ಏಕವಿನ್ಯಾಸ ನಕ್ಷೆ ದರ ದುಪ್ಪಟ್ಟು: ಮಣಿರಾಜ ಶೆಟ್ಟಿ

KannadaprabhaNewsNetwork |  
Published : Feb 02, 2025, 11:47 PM IST
ಬೈಲೂರು ಮಹಿಷ ಮರ್ದಿನಿ ಸಭಾಭವನದಲ್ಲಿ ನಡೆದ ಬೈಲೂರು ಮಹಾಶಕ್ತಿ ಕೇಂದ್ರದ ಭೂತ್ ಅಧ್ಯಕ್ಷರು-ಜನಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಅವರು ಮಾತನಾಡಿದರು | Kannada Prabha

ಸಾರಾಂಶ

ಕಾಂಗ್ರೆಸ್‌ ಆಡಳಿತದಲ್ಲಿ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ತೀರಾ ತೊಂದರೆಯಾಗುತ್ತಿದ್ದು ಅಭಿವೃದ್ಧಿ ಶೂನ್ಯವಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇರುವಾಗ ಲೆಕ್ಕವಿಲ್ಲದಷ್ಟು ರಸ್ತೆಗಳು, ಸೇತುವೆಗಳು ಮಂಜೂರಾಗಿದ್ದು ಈ ಬಾರಿ ಕನಿಷ್ಠ ತೀರಾ ಅಗತ್ಯದ ಕೆಲಸಗಳಿಗೂ ಅನುದಾನ ದೊರೆಯುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್‌ನ ಕೆಲವು ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರವು ಅಧಿಕಾರಿಗಳ ಜನರನ್ನು ಸುಲಿಗೆ ಮಾಡುತ್ತಿದೆ. ಇದೊಂದು ಪಿಕ್‌ಪಾಕೆಟ್ ಸರಕಾರ ಎಂಬುದಾಗಿ ಸಾಬೀತಾಗಿದೆ ಎಂದು ಬಿ. ಮಣಿರಾಜ ಶೆಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾರ್ಕಳ

ಈ ಹಿಂದೆ ಕಾರ್ಕಳದ ಜನರಿಗೆ ಏಕ ವಿನ್ಯಾಸನಕ್ಷೆಗೆ ಪಂಚಾಯಿತಿಯಲ್ಲಿ 2000 ರುಪಾಯಿಗೆ ಆಗುತ್ತಿದ್ದ ಕೆಲಸ ಇದೀಗ ಕಾಪು ಪ್ರಾಧಿಕಾರಕ್ಕೆ ಹೋಗಿ 20,000 ರು. ಖರ್ಚು ಮಾಡುವ ಹಾಗೆ ಆಗಿದೆ. ಮನೆ ಕಟ್ಟುವವರು ಹತ್ತಾರು ಬಾರಿ ಕಾಪು ಪ್ರಾಧಿಕಾರಕ್ಕೆ ಅಲೆದಾಡುವ ಪರಿಸ್ಥಿತಿ ಬಂದರೂ ಪರವಾನಗಿ ಸಿಗುತ್ತಿಲ್ಲ. ಇದರಿಂದ ಜನರಿಗಾಗುವ ಸಮಸ್ಯೆಗಳ ಕುರಿತು ದಿನಪತ್ರಿಕೆಗಳು ಸಮಗ್ರವಾಗಿ ವರದಿ ಮಾಡಿವೆ ಎಂದು ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ನಿಕಟಪೂರ್ವ ಅಧ್ಯಕ್ಷ ಬಿ. ಮಣಿರಾಜ ಶೆಟ್ಟಿ ಹೇಳಿದರು.

ಬೈಲೂರು ಮಹಿಷಮರ್ಧಿನಿ ಸಭಾಭವನದಲ್ಲಿ ನಡೆದ ಬೈಲೂರು ಮಹಾಶಕ್ತಿ ಕೇಂದ್ರದ ಭೂತ್ ಅಧ್ಯಕ್ಷರು- ಜನಪ್ರತಿನಿಧಿಗಳು ಮತ್ತು ಪಕ್ಷದ ಪ್ರಮುಖರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಆಡಳಿತದಲ್ಲಿ ಜನಸಾಮಾನ್ಯರ ದೈನಂದಿನ ಚಟುವಟಿಕೆಗಳಿಗೆ ತೀರಾ ತೊಂದರೆಯಾಗುತ್ತಿದ್ದು ಅಭಿವೃದ್ಧಿ ಶೂನ್ಯವಾಗಿದೆ. ಹಿಂದೆ ಬಿಜೆಪಿ ಸರ್ಕಾರ ಇರುವಾಗ ಲೆಕ್ಕವಿಲ್ಲದಷ್ಟು ರಸ್ತೆಗಳು, ಸೇತುವೆಗಳು ಮಂಜೂರಾಗಿದ್ದು ಈ ಬಾರಿ ಕನಿಷ್ಠ ತೀರಾ ಅಗತ್ಯದ ಕೆಲಸಗಳಿಗೂ ಅನುದಾನ ದೊರೆಯುತ್ತಿಲ್ಲ. ಈ ಬಗ್ಗೆ ಕಾಂಗ್ರೆಸ್‌ನ ಕೆಲವು ಶಾಸಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಕಾರವು ಅಧಿಕಾರಿಗಳ ಜನರನ್ನು ಸುಲಿಗೆ ಮಾಡುತ್ತಿದೆ. ಇದೊಂದು ಪಿಕ್‌ಪಾಕೆಟ್ ಸರಕಾರ ಎಂಬುದಾಗಿ ಸಾಬೀತಾಗಿದೆ ಎಂದು ಕಾಂಗ್ರೆಸ್ ಸರಕಾರವನ್ನು ಟೀಕಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಶಾಸಕ ವಿ. ಸುನಿಲ್‌ ಕುಮಾರ್‌, ಕ್ಷೇತ್ರ ಅದ್ಯಕ್ಷ ನವೀನ್ ನಾಯಕ್, ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಬೋಳ ಸತೀಶ್‌ ಪೂಜಾರಿ, ಶಕ್ತಿಕೇಂದ್ರ ಅಧ್ಯಕ್ಷ ಸಂದೀಪ್‌ ಅಮೀನ್‌ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮರೋಪಾದಿಯಲ್ಲಿ ವಿಜಯೇಂದ್ರ ಪಕ್ಷ ಸಂಘಟನೆ
ಜಿ ರಾಮ್ ಜಿ ಪರ 15ರಿಂದ ಅಭಿಯಾನ: ವಿಜಯೇಂದ್ರ