ್, ನಗರಾಧ್ಯಕ್ಷ ವಿನಯ್, ಆಟೋ ಚಾಲಕರ ಸಂಘದ ಅಧ್ಯಕ್ಷ ದೀಪು, ರವೀಶ್, ಬಜರಂಗದಳದ ಸಂಚಾಲಕ ಗುಂಡ (ನಾಗೇಶ್), ರೋಟರಿ ಕ್ಲಬ್ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಕೋಟೆ ಶ್ರೀನಿವಾಸ್, ವೆಂಕಟೇಶ್, ಮಂಜುನಾಥ್ , ರಾಘ, ಭರತ್, ಪೂರ್ಣೇಶ್ ಸೇರಿದಂತೆ ಇತರರು ಹಾಜರಿದ್ದರು.ಹೇಳಿಕೆ- 1
ಪೆಹಲ್ಗಾಮ್‌ನಲ್ಲಿ ಸುಮಾರು ೨೮ ಜನ ಪ್ರವಾಸಿಗರನ್ನು ಉಗ್ರಗಾಮಿಗಳು ಧರ್ಮದ ಹೆಸರಿನಲ್ಲಿ ಹಣೆಗೆ ಗುಂಡಿಟ್ಟು ಕೊಂದಿದ್ದು, ಇದಕ್ಕೆ ಪ್ರತಿಯಾಗಿ ಪ್ರತೀಕಾರ ತೀರಿಸಲು "ಆಪರೇಷನ್ ಸಿಂದೂರ "ದ ಮೂಲಕ ಪಾಕಿಸ್ತಾನದ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿ ಭಾರತ ತಕ್ಕ ಉತ್ತರವನ್ನು ನೀಡಿದೆ.- ಎಚ್. ಕೆ. ಸುರೇಶ್, ಶಾಸಕಮುಖ್ಯಾಂಶಗಳು:
* "ರಾಷ್ಟ್ರ ರಕ್ಷಣೆಗಾಗಿ ನಾವೆಲ್ಲರೂ " ಎಂಬ ಘೋಷವಾಕ್ಯದಡಿ ತಿರಂಗಾ ಯಾತ್ರೆ* ಚನ್ನಕೇಶವಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಸವೇಶ್ವರ ವೃತ್ತದವರೆಗೂ ಯಾತ್ರೆ
* ಬೇಲೂರು ತಾಲೂಕಿನ ಜನರಿಂದ ದೇವಾಲಯಗಳಲ್ಲಿ ವಿಶೇಷ ಪೂಜೆ