ಚಂದ್ರು ಕೊಂಚಿಗೇರಿ
ಬರದ ನಾಡಿನ ರೈತರ ಜೀವನಾಡಿಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಕೆರೆ ತುಂಬಿಸುವ ಯೋಜನೆ, ಮಾಲ್ವಿ ಜಲಾಶಯಕ್ಕೆ ನೀರೆತ್ತುವ ಘಟಕ, ಕೂಡ್ಲಿಗಿ ಕೆರೆ ತುಂಬಿಸುವ ಯೋಜನೆ, ಜತೆಗೆ ಎಡ ಮತ್ತು ಬಲ ದಂಡೆಯ ಭಾಗಗಳ ಕಾಲುವೆಗಳಿಗೆ ನೀರು ಹರಿಸುವ ಉದ್ದೇಶದಿಂದ ಎರಡೂ ಭಾಗಗಳ ಮೋಟಾರ್ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಆಗಷ್ಟ್-2023ರಿಂದ ಏಪ್ರಿಲ್-2026ರ ವರೆಗೂ ವಿದ್ಯುತ್ ಬಿಲ್ ಬಾಕಿ ಇದೆ.
ಬಲದಂಡೆ ₹87 ಕೋಟಿ ಬಾಕಿಯೋಜನೆಯ ಬಲದಂಡೆ ಭಾಗದಲ್ಲಿನ ಕಲಿಕೇರಿ ಘಟಕ ₹378407854, ತುರ್ಚಿಹಾಳು ಘಟಕ ₹127549932, ರಾಜವಾಳ ಘಟಕ ₹89425726, ಗೂಜನೂರು ಘಟಕ ₹70326328, ಶಾಕಾರ ಘಟಕ ₹14691067, ಮಾಗಳ ಘಟಕ ₹89640182, ಹುಗಲೂರು ಘಟಕ ₹8538984, ಮಾಲ್ವಿ ಘಟಕ ₹59356316, ಪಾಲಯ್ಯನಕೋಟೆ ಘಟಕ ₹11453052, ರಾಜವಾಳ ಘಟಕ ₹24935089 ಸೇರಿದಂತೆ ಒಟ್ಟು ₹874324530 ಬಾಕಿ ಇದೆ.
ಯೋಜನೆಯ ಎಡದಂಡೆ ಭಾಗದಲ್ಲಿರುವ ಮುಂಡರಗಿ, ಗದಗ, ಕಲಿಕೇರಿ, ಹಿರೇವಡ್ಡಟ್ಟಿ, ವಿರೂಪಾಪುರ, ಮುಷ್ಠಿಕೊಪ್ಪ ಹಾಗೂ ಡಂಬಳ ನೀರೆತ್ತುವ ಘಟಕಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದು, ಒಟ್ಟು ₹296541277 ಕೋಟಿ ಸೇರಿದಂತೆ ಒಟ್ಟಾರೆ ₹1170865807 ವಿದ್ಯುತ್ ಬಾಕಿ ಇದೆ. ಬಿಲ್ ಪಾವತಿ ಮಾಡಲು ರಾಜ್ಯ ಸರ್ಕಾರ ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್)ಕ್ಕೆ ಹಣ ಬಿಡುಗಡೆ ಮಾಡಬೇಕಿದೆ.
ಈಗಾಗಲೇ ಜೆಸ್ಕಾಂ ಮತ್ತು ಹೆಸ್ಕಾಂ ಅಧಿಕಾರಿಗಳು, ಸಿಂಗಟಾಲೂರು ಏತ ನೀರಾವರಿ ಯೋಜನೆಯ, ಪೂರ್ಣ ವಿದ್ಯುತ್ ಬಿಲ್ ಪಾವತಿ ಮಾಡಲು ವಿಳಂಬ ಮಾಡಿದ, ಕಡ್ಡಾಯವಾಗಿ ವಿದ್ಯುತ್ ಕಡಿತ ಮಾಡುತ್ತೇವೆ ಎಂದು ಅಂತಿಮ ಎಚ್ಚರಿಕೆ ನೀಡಿದ್ದಾರೆ.